ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!

ಐತಿಹಾಸಿಕ ಕುಂಭಮೇಳಕ್ಕೆ ಪ್ರಯಾಗ್ ನಗರ ಸಿದ್ಧಗೊಂಡಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ ಕಾರಣದಿಂದ ಇದನ್ನು ಮಹಾಕುಂಭ ಮೇಳ ಎಂದು ಕರೆಯಲಾಗುತ್ತದೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆ..

There is news viral about Maha Kumbh Mela sadhus in Social Media now

ಸದ್ಯ ಉತ್ತರಪ್ರದೇಶದ ಪ್ರಯಾಗ್‌ನಲ್ಲಿ ಮಹಾಕುಂಭ ಮೇಳ (Maha Kumbha Mela) ನಡೆಯುತ್ತಿರುವುದು ಗೊತ್ತೇ ಇದೆ. ಅಲ್ಲಿ ಕೋಟ್ಯಾಂತರ ಭಕ್ತರು, ಸಾಧುಗಳು, ನಾಗ ಸಾಧುಗಳು ಅಲ್ಲಿ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಜನಸಾಮಾನ್ಯರು ಮಾತ್ರವಲ್ಲ, ಅನೇಕ ದಿಗ್ಗಜರು ಹಾಗೂ ಹೆಸರಾಂತ ವ್ಯಕ್ತಿಗಳು ಕೂಡ ಗಂಗಾನದಿಯ ತಟದಲ್ಲಿ ಬೀಡು ಬಿಟ್ಟಿದ್ದಾರೆ. ಸದ್ಯ ಭಾರತದಲ್ಲಿ ಮಹಾಕುಂಭಮೇಳದ ಸುದ್ದಿ ಟಾಪ್ ಟ್ರೆಂಡಿಂಗ್‌ನಲ್ಲಿದೆ. 

ಇದೀಗ, ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ, ಅಚ್ಚರಿಯ ಸಂಗತಿಯೊಂದು ವೈರಲ್ ಅಗುತ್ತಿದೆ. 'ನಾಗಸಾಧುಗಳು ಹಾಗೂ ಹಿಮಾಲಯದ ಬಳಿ ಇರುವ ಸಾಧುಗಳಿಗೆ ಅಲ್ಲಿ ಜನಸಂಪರ್ಕವೇ ಇಲ್ಲ. ನಮ್ಮ ಬಳಿ ಕ್ಯಾಲೆಂಡರ್ ಇದೆ, ಮೊಬೈಲ್ ಇದೆ, ನೂರಾರು ನ್ಯೂಸ್ ಚಾನೆಲ್‌ಗಳಿವೆ. ನಿಮಿಷದಲ್ಲಿ ವೈರಲ್ ಅಗುವ ಸೋಷಿಯಲ್ ಮೀಡಿಯಾಗಳಿವೆ. ಹಾಗಿದ್ದರೂ ಈ ಮಹಾಕುಂಭ ಮೇಳ ನಡೆಯೋ ಸಮಯದ ಬಗ್ಗೆ ಕೋಟ್ಯಾಂತರ ಮಂದಿಗೆ ಇನ್ನೂ ಗೊತ್ತಾಗಿಲ್ಲ. 

ಮಹಾಕುಂಭ ಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಸದ್ಯದ ಪಾಡು ಯಾರಿಗೂ ಬೇಡ!

ಈ ಅಘೋರಿಗಳು, ಸಾಧುಸಂತರು, ತಪಸ್ವಿಗಳು ಅಲ್ಲೆಲ್ಲೋ ಹಿಮಾಲಯದ ಅರಣ್ಯಗಳಲ್ಲಿ, ಗುಹೆಗಳಲ್ಲಿ ವರ್ಷಗಟ್ಟಲೇ ಜನರ ಸಂಪರ್ಕವೇ ಇಲ್ಲದೇ ಬದುಕುತ್ತಿದ್ದರೂ, ಈ ಒಂದು ಕುಂಭ ಸ್ನಾನಕ್ಕಾಗಿ ಲಕ್ಷಾಂತರ ಸಾಧುಗಳು ಸಾವಿರಾರು ಅಡಿ ಪರ್ವತವಿಳಿದು, ಸಾವಿರ ಮೈಲಿ ಸಂಚಾರ ಮಾಡಿ, ಸರಿಯಾಗಿ ನಿಖರವಾಗಿ ಇದೇ ವರ್ಷ, ಇದೇ ತಿಂಗಳು, ನಿರ್ಧಿಷ್ಟ ದಿನದಂದು ಈ ಸ್ಥಳಕ್ಕೆ ಬರುತ್ತಾರೆ ಎಂದರೆ, ಇದು ನಿಜವಾಗಿಯೂ ಬಹುದೊಡ್ಡ ಪವಾಡವೇ ಸರಿ!..' ಎಂದು ಬರೆದಿರುವ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿವೆ. 

ಐತಿಹಾಸಿಕ ಕುಂಭಮೇಳಕ್ಕೆ ಪ್ರಯಾಗ್ ನಗರ ಸಿದ್ಧಗೊಂಡಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ ಕಾರಣದಿಂದ ಇದನ್ನು ಮಹಾಕುಂಭ ಮೇಳ ಎಂದು ಕರೆಯಲಾಗುತ್ತದೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಬಹಳಷ್ಟು ಮಂದಿ ಹೋಗಿ ಪುಣ್ಯ ಸ್ನಾನ ಮಾಡಿ ತೆರಳಿದ್ದಾರೆ. 

ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!

ಕುಂಭಮೇಳ, ಅರ್ಧ ಕುಂಭ ಮತ್ತು ಪೂರ್ಣ ಕುಂಭಗಳಿಗೆ ಹೋಲಿಸಿದರೆ ಮಹಾ ಕುಂಭಮೇಳ ಏಕೆ ವಿಶೇಷವಾಗಿದೆ ಗೊತ್ತೇ? ಕುಂಭಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಇದನ್ನು ಪ್ರತಿ 12 ವರ್ಷಗಳಿಗೊಮ್ಮೆ ಭಾರತದ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಅಥವಾ ನಾಸಿಕ್‌ನಲ್ಲಿ ನಡೆಸಲಾಗುತ್ತದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದೆ. ಆದರೆ ಇದು 144 ವರ್ಷಗಳಿಗೊಮ್ಮೆ ಮಾತ್ರ ನಡೆಸಲಾಗುವ ಮಹಾಕುಂಭ ಮೇಳ. 

ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ.

ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?

Latest Videos
Follow Us:
Download App:
  • android
  • ios