Asianet Suvarna News Asianet Suvarna News

ಹೃತಿಕ್ ನನಗೆ ಇಷ್ಟವಿಲ್ಲ; 12 ವರ್ಷಗಳ ಹಿಂದಿನ ಸಮಂತಾ ಮಾತು ವೈರಲ್

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಸಂದರ್ಶನವೊಂದರಲ್ಲಿ ಸಮಂತಾ, ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಬಗ್ಗೆ ಹೇಳಿದ್ದ ಹೇಳಿಕೆ ಈಗ ವೈರಲ್ ಆಗಿದೆ. ಆಗಿನ್ನು ಸಮಂತಾ ಚಿತ್ರರಂಗಕ್ಕೆ ಹೊರಬರು. ಆ ಸಮಯದಲ್ಲಿ ಸಮಂತಾಗೆ ಬಾಲಿವುಡ್ ಸ್ಟಾರ್ ಹೃತಿಕ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ಸಮಂತಾ ಹೃತಿಕ್ ರೋಷನ್ ಲುಕ್ ಇಷ್ಟವಾಗುವುದಿಲ್ಲ ಎಂದು ಹೇಳಿದ್ದರು. ಕೊಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಗ್ರೀಕ್ ಗಾಡ್ ಹೃತಿಕ್ ಬಗ್ಗೆ ಸಮಂತಾ ಹೇಳಿರುವುದು ಅಚ್ಚರಿ ಮೂಡಿಸಿತ್ತು.

When Actress Samantha said she does not like Hrithik Roshans looks too much sgk
Author
Bengaluru, First Published Aug 3, 2022, 11:16 AM IST

ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಆಗಿ ಬೆಳೆದು ನಿಂತಿರುವ ಸಮಂತಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 12 ವರ್ಷಗಲಾಗಿದೆ. ಇಂದು ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟಿ ಸಮಂತಾ 2010ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡ ಸ್ಯಾಮ್ ಬಳಿಕ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ಸಮಂತಾ ಇಂದು ಟಾಪ್ ನಟಿಯ ಸಾಲಿನಲ್ಲಿ ನಿಂತಿದ್ದಾರೆ. ಈ ಸಮಯದಲ್ಲಿ ಸಮಂತಾ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.   

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಸಂದರ್ಶನವೊಂದರಲ್ಲಿ ಸಮಂತಾ, ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಬಗ್ಗೆ ಹೇಳಿದ್ದ ಹೇಳಿಕೆ ಈಗ ವೈರಲ್ ಆಗಿದೆ. ಆಗಿನ್ನು ಸಮಂತಾ ಚಿತ್ರರಂಗಕ್ಕೆ ಹೊರಬರು. ಆ ಸಮಯದಲ್ಲಿ ಸಮಂತಾಗೆ ಬಾಲಿವುಡ್ ಸ್ಟಾರ್ ಹೃತಿಕ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ಸಮಂತಾ ಹೃತಿಕ್ ರೋಷನ್ ಲುಕ್ ಇಷ್ಟವಾಗುವುದಿಲ್ಲ ಎಂದು ಹೇಳಿದ್ದರು. ಕೊಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಗ್ರೀಕ್ ಗಾಡ್ ಹೃತಿಕ್ ಬಗ್ಗೆ ಸಮಂತಾ ಹೇಳಿರುವುದು ಅಚ್ಚರಿ ಮೂಡಿಸಿತ್ತು.

ಸಂದರ್ಶನ ನೀಡುವ ಸಮಯದಲ್ಲಿ ಸಮಂತಾಗೆ ಇನ್ನು 23 ವರ್ಷ. ಹೃತಿಕ್ ಲುಕ್ ಅಷ್ಟು ಇಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಮಂತಾ ಮಾತು ಈಗ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ. ಸಮಂತಾ ಮಾತಿಗೆ ಅನೇಕರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.ಇನ್ನು ಕೆಲವರು ಸಮಂಕಾ ಲುಕ್ ಬಗ್ಗೆ ಮಾತನಾಡುತ್ತಿದ್ದಾರೆ. 12 ವರ್ಷಗಳ ಹಿಂದೆ ಸಮಂತಾ ಹೇಗಿದ್ದರು ಚರ್ಚಿಸುತ್ತಿದ್ದಾರೆ. ಸಮಂತಾಗೆ ಸದ್ಯ 35 ವರ್ಷ. ಆಗ ಸಮಂತಾ ತುಂಬಾ ವಿಭಿನ್ನವಾಗಿದ್ದರು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಸಮಂತಾರನ್ನು ಗುರುತುಹಿಡಿಯಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದಾರೆ. 

ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು

ಇನ್ನು ಕೆಲವರು ಪೂಜಾ ಹೆಗ್ಡೆ ಮಾಡಿದ್ದ ಕಾಮೆಂಟ್ ಅನ್ನು ಯಾಕೆ ಸಮಂತಾ ಸಲೀಸಾಗಿ ತೆಗೆದುಕೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಮಂತಾ ಮತ್ತುಹೂ ಪೂಜಾ ಹೆಗ್ಡೆ ನಡುವೆ ಕೋಲ್ಡ್ ವಾರ್ ಪ್ರಾರಂಭವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೂಜಾ ಹೆಗ್ಡೆ ಸಮಂತಾ ಬಗ್ಗೆ ಮಾಡಿದ್ದ ಕಾಮೆಂಟ್ ವೈರಲ್ ಆಗಿತ್ತು. ಬಳಿಕ ಪೂಜಾ ತನ್ನ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದರು ಇಬ್ಬರ ನಡುವೆ ಮಾತಿನ ವಾರ್ ಮುಂದುವರೆದಿತ್ತು. ಅದನ್ನು ಮತ್ತೆ ನೆಟ್ಟಿಗರು ಎಳೆದು ತಂದಿದ್ದಾರೆ. ಆದರೆ ಸಮಂತಾ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಭಾರತೀಯ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. 

ಉ ಅಂಟಾವ ಮಾಮ... ಡ್ಯಾನ್ಸ್‌ಗೆ ಸಮಂತಾ- ಅಕ್ಷಯ್‌ ಡ್ಯಾನ್ಸ್‌, ವಿಡಿಯೋ ವೈರಲ್

ಸದ್ಯ ಸಮಂತಾ ತೆಲುಗಿನಲ್ಲಿ ಖುಷಿ, ಯಶೋದಾ, ಶಾಕುಂತಲಂ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಸಮಂತಾ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಬ್ಲಾಕ್ ಬಸ್ಟರ್ ಹಿಟ್ ದಿ ಫ್ಯಾಮಿಲಿ ಮ್ಯಾನ್-2 ಬಳಿಕ ಮತ್ತೊಂದು ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios