Asianet Suvarna News Asianet Suvarna News

RIP ದೇವ್​ ಕೊಹ್ಲಿ: ಇವರು ಕವನ ಬರೆದು ಕೊಟ್ರೆ ಭಾವುಕರಾದ ಪಾಕ್​ ವ್ಯಕ್ತಿ ನೀಡಿದ್ರು ಚಿನ್ನದ ಸರ!

ಬಾಲಿವುಡ್​ನ ಖ್ಯಾತ ಗೀತರಚನೆಕಾರ ದೇವ್​ ಕೊಹ್ಲಿ ಅವರು ಕೆಲ ದಿನಗಳ ಹಿಂದೆ ನಿಧನರಾಗಿದ್ದು,  ಪಾಕಿಸ್ತಾನದ ಪ್ರಜೆಯೊಬ್ಬ ಚಿನ್ನದ ಸರ ನೀಡಿದ್ದು, ಇವರ ಕವನದ ಮೋಡಿಗೆ ಸಾಕ್ಷಿಯಾಗಿದೆ. 
 

When a Pakistani fan gifted a golden chain to lyricist Dev Kohli
Author
First Published Aug 30, 2023, 12:00 PM IST

ಸುಮಾರು ಎರಡೂವರೆ ದಶಕಗಳ ಹಿಂದೆ ನಡೆದ ಘಟನೆ. ಪಂಜಾಬ್‌ನ ಅಮೃತಸರದ ಧಾಬಾದಲ್ಲಿ ಸಿಖ್ ವ್ಯಕ್ತಿಯೊಬ್ಬರು ತಮ್ಮ ಆಹಾರವನ್ನು ಆರ್ಡರ್​ ಮಾಡಿ ಕಾಯುತ್ತಿದ್ದರು. ಅವರು ಕೆಂಪು ಪೇಟ ಮತ್ತು ಬಿಳಿ ಪಾಟ್ಕಾ (ಪೇಟದ ಕೆಳಗಿರುವ ಪಟ್ಟಿ) ಧರಿಸಿದ್ದರು. ಅವರ ಮುಖವು ಹೊಳೆಯುತ್ತಿತ್ತು. ಅದೇ ಸಮಯದಲ್ಲಿ ಆ ಸ್ಥಳಕ್ಕೆ ಅಪರಿಚಿತ ವ್ಯಕ್ತಿ ಬಂದರು.  ಸಿಖ್​ ವ್ಯಕ್ತಿಯನ್ನು ನೋಡಿದ ಅವರು ಒಂದು ಕ್ಷಣವೂ ಯೋಚಿಸದೇ 'ನೀವು  ದೇವ್ ಕೊಹ್ಲಿ' ಅಲ್ಲವೇ ಎಂದರು. ಅದಕ್ಕಿ ಸಿಖ್​ ವ್ಯಕ್ತಿ,  ಹೌದು, ಆದರೆ ನೀವು ಯಾರು ಎಂದು ತಿಳಿಯಲಿಲ್ಲ ಎಂದರು. ಕೂಡಲೇ ಪಾಕಿಸ್ತಾನಿ ವ್ಯಕ್ತಿಯ ಮುಖದಲ್ಲಿ ಏನೋ ಧನ್ಯತಾ ಭಾವ ಎದ್ದು ಕಾಣುತ್ತಿತ್ತು. ನಾನು ಯಾರೆಂದು ನಿಮಗೆ ತಿಳಿದಿಲ್ಲ, ಆದರೆ ನೀವು ವಿಶ್ವಖ್ಯಾತರು. ನನ್ನ ಹೆಸರು ಅಸ್ಲಾಂ, ನಾನು ಪಾಕಿಸ್ತಾನದವ. ನಿಮ್ಮ ದೊಡ್ಡ ಅಭಿಮಾನಿ. ಪಾಕಿಸ್ತಾನದ ಉರ್ದು ನಿಯತಕಾಲಿಕೆಯಲ್ಲಿಯೂ ನಿಮ್ಮ ಫೋಟೋ ನೋಡಿದ್ದೇನೆ ಎಂದು ಭಾವುಕರಾದರು. ನಂತರ ಮಾತುಕತೆಯ ಬಳಿಕ ಪಾಕಿಸ್ತಾನದಿಂದ ಬಂದ ವ್ಯಕ್ತಿ ತಾವು ಧರಿಸಿದ್ದ ಚಿನ್ನದ ಸರವನ್ನೇ ಅತ್ಯಂತ ಪುನೀತ ಭಾವದಿಂದ ಸಿಖ್​ ವ್ಯಕ್ತಿಯ ಕೊರಳಿಗೆ ಹಾಕಿದರು.

ಅಷ್ಟಕ್ಕೂ ಯಾರೀ ಸಿಖ್​ ವ್ಯಕ್ತಿ? ಇವರೇ ಬಾಲಿವುಡ್ (Bollywood) ಸಿನಿಮಾಗಳಿಗೆ ಗೀತ ರಚನೆ ಮಾಡಿರುವ ದೇವ್ ಕೊಹ್ಲಿ. ಇದೇ 26ರಂದು ಇವರು ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಪಾಕಿಸ್ತಾನಿ ವ್ಯಕ್ತಿಯ ಜೊತೆ ಮಾತನಾಡಿದ ಬಳಿಕ ಅಲ್ಲಿದ್ದ ಒಂದು ಹಾಳೆಯಲ್ಲಿ ಕವನ ಬರೆದು ಅದನ್ನು ಪಾಕಿಸ್ತಾನಿ ವ್ಯಕ್ತಿಗೆ ಕೊಡುತ್ತಲೇ ಅವರಿಗೆ ಏನು ಮಾಡಬೇಕೆಂದು ತೋಚದೇ ತಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನೇ ಕೊಟ್ಟುಬಿಟ್ಟಿದ್ದರು! ಬಾಜಿಗರ್, ಟ್ಯಾಕ್ಸಿ ನಂಬರ್ ಸೇರಿದಂತೆ ಹಲವಾರು ಬಾಲಿವುಡ್  ಸಿನಿಮಾಗಳಿಗೆ ಗೀತ ರಚನೆ ಮಾಡಿರುವ ಖ್ಯಾತಿ ಕೊಹ್ಲಿ ಅವರದ್ದು.  ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದೇವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ  ತ್ಯಜಿಸಿದ್ದಾರೆ. 'ಮೈನೆ ಪ್ಯಾರ್ ಕಿಯಾ' ಅಲ್ಲದೆ, 'ಬಾಜಿಗರ್', 'ಮುಸಾಫಿರ್', 'ಶೂಟೌಟ್ ಅಟ್ ಲೋಖಂಡವಾಲಾ', 'ಜುಡ್ವಾ-2' ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದಾರೆ. 

ಶೀಘ್ರವೇ ಗುಡ್​ ನ್ಯೂಸ್​ ಎಂದ ವಿಜಯ್​ ದೇವಕೊಂಡ: ಇದು ರಶ್ಮಿಕಾ ಕೈ ಅಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್!

1969ರಲ್ಲಿ ‘ಗುಂಡ’ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು. ಅವರು ಅನೇಕ ಪಂಜಾಬಿ ಹಾಡುಗಳನ್ನು ಬರೆದಿದ್ದಾರೆ ಮತ್ತು ಕವಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಅವರ ಕೊನೆಯದ್ದಾಗಿ ಕೆಲಸ ಮಾಡಿದ್ದು ಕಂಗನಾ ರಣಾವತ್ ಅಭಿನಯದ 'ರಜ್ಜೋ' ಚಿತ್ರಕ್ಕಾಗಿ. ಅವರು 1969 ರಲ್ಲಿ 'ಗುಂಡಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು, ಆದರೆ 1971 ರ ಚಲನಚಿತ್ರ 'ಲಾಲ್ ಪತ್ತರ್' ನಿಂದ 'ಗೀತ್ ಗಾತಾ ಹೂ ಮೈ...' ಹಾಡು ಅವರ ವೃತ್ತಿಜೀವನದ ಮಹತ್ವದ ತಿರುವು ಪಡೆದುಕೊಂಡಿತ್ತು.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ದೇವ್ (Dev Kohli) ಜನಿಸಿದ್ದರು. ಪಾಕಿಸ್ತಾವ ವಿಭಜನೆ ಬಳಿಕ ಅವರ ಕುಟುಂಬ ಡೆಹ್ರಾಡೂನ್ ಸ್ಥಳಾಂತರವಾಗಿತ್ತು. ಸಿನಿಮಾ ರಂಗದಲ್ಲಿ ಕೆಲಸ ಮಾಡುವುದಕ್ಕಾಗಿಯೇ ಅವರು ಮುಂಬೈಗೆ (Mumbai) ಬಂದಿದ್ದರು. ನೂರಾರು ಹಿಟ್ ಹಾಡುಗಳನ್ನು ನೀಡುವ ಮೂಲಕ ದೇವ್ ನೆಚ್ಚಿನ ಸಾಹಿತ್ಯ ರಚನೆಕಾರರು ಆಗಿದ್ದರು. ದೇವ್ ಕೊಹ್ಲಿ ಹಿಂದಿ ಚಲನಚಿತ್ರಗಳಲ್ಲಿ 100 ಕ್ಕೂ ಹೆಚ್ಚು ಜನಪ್ರಿಯ ಹಾಡುಗಳನ್ನು ಬರೆದಿದ್ದಾರೆ. ಅವರು ಬಹುಶಃ 2013 ರಲ್ಲಿ ಬರೆಯುವುದನ್ನು ನಿಲ್ಲಿಸಿದರು. ಅವರ ಸಮಕಾಲೀನರು ಕೊಹ್ಲಿ ಅವರನ್ನು ಜಾದೂಗಾರ-ಗೀತರಚನೆಕಾರ ಮತ್ತು ಪ್ರಣಯದ ರಾಜ ಎಂದು ಕರೆಯುತ್ತಿದ್ದರು.   ಅತ್ಯುತ್ತಮ ಸಾಹಿತ್ಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಲಕ್ಷ್ಮೀಕಾಂತ್-ಪ್ಯಾರೇಲಾಲ್, ಅನು ಮಲಿಕ್, ಉತ್ತಮ್ ಸಿಂಗ್, ಆನಂದ್-ಮಿಲಿಂದ್, ರಾಮ್-ಲಕ್ಷ್ಮಣ್ ಮತ್ತು ಆನಂದ್ ರಾಜ್ ಆನಂದ್ ಸೇರಿದಂತೆ ಅನೇಕ ಪ್ರಖ್ಯಾತ ಸಂಯೋಜಕರೊಂದಿಗೆ ದೇವ್ ಕೊಹ್ಲಿ ಕೆಲಸ ಮಾಡಿದ್ದಾರೆ. 

ಎರಡು ಟಿಕೆಟ್​ ಖರೀದಿಗೆ 'ಗದರ್​-2' ತಂಡದಿಂದ ಭರ್ಜರಿ ಆಫರ್​: ಡಿಟೇಲ್ಸ್​ ಇಲ್ಲಿದೆ

Follow Us:
Download App:
  • android
  • ios