Emraan Hashmi birthday ಪತಿ ಕಿಸ್ಸಿಂಗ್ ಸೀನ್ ನೋಡಲಾಗದೆ ಚಿತ್ರಮಂದಿರದಿಂದ ಹೊರ ನಡೆದ ಪರ್ವೀನ್!
19 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಇಮ್ರಾನ್ ಹಶ್ಮಿ 43ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಮಯದಲ್ಲಿ ಅವರ ಜೀವನದ ಮರೆಯಲಾಗದ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ರೊಮ್ಯಾಂಟಿಕ್ ಮ್ಯಾನ್, ಹ್ಯಾಂಡ್ಸಮ್ ಇಮ್ರಾನ್ ಹಶ್ಮಿ ಇಂದು 43ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಪ್ಯಾಪರಾಜಿಗಳ ಕಣ್ಣಿಂದ ಸದಾ ದೂರ ಉಳಿಯುವ ನಟ ಇಮ್ರಾನ್ ಹಲವು ವರ್ಷಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಪತ್ನಿ ಇರಿಸು ಮುರಿಸು ಮಾಡಿಕೊಂಡ ಘಟನೆ ಬಗ್ಗೆ ರಿವೀಲ್ ಮಾಡಿದ್ದಾರೆ. ಹೆಂಡ್ತಿ ಮನೆಗೆ ಹೋಗಿ ತುಂಬಾನೇ ಕೋಪ ಮಾಡಿಕೊಂಡಳು ಆಕೆಗೆ ನಾನು ಸಿನಿಮಾದಲ್ಲಿ ಕಿಸ್ ಮಾಡ್ತೀನಿ ಅಂತ ಗೊತ್ತಿಲ್ಲ ಎಂದಿದ್ದಾರೆ.
ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹಾರ್ ನಡೆಸುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಭಾಗಿಯಾಗಿದ್ದರು. ತಮ್ಮ ರೊಮ್ಯಾಂಟಿಕ್ ಮತ್ತು ಕಿಸಿಂಗ್ ದೃಶ್ಯಗಳನ್ನು ನೋಡಿದಾಗ ಪತ್ನಿ ಮತ್ತು ಕುಟುಂಬ ಹೇಗೆ ರಿಯಾಕ್ಟ್ ಮಾಡುತ್ತಾರೆಂದು ಪ್ರಶ್ನೆ ಮಾಡಲಾಗಿತ್ತು. '2014ರಲ್ಲಿ ನಾನು ಸಿನಿಮಾ ನೋಡಲು ಹೋಗೋಣ ಎಂದು ಪರ್ವೀನ್‌ಗೆ ಹೇಳಿದೆ. ಇಬ್ಬರು ಫುಲ್ ರೆಡಿಯಾಗಿ ಚಿತ್ರಮಂದಿರಕ್ಕೆ ಹೋದ್ವಿ. ಸಿನಿಮಾದಲ್ಲಿ ಪರ್ವೀನ್ ಒಂದು ದೃಶ್ಯ ನೋಡಿ ತುಂಬಾನೇ ಕೋಪ ಮಾಡಿಕೊಂಡರು. ಅಕ್ಕಪಕ್ಕ ಯಾರಿಗೂ ಕೇರ್ ಮಾಡದೆ ನನ್ನ ಮೇಲೆ ಕೋಪ ಮಾಡಿಕೊಂಡಳು' ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ.
'ನಾವಿಬ್ಬರೂ ಹೋಗಿದ್ದು ನನ್ನ ಮೋಸ್ಟ್ ರೊಮ್ಯಾಂಟಿಕ್ ಸಿನಿಮಾಗೆ. ನನ್ನ ಪತ್ನಿ ಪರ್ವೀನ್‌ಗೆ ಗೊತ್ತಿಲ್ಲ ನಾನು ಇಷ್ಟೊಂದು ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡ್ತೀನಿ ಅಂತ. ಸಿನಿಮಾದಲ್ಲಿ ಅನೇಕ ನಟಿಯರ ಜೊತೆ ರೊಮ್ಯಾನ್ಸ್ ಮಾಡಿದ್ದೀನಿ. ತುಂಬಾನೇ intimate ಆಗಿ ಕಿಸ್ ಮಾಡಿರುವುದನ್ನು ಪರ್ವೀನ್ ಗಮನಿಸಿ ಕೋಪ ಮಾಡಿಕೊಂಡಳು. ಅಂದು ನಾವಿಬ್ಬರು ಮೊದಲ ಸಾಲಿನಲ್ಲಿರುವ ಸೀಟ್ ಆಯ್ಕೆ ಮಾಡಿಕೊಂಡೆವು. ಪರ್ವೀಸ್ ಕೋಪ ಮಾಡಿಕೊಂಡು ನನ್ನ ಮೇಲೆ ರೇಗಾಡಿದರು. ನೀನು ಸಿನಿಮಾದಲ್ಲಿ ಈ ರೀತಿ ಅಭಿನಯಿಸಿ ನನಗೆ ಹೇಳಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದಲು' ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ.
ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಹಿಂದಿಯಲ್ಲಿ, ಅಕ್ಷಯ್, ಇಮ್ರಾನ್ ಸಿನಿಮಾ'ಪರ್ವೀನ್ ನನ್ನ ಮೇಲೆ ಎಷ್ಟು ಕೋಪ ಮಾಡಿಕೊಂಡಿದರು ಅಂದ್ರೆ ರಕ್ತ ಕುದಿಯುತ್ತಿತ್ತು. ಆಕೆಯ ಕೋಪಕ್ಕೆ ನಾನು ಗುರಿಯಾಗಿರುವೆ. ನಾನು ಬೇರೆಯವರೊಂದಿಗೆ ರೊಮ್ಯಾನ್ಸ್ ಮಾಡುವುದು ಅಕೆಗೆ ಇಷ್ಟವಿಲ್ಲ. ಈಗಲೂ ಆಕೆ ನನ್ನ ಕೆಲಸವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಇಬ್ಬರ ನಡುವೆ ಒಂದು ಒಪ್ಪಂದ ನಡೆದಿದೆ. ಸಿನಿಮಾಗಳಲ್ಲಿ ಇಮ್ರಾನ್ ಹಶ್ಮಿ ರೊಮ್ಯಾಂಟಿಕ್ ಸೀನ್ ಮಾಡಬೇಕು ಅಂದ್ರೆ ಹಿಂದಿನ ದಿನ ಪತ್ನಿ ಮತ್ತು ಮಗನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಬೇಕು' ಎಂದು ನಗು ನಗುತ್ತ ಹೇಳಿದ್ದಾರೆ.
ಇಮ್ರಾನ್ ಹಶ್ಮಿ ಹಣ ಸಂಪಾದಿಸಲು ಸಿನಿಮಾ ಮಾಡೋಲ್ವಂತೆ!ಇಮ್ರಾನ್ ಹಶ್ಮಿ ಮತ್ತು ಗರ್ಲ್‌ಫ್ರೆಂಡ್ ಪರ್ವೀನ್ 2006ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪರ್ವೀನ್ ಸಿಂಧಿ ಕುಟುಂಬದ ಹುಡುಗಿ ಆಗಿದ್ದು ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಮದುವೆಯಾಗಿ ನಾಲ್ಕು ವರ್ಷಕ್ಕೆ ಮುದ್ದಾದ ಗಂಡು ಮಗನನ್ನು ಬರ ಮಾಡಿಕೊಂಡರು. ಅತಿ ಚಿಕ್ಕ ವಯಸ್ಸಿಗೆ ಇಮ್ರಾನ್ ಹಶ್ಮಿ ಪುತ್ರ ಅಯಾನ್‌ಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು, ಸರಿಯಾದ ಸಮಯಕ್ಕೆ ಚಿಕಿತ್ಸೆ ಶುರು ಮಾಡಿ ಈಗ ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಇಮ್ರಾನ್ ಹಶ್ಮಿ ಮತ್ತು ಮಹೇಶ್ ಭಟ್ ಸಂಬಂಧಿಕರು ಎಂದು ಹಲವರಿಗೆ ಗೊತ್ತಿಲ್ಲ. ಮಹೇಶ್ ಭಟ್ ಅವರು ಅಂಟಿ ಪೂರ್ಣಿಮಾ ಇಮ್ರಾನ್ ಹಶ್ಮಿ ಅವರ ಅಜ್ಜಿ. ಆಲಿಯಾ ಭಟ್ ಮತ್ತು ಇಮ್ರಾನ್ ಹಶ್ಮಿ ಅಣ್ಣ ತಂಗಿ ರೀತಿ. ಹೀಗಾಗಿ Raaz ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಸಿನಿಮಾದಲ್ಲಿ ಇಮ್ರಾನ್ ನಟಿಸಿದ್ದಾರೆ. ಶೀಘ್ರದಲ್ಲಿ ಸಲ್ಮಾನ್ ಖಾನ್ ಜೊತೆ ಟೈಗರ್ 3 ಮತ್ತು ಅಕ್ಷಯ್ ಕುಮಾರ್ ಜೊತೆ ಸೆಲ್ಫಿ ಸಿನಿಮಾದಲ್ಲಿ ನಟಿಸಲಿದ್ದಾರೆ.