Asianet Suvarna News Asianet Suvarna News

Katrina Kaif Wedding: ಈಗಾಗ್ಲೆ BJP ಶಾಸಕನ ಮದ್ವೆಯಾಗಿದ್ದಾರಾ ಕತ್ರೀನಾ ?

  • ಮಧ್ಯಪ್ರದೇಶ(Madhyapradesh) ಬಿಜೆಪಿ(BJP) ಶಾಸಕನ ಜೊತೆಗೆ ಕತ್ರೀನಾ ಮದುವೆ ?
  • ಎನಿದು ಮದುವೆ ಸರ್ಟಿಫಿಕೇಟ್ ?
  • ಕತ್ರೀನಾ ಮದುವೆ ಸಂಭ್ರಮ ಮಧ್ಯೆ ಇದೇನು ಹೊಸ ಸೀಕ್ರೆಟ್ ?
When a marriage certificate showed Katrina married to MLA Mendola dpl
Author
Bangalore, First Published Dec 7, 2021, 12:28 PM IST
  • Facebook
  • Twitter
  • Whatsapp

ಬಾಲಿವುಡ್ ಸೆಲೆಬ್ರಿಟಿ ಜೋಡಿಯ ಮದುವೆ ಸಂಭ್ರಮ ಶುರುವಾಗಿದೆ. ಕತ್ರೀನಾ ಕೈಫ್(Katrina Kaif) ಹಾಗೂ ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಸ್ಲಿಂ ಹಾಗೂ ಹಿಂದೂ ಸಂಪ್ರದಾಯದಂತೆ ರಣತಂಬೋರ್‌ನಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ನಡೆಯಲಿದೆ. ಆದರೆ ಈ ಖುಷಿಯ ಮಧ್ಯೆಯೇ ಕತ್ರೀನಾಗೆ ಈಗಾಗಲೇ ಮದುವೆ ಆಗಿದೆ ಎನ್ನುವ ಸುದ್ದಿಯೊಂದು ಸಂಚಲನ ಮೂಡಿಸಿದೆ. ಹೌದು. ಕತ್ರೀನಾ ಹಾಗೂ ಮಧ್ಯಪಪ್ರದೇಶದ ಬಿಜೆಪಿ ಶಾಸಕ(BJP MLA) ಮದುವೆತಯಾಗಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಇವರ ಮದುವೆ ಸರ್ಟಿಫಿಕೇಟ್ ಎಲ್ಲಿಂದ ಬಂತು ?

ಬಾಲಿವುಡ್ ನೀಳ ಸುಂದರಿ ಕತ್ರೀನಾ ಕೈಫ್ ವಧುವಿನ ಕಳೆ ತುಂಬಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿರೋ ನಟಿಯ ಮದುವೆ ಕಾರ್ಯಕ್ರಮಗಳು ಡಿ.07ರಿಂದ ಆರಂಭಗೊಳ್ಳುತ್ತಿವೆ. ಆದರೆ ಈಗ ನಟಿ 12 ವರ್ಷದ ಹಿಂದಿನ ಸಂಬಂಧವೊಂದು ಸುದ್ದಿಯಾಗುತ್ತಿದೆ. ಶಾಸಕರೊಬ್ಬರೊಂದಿಗೆ ಕತ್ರೀನಾರ ಸಂಬಂಧ ಸುದ್ದಿಯಾಗಿದ್ದು, ಮದುವೆ ಸಂದರ್ಭ ಇದು ಚರ್ಚೆಯಾಗುತ್ತಿದೆ.

Most Searched Female Celebrities 2021: ಕತ್ರಿನಾ, ದೀಪಿಕಾ ಜೊತೆ ಸಮಂತಾ!

2009ರಲ್ಲಿ ಕತ್ರೀನಾ ಸಿಂಗಲ್ ಆಗಿದ್ದರೂ ಇಂದೋರ್‌ನಲ್ಲಿ ಒಂದು ಮದುವೆ ಸರ್ಟಿಫಿಕೇಟ್ ವೈರಲ್ ಆಗಿದೆ. ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರು ಇಂದೋರ್ - 2 ಶಾಸಕ ರಮೇಶ್ ಮೆಂಡೋಲಾ ಅವರ ಪತ್ನಿ ಎಂಬ ಸರ್ಟಿಫಿಕೇಟ್ ಸದ್ದು ಮಾಡುತ್ತಿದೆ. 

ಇದು ಸಂಪೂರ್ಣವಾಗಿ ನಕಲಿ ಪ್ರಮಾಣಪತ್ರವಾಗಿದೆ. ಇದನ್ನು ಪುರಸಭೆಯಿಂದ ನೀಡಲಾಗಿಲ್ಲ. ಇದು ಕೆಲವು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು IMC ಮದುವೆ ರಿಜಿಸ್ಟ್ರಾರ್ ಡಾ.ನಟ್ವರ್ ಸರ್ದಾ ಹೇಳಿದ್ದಾರೆ. ಸ್ಪಷ್ಟವಾಗಿ, ಯಾರೋ ಮೊದಲು IMC ಮದುವೆ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿದ್ದಾರೆ. ನಂತರ ಕೆಲವು ಸಾಫ್ಟ್‌ವೇರ್ ಸಹಾಯದಿಂದ ಬಾಲಿವುಡ್ ನಟಿ ಮತ್ತು ಶಾಸಕರನ್ನು ಗಂಡ ಮತ್ತು ಹೆಂಡತಿ ಎಂದು ತೋರಿಸಿದ್ದಾರೆ ಎಂದು ಸರ್ದಾ ಹೇಳಿದ್ದಾರೆ.

ಮೆಂಡೋಲಾ ಅವರು ಪ್ರಮಾಣಪತ್ರವನ್ನು ನಕಲಿ ಎಂದು ಹೇಳಿದ್ದಾರೆ. ಐಎಂಸಿಯು ನಕಲಿ ವಿವಾಹ ಪ್ರಮಾಣಪತ್ರದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ದುಷ್ಕೃತ್ಯ ಎಸಗಿದ ವ್ಯಕ್ತಿಗಳನ್ನು ಅಪರಾಧಕ್ಕಾಗಿ ದಾಖಲಿಸಲು ಪೊಲೀಸರಿಗೆ ದೂರು ನೀಡಿತ್ತು. ಆದರೆ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು.

ಮದುವೆಗೆ ಮುನ್ನಾದಿನ ಬಿಳಿ ಸೀರೆಯಲ್ಲಿ ಕತ್ರೀನಾ, ಮುಖದಲ್ಲಿ ವಧುವಿನ ಕಳೆ

ಕತ್ರಿನಾ ಕೈಫ್ ಉರಿ ನಟನೊಂದಿಗೆ ದಾಂಪತ್ಯ ಜೀವನಕ್ಕೆ ಆಗಲು ಸಿದ್ಧವಾಗುತ್ತಿದ್ದಂತೆ, ಇಂದೋರ್‌ನಲ್ಲಿ ಈ ಹಳೆಯ ಘಟನೆ ಸುದ್ದಿಯಾಗುತ್ತಿದೆ. ಇವೆಲ್ಲದರ ಮಧ್ಯೆ ಶೀಘ್ರದಲ್ಲೇ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೋಮವಾರ ರಾಜಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಈ ವಾರ ಮದುವೆಯಾಗಲಿದ್ದಾರೆ. ಇಬ್ಬರೂ ಅವರ ಕುಟುಂಬ ಮತ್ತು ಇತರ ಸದಸ್ಯರೊಂದಿಗೆ ಇದ್ದರು. ಮದುವೆ ಮತ್ತು ಮುಂಚಿನ ಕಾರ್ಯಕ್ರಮಗಳು ಮಾಧೋಪುರದಲ್ಲಿರುವ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ನಡೆಯುತ್ತದೆ. ಡಿಸೆಂಬರ್ 7 ಮತ್ತು 8 ರಂದು ಸಂಗೀತ ಮತ್ತು ಮೆಹೆಂದಿ ಮತ್ತು ಡಿಸೆಂಬರ್ 9 ರಂದು ಮದುವೆ ನಡೆಯಲಿದೆ.

45 ಹೊಟೇಲ್ಸ್ ಬುಕ್:

ಲವ್ ಬರ್ಡ್ಸ್ ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್(Vicku Kaushal) ಅವರ ವಿವಾಹವು ಕಳೆದ ಹಲವಾರು ವಾರಗಳಿಂದ ಚರ್ಚೆಯಾಗುತ್ತಿದೆ. ಸ್ಟಾರ್ ಜೋಡಿ ತಮ್ಮ ವಿಶೇಷ ದಿನದ ಬಗ್ಗೆ ತುಂಬಾ ಸೈಲೆಂಟ್ ಆಗಿದ್ದರೂ ಅವರ ಮದುವೆಯ(Wedding) ವಿವರಗಳು ಪ್ರತಿದಿನ ಸುದ್ದಿ ಮಾಡುತ್ತಿವೆ. ಇದೀಗ ಪ್ರಮುಖ ದಿನಪತ್ರಿಕೆಯ ಇತ್ತೀಚಿನ ವರದಿಯ ಪ್ರಕಾರ ರಾಜಸ್ಥಾನದಲ್ಲಿ ಡಿಸೆಂಬರ್‌ನಲ್ಲಿ ಕತ್ರಿನಾ ಮತ್ತು ವಿಕ್ಕಿಯ ವಿವಾಹಕ್ಕಾಗಿ 45 ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಹೌದು. ರಾಜಸ್ಥಾನದಲ್ಲಿ(Rajasthan) ನಡೆಯುವ ರಾಯಲ್ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿವೆ. 

ಸ್ಟಾರ್ ಜೋಡಿಯ ವಿವಾಹಕ್ಕಾಗಿ 40 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ರೆಸಾರ್ಟ್, ಬರ್ವಾರದಲ್ಲಿ ಸೋವೈ ಮಾಧೋಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ರಣಥಂಬೋರ್‌ನಲ್ಲಿ(Ranathambor) ಸುಮಾರು 45 ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಡಿಸೆಂಬರ್ 7 ರಿಂದ ಇಲ್ಲಿಗೆ ಬಹಳಷ್ಟು ಸ್ಟಾರ್‌ಗಳು ಆಗಮಿಸಲಿದ್ದಾರೆ. ಸಲ್ಮಾನ್ ಖಾನ್ ಕೂಡ ಡಿಸೆಂಬರ್ 9 ರಂದು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅವರು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Follow Us:
Download App:
  • android
  • ios