ನಟರಾದ ಧನುಷ್​- ಕಾರ್ತಿಕ್​ ಕುಮಾರ್​ ಒಂದೇ ರೂಮ್​ನಲ್ಲಿ ಮಾಡ್ತಿದ್ದೇನು ಎಂದು ಪ್ರಶ್ನಿಸುವ ಮೂಲಕ ಕಾರ್ತಿಕ್​ ಕುಮಾರ್​ ಮಾಜಿ ಪತ್ನಿ, ಗಾಯಕಿ ಸುಚಿತ್ರ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.  

ಸ್ಟ್ಯಾಂಡ್​ ಅಪ್​ ಕಮೀಡಿಯನ್​ ಕಾರ್ತಿಕ್​ ಕುಮಾರ್​ ಪತ್ನಿ ಗಾಯಕಿ ಸುಚಿತ್ರಾ ಅವರ ಹೆಸರು ಕೆಲ ವರ್ಷಗಳ ಹಿಂದೆ ಭರ್ಜರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಸುಚೀ ಲೀಕ್ಸ್ (suchi leaks) ಹೆಸರಿನಲ್ಲಿ, ಕೆಲ ವರ್ಷಗಳ ಹಿಂದೆ ನಟ ಧನುಷ್, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಖಾಸಗಿ ವಿಡಿಯೋ, ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೇ ಸಂದರ್ಭದಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಅದೇ ವಿಷಯವಾಗಿ ಸುಚಿತ್ರಾ ಮಾತನಾಡಿದ್ದು ಹಲ್​ಚಲ್​ ಸೃಷ್ಟಿಸಿದ್ದಾರೆ. 

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. 18 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ ದಂಪತಿ ದೂರಾಗುತ್ತಿದ್ದಾರೆ. ಸೂಪರ್​ಸ್ಟಾರ್ ರಜನೀಕಾಂತ್ ಪುತ್ರಿ ಕಾಲಿವುಡ್ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಮತ್ತು ನಟ ಧನುಷ್ (Dhanush) ಪ್ರತ್ಯೇಕವಾಗಿದ್ದು ಎರಡು ವರ್ಷಗಳೇ ಕಳೆದು ಹೋಗಿವೆ. ಇವರು ಮತ್ತೆ ಒಂದಾಗುವರು, ಪರಸ್ಪರ ಒಬ್ಬರನ್ನೊಬ್ಬರು ಮತ್ತೆ ಇಷ್ಟಪಡಲು ಶುರು ಮಾಡಿದ್ದಾರೆ, ಇದರಿಂದ ಶೀಘ್ರವೇ ಒಂದಾಗುವ ಗುಡ್​ ನ್ಯೂಸ್ ಕೊಡಲಿದ್ದಾರೆ ಎನ್ನುವ ಅಭಿಮಾನಿಗಳ ಅನಿಸಿಕೆ ಕೊನೆಗೂ ಹುಸಿಯಾಗಿ ಹೋಯ್ತು. ಐಶ್ವರ್ಯಾ ರಜನಿಕಾಂತ್‌ ಮತ್ತು ನಟ ಧನುಷ್‌ ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಇವರಿಬ್ಬರು ಕಾನೂನು ಪ್ರಕಾರವಾಗಿ ಡಿವೋರ್ಸ್‌ ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಅಭಿಮಾನಿಗಳಿಗೆ ಶಾಕ್​ ಉಂಟು ಮಾಡಿದೆ. 

ಧನುಷ್​ ಜೊತೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!

ಈ ಕುರಿತು ಮಾತನಾಡಿರುವ ಗಾಯಕಿ ಸುಚಿತ್ರಾ ಅವರು ಈ ಸಂದರ್ಭದಲ್ಲಿ ಹಲವು ವಿಷಯಗಳನ್ನು ಪುನಃ ಕೆದಕಿದ್ದಾರೆ. ವ ಈ ಸೆಲೆಬ್ರಿಟಿ ದಂಪತಿ ತಮ್ಮ ಪ್ರತ್ಯೇಕತೆಯ ಹಿಂದಿನ ಕಾರಣವನ್ನು ಹಂಚಿಕೊಳ್ಳಲಿಲ್ಲ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯಕಿ ಸುಚಿತ್ರಾ ಮಾಜಿ ದಂಪತಿಗಳ ಬಗ್ಗೆ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. 'ಐಶ್ವರ್ಯಾ ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾಳೆ. ಆದರೆ ಮದುವೆಯ ಉದ್ದಕ್ಕೂ ಅವಳು ಅದನ್ನೇ ಮಾಡಿದ್ದಾಳೆ. ಆಕೆಗೊಂದು ನ್ಯಾಯ ಆತನಿಗೊಂದು ನ್ಯಾಯವೇ?' ಎಂದು ಸುಚಿತ್ರಾ ಪ್ರಶ್ನಿಸಿದ್ದಾರೆ. 

ಇದೇ ವೇಳೆ ಇನ್ನೊಂದು ಆಘಾತಕಾರಿ ವಿಷಯವನ್ನು ಅವರು ಹೇಳಿದ್ದಾರೆ. ತಮ್ಮ ಮಾಜಿ ಪತಿ ಕಾರ್ತಿಕ್​ ಕುಮಾರ್​ ಒಬ್ಬ ಸಲಿಂಗಕಾಮಿ ಎಂದಿದ್ದಾರೆ. 'ಯಾರಿ ನೀ ಮೋಹಿನಿ' ಚಿತ್ರದ ನಂತರ ಧನುಷ್ ಹಾಗೂ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಜೊತೆ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಒಂದೇ ರೂಮಿನಲ್ಲಿ ಏನು ಮಾಡುತ್ತಿದ್ದರು ಎನ್ನುವುದನ್ನು ಪ್ರಶ್ನಿಸಬೇಕಿದೆ. ಇಬ್ಬರೂ ಸಿನಿಮಾ ಬಿಟ್ಟು ಬೇರೆ ಏನೇನೊ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಒಮ್ಮೆ ಸುಮಾರು ಬೆಳಗಿನ ಮೂರು ಗಂಟೆಗೆ ಕಾರ್ತಿಕ್​ ಮನೆಗೆ ಬಂದಿದ್ದರು. ಅವರ ಕಾಲು ನಡುಗುತ್ತಿತ್ತು. ಸಿಗರೇಟ್ ಸೇದುತ್ತಿದ್ದ. ಆಗಲೇ, ಧನುಷ್ ಕಾರ್ತಿಕ್‌ಗೆ ಅಸಹ್ಯಕರ ಮೆಸೇಜ್‌ಗಳನ್ನು ಕಳುಹಿಸಿದ್ದ. ಅದರಿಂದ ಅವರು ಸಲಿಂಗಕಾಮಿ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ. ಕಾರ್ತಿಕ್​ 100% ಸಲಿಂಗಕಾಮಿ. ಯಾರಿಗೂ ತಿಳಿಯದಂತೆ ಸಲಿಂಗಕಾಮಿಯಾಗಿ ವಿಭಿನ್ನ ಜೀವನ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ನಂತರ ನಾನು ಅದನ್ನು ಅರಿತುಕೊಂಡೆ. ಮಕ್ಕಳಾಗಿಲ್ಲ ಎಂದು ವೈದ್ಯರ ಬಳಿ ಹೋದಾಗ ನನಗೆ ಅರಿವಾಯಿತು. ಅವರು ಪುರುಷರೊಂದಿಗೆ ಸುತ್ತಾಡುತ್ತಿದ್ದರು, ಧನುಷ್​ ಜೊತೆ ಇರುತ್ತಿದ್ದರು ಎಂದಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಾರ್ತಿಕ್​ ಕುಮಾರ್​ ಅವರು, ನನ್ನ ಮಾಜಿ ಪತ್ನಿ, ಗಾಯಕಿ ಸುಚಿತ್ರಾ ಆರೋಪಿಸಿದಂತೆ ನಾನು ಸಲಿಂಗಕಾಮಿಯಾಗಿದ್ದರೆ, ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ. ಅವರವರ ಲೈಂಗಿಕತೆಯ ಬಗ್ಗೆ ಯಾರೂ ನಾಚಿಕೆಪಡಬಾರದು. ನಾನು ಸಲಿಂಗಕಾಮಿ ಆಗಿದ್ದರೆ ಅದನ್ನು ಹೇಳಲು ನಾಚಿಕೆಪಡುವುದಿಲ್ಲ. ಅಸ್ತಿತ್ವದಲ್ಲಿರುವ ಲೈಂಗಿಕತೆಯ ದೈತ್ಯಾಕಾರದ ಪ್ರಪಂಚದಲ್ಲಿ ಯಾವುದೇ ರೀತಿಯ ಲೈಂಗಿಕವಾಗಿರಲು ನಾನು ತುಂಬಾ ಹೆಮ್ಮೆಪಡುತ್ತೇನೆ. ನಾನು ನಾಚಿಕೆಪಡುವುದಿಲ್ಲ. ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ.

ಧನುಷ್- ಐಶ್ವರ್ಯಾ ವಿಚ್ಚೇದನಕ್ಕೆ ದಾಂಪತ್ಯದ್ರೋಹ ಕಾರಣನಾ? ಗಾಯಕಿ ಸುಚಿತ್ರ ಬಿಚ್ಚಿಟ್ರು ಶಾಕಿಂಗ್ ಸಂಗತಿ