ನಟನೆಗೆ ಬಾಯ್ ಬಾಯ್ ಹೇಳಿದ ಹ್ಯಾರಿ ಪಾಟರ್ ಚೆಲುವೆ ಎಮ್ಮ ವಾಟ್ಸನ್
ಹ್ಯಾರಿ ಪಾಟರ್ ಸಿನಿಮಾ ನೋಡಿದ ಯಾರಿಗೂ ಈ ಮುದ್ದು ಮುಖದ ಬಾಲೆಯನ್ನು ಮರೆಯೋಕೆ ಸಾಧ್ಯವಿಲ್ಲ. ಎಮ್ಮ ವಾಟ್ಸನ್ ಆಗಲೂ ಈಗಲೂ ಅಷ್ಟೇ ಕ್ಯೂಟ್. ಆದ್ರೆ ಈಗ ನಟಿ ಸಿನಿಮಾಗೆ ಬಾಯ್ ಬಾಯ್ ಹೇಳೋಕೆ ನಿರ್ಧರಿಸಿದ್ದಾರೆ. ಕಾರಣ ಏನು..?
ಹ್ಯಾರಿ ಪಾಟರ್ ಖ್ಯಾತಿಯ ನಟಿ ಎಮ್ಮ ವಾಟ್ಸನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ.
ಸಿನಿಮಾ ಇಂಡಸ್ಟ್ರಿಯಿಂದ ನಿವೃತ್ತಿಯಾಗುವ ಬಗ್ಗೆ ಮಾತನಾಡಿದ ನಟಿ ಸದ್ಯ ಎಲ್ಲೆಡೆ ವೈರಲ್ ಆಗಿದ್ದಾರೆ.
ಎಮ್ಮ ಆಕೆಯ ಬಾಯ್ಫ್ರೆಂಡ್ ಲಿಯೋ ರೊಬಿಂಟನ್ ಜೊತೆ ಸಮಯ ಕಳೆಯಲು ಇಚ್ಛಿಸುತ್ತಿದ್ದಾರೆ ಎನ್ನಲಾಗಿದೆ.
ಎಮ್ಮ ಮತ್ತು ಲಿಯೋ ಕಳೆದ 18 ತಿಂಗಳಿಂದ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ರೂಮರ್ಡ್ ಕಪಲ್ಸ್ ಎಮ್ಮ ಮತ್ತು ಲಿಯೋ ತಮ್ಮ ರಿಲೇಷನ್ಶಿಪ್ ಅಫೀಶಿಯಲ್ ಮಾಡಿದ್ದಾರೆ.
ವಾಟ್ಸನ್ ಲಿಯೋಗೆ ಕಿಸ್ ಮಾಡುವ ಫೋಟೋ ವೈರಲ್ ಆದ ಬೆನ್ನಲ್ಲೇ ಲಿಯೋ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಲಿಯೋ ರಾಬಿಂಟನ್ ಒಬ್ಬ ಉದ್ಯಮಿ ಎನ್ನಲಾಗಿದೆ.
ತಮ್ಮ ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಈ ಜೋಡಿ ಮೊದಲ ಬಾರಿ ಭೇಟಿಯಾಗಿದ್ದರು.
ನಟಿ ನಟನೆಗೆ ಬಾಯ್ ಹೇಳಿದ್ದು ತಿಳಿಯುತ್ತಲೇ ಬಹಳಷ್ಟು ಜನ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಎಮ್ಮ ಅವರ ಪಾತ್ರಗಳು ಐಕಾನಿಕ್. ಆಕೆಯ ಈ ಕೆಲವು ಮರೆಯಲಾಗದ ಪಾತ್ರಗಳನ್ನು ಬಿಟ್ಟು ಹೋಗಿದ್ದಕ್ಕೆ ಅಭಿನಂದನೆ ಎಂದು ಫ್ಯಾನ್ಸ್ ಬರೆದಿದ್ದಾರೆ.
ಎಮ್ಮ 2019ರಲ್ಲಿ ಲಿಟಲ್ ವುಮನ್ ಸಿನಿಮಾದಲ್ಲಿ ಕೊನೆಯಬಾರಿ ಕಾಣಿಸಿಕೊಂಡಿದ್ದರು.
ಎಮ್ಮ ಹರ್ಮೋಯಿನ್ ಗ್ರಾಂಗರ್ ಆಗಿ ನನ್ನ ಮನಸಿನಲ್ಲಿ ವಿಶೇಷ ಸ್ಥಾನದಲ್ಲಿರುತ್ತಾಳೆ ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಹ್ಯಾರಿ ಪಾಟರ್ ಸಿರೀಸ್ ಸಿನಿಮಾಗಳಲ್ಲಿ ಜನರು ಇಂದಿಗೂ ಎಮ್ಮಾಳನ್ನು ಇಷ್ಟಪಡುತ್ತಾರೆ.
ಆದರೆ ಈಗ ನಟಿಯ ನಿವೃತ್ತಿ ಸುದ್ದು ಕೇಳುತ್ತಲೇ ನೆಟ್ಟಿಗರು ಬೇಜಾರಾಗಿದ್ದಾರೆ.