Asianet Suvarna News Asianet Suvarna News

ನೀವು ನನಗೆ ನನ್ನ ತಂದೆಯನ್ನು ನೆನಪಿಸಿದ್ರಿ: ಸೋನು ಬಗ್ಗೆ ಐಶ್ ಹೇಳಿದ್ದಿಷ್ಟು

  • ಸಿನಿಪ್ರಿಯರ ನೆಚ್ಚಿನ ಸಿನಿಮಾ ಜೋಧಾ ಅಕ್ಬರ್..!
  • ಅಂದೂ ಇಂದೂ ಜನರ ಫೇವರೇಟ್ ಆಗಿರೋ ಸಿನಿಮಾದಲ್ಲಿ ಮನಮುಟ್ಟುವ ಅಣ್ಣ-ತಂಗಿ ಕಹಾನಿ
  • ಹಿಟ್ ಆಗಿತ್ತು ಸೋನು ಸೂದ್-ಐಶ್ ಸಹೋದರ ಸಂಬಂಧ
When Aishwarya Rai told Sonu Sood during Jodhaa Akbar scene You remind me of my pa dpl
Author
Bangalore, First Published Jul 30, 2021, 10:55 AM IST
  • Facebook
  • Twitter
  • Whatsapp

ಹೀರೋ ಸೋನು ಸೂದ್ ಇಂದು ಬರ್ತ್ಡೇ ಆಚರಿಸುತ್ತಿದ್ದಾರೆ. ಆಫ್‌ಸ್ಕ್ರೀನ್ ಹೀರೋಗೆ 48 ವರ್ಷ ತುಂಬಿದೆ. ನಟನಿಗೆ ಆನ್‌ಸ್ಕ್ರೀನ್‌ನಿಂದ ಸಿಕ್ಕಿದ ತಂಗಿ ಯಾರು ಗೊತ್ತಾ ?

ಸೋನು ಸೂದ್ ಅವರು ಬಚ್ಚನ್ ಕುಟುಂಬದೊಂದಿಗೆ ಅಂದರೆ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 2013 ರಲ್ಲಿ ಸಂದರ್ಶನವೊಂದರಲ್ಲಿ ಅವರು ಪ್ರತಿಯೊಬ್ಬರೊಂದಿಗೆ ಚಿತ್ರೀಕರಣದ ಅನುಭವದ ಬಗ್ಗೆ ಮಾತನಾಡಿದ್ದರು.

When Aishwarya Rai told Sonu Sood during Jodhaa Akbar scene You remind me of my pa dpl

ಅದೇ ಸಂದರ್ಭ ಸೋನು ಅವರ ನೆಚ್ಚಿನ ಸಹನಟ ಯಾರು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ. ಅಮಿತಾಬ್ ಪೂರ್ವಾಭ್ಯಾಸ ಮಾಡುತ್ತಿದ್ದರು. ಐಶ್ವರ್ಯ ರಿಸರ್ವ್ಡ್. ಅಭಿಷೇಕ್ ಜೊತೆ ನೀವು ನೋಡಿದ್ದು ಪಡೆಯುತ್ತೀರಿ, ಅಂತಹಾ ಗುಣ ಎಂದಿದ್ದಾರೆ.

ರಾಜಕೀಯಕ್ಕೆ ಬರ್ತಾರಾ ನಟ ಸೋನು ಸೂದ್?

ತನ್ನ ನೆಚ್ಚಿನ ಸಹನಟನ ಬಗ್ಗೆ ಕೇಳಿದಾಗ ಸೋನು ಬಚ್ಚನ್ ಜೊತೆ ಕೆಲಸ ಮಾಡುವುದನ್ನು ತುಂಬಾ ಎಂಜಾಯ್ ಮಾಡಿದೆ. ಅವರು ನನ್ನ ತಂದೆಯಾಗಿ ನಟಿಸಿದ್ದರು. ಅಭಿಷೇಕ್ ನನ್ನ ಸಹೋದರ ಮತ್ತು ಜೋಧಾ ಅಕ್ಬರ್‌ನಲ್ಲಿ ನನ್ನ ಸಹೋದರಿ ಐಶ್ವರ್ಯ ಪಾತ್ರದಲ್ಲಿದ್ದಾರೆ. ಬಚ್ಚನ್ ಅವರನ್ನು ನನ್ನ ಮೊದಲ ದೃಶ್ಯದಲ್ಲಿ ನಾನು ತಳ್ಳಬೇಕಾಗಿತ್ತು. ನಾನು ಗೌರವಿಸುತ್ತಾ ಬೆಳೆದ  ವ್ಯಕ್ತಿಗೆ ನಾನು ಇದನ್ನು ಹೇಗೆ ಮಾಡಲಿ ಎಂದು ನಿರ್ದೇಶಕರನ್ನು ಪ್ರಶ್ನಿಸಿದ್ದರು ಸೋನು.

ರಿಯಲ್ ಹೀರೋ ಸೋನು ಸೂದ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ನ್ಯೂಸ್

ಐಶ್ವರ್ಯ ಅವರು ಆರಂಭದಲ್ಲಿ ರಿಸರ್ವ್ಡ್ ಅನಿಸಿತ್ತು. ಆದರೆ ಜೋಧಾ ಅಕ್ಬರ್‌ನಲ್ಲಿ ಒಂದು ದೃಶ್ಯವನ್ನು ಮಾಡುವಾಗ ಅವರು ಮನಬಿಚ್ಚಿ ಮಾತನಾಡಿದರು. ನೀನು ನನ್ನ ತಂದೆಯನ್ನು ನೆನಪಿಸುತ್ತಿದ್ದಿ ಎಂದು ಹೇಳಿದ್ದರು. ಐಶ್ ಇಂದೂ ನನ್ನನ್ನು ಭಾಯ್ ಸಾಹಬ್ ಎಂದು ಕರೆಯುತ್ತಾರೆ ಎಂದಿದ್ದಾರೆ ಸೋನು.

Follow Us:
Download App:
  • android
  • ios