ರಣವೀರ್ ಅಲ್ಹಾಬಾಡಿಯಾ ಸನ್ನಿ ಲಿಯೋನ್‌ರನ್ನು ಸಂದರ್ಶಿಸಿದ್ದು, ಆಕೆ ಅಡಲ್ಟ್ ಫಿಲಂ ಇಂಡಸ್ಟ್ರಿಯ ಕಾಲದ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾಳೆ. ಈಗ ಕೊಳಕು ಮಾತನಾಡಿ ಉಗಿಸಿಕೊಳ್ಳುತ್ತಿರುವ ರಣವೀರ್, ಸನ್ನಿ ಜೊತೆಗೆ ಹೇಗೆ ಮಾತನಾಡಿದ್ದಾನೆ ಅಂತ ನೀವೇ ನೋಡಿ.
ರಣವೀರ್ ಅಲ್ಹಾಬಾಡಿಯಾ ಸುದ್ದಿಯಲ್ಲಿದ್ದಾನೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋದಲ್ಲಿ ಕೆಟ್ಟಾಕೊಳಕು ಮಾತನಾಡಿ, ದೇಶದ ಜನರಿಂದ ಉಗಿಸಿಕೊಂಡು, ಸುಪ್ರೀಂ ಕೋರ್ಟ್‌ನಿಂದಲೂ ಛೀಮಾರಿ ಹಾಕಿಸಿಕೊಂಡು, ಸದ್ಯಕ್ಕೆ ಮುಖ ಒರೆಸಿಕೊಂಡು ಮನೆ ಸೇರಿದ್ದಾನೆ. ಇವನು ಒಂದು ಕಾಲದ ಅಡಲ್ಟ್ ಫಿಲಂ ಸ್ಟಾರ್, ಈಗ ತುಸು ಮರೆಗೆ ಸರಿದಿರುವ ಜನಪ್ರಿಯ ಬಾಲಿವುಡ್ ಸ್ಟಾರ್ ಸನ್ನಿ ಲಿಯೋನ್‌ಳನ್ನೂ ಇಂಟರ್‌ವ್ಯೂ ಮಾಡಿದ್ದಾನೆ. ಈ ಸಂದರ್ಶನದಲ್ಲಿ ಆತ ಸನ್ನಿಗೆ ಹಾಕಿದ ಪ್ರಶ್ನೆಗಳು ಮತ್ತು ಆಕೆ ನೀಡಿದ ಉತ್ತರಗಳು ಕುತೂಹಲಕಾರಿಯಾಗಿವೆ.
ಅಡಲ್ಟ್ ಫಿಲಂ ಇಂಡಸ್ಟ್ರಿಯಲ್ಲಿ ನಿನ್ನ ಬೆಸ್ಟ್ ಪಾರ್ಟ್ ಮತ್ತು ಕೆಟ್ಟ ಪಾರ್ಟ್ ಯಾವುದು ಎಂದು ರಣವೀರ್ ಕೇಳ್ತಾನೆ. ಬೆಸ್ಟ್ ಪಾರ್ಟ್ ಅಂದ್ರೆ ಅಲ್ಲಿನ ದೊಡ್ಡ ದೊಡ್ಡ ಬ್ರಾಂಡ್‌ಗಳ ಜೊತೆ, ಬೆಸ್ಟ್ ಜನಗಳ ಜೊತೆ ಕೆಲಸ ಮಾಡಿದ್ದು. ಅಲ್ಲಿನ ಉದ್ಯಮ ಮತ್ತು ಸ್ಟ್ರೀಟ್ ಸ್ಮಾರ್ಟ್‌ನೆಸ್ ನನಗೆ ನೆರವಾಯಿತು. ಯಾರ ಜೊತೆ ಕೆಲಸ ಮಾಡಬೇಕು, ಯಾರ ಜೊತೆ ಮಾಡಬಾರದು ಅಂತ ನಿರ್ಧರಿಸೋಕೆ ಕೆಲವು ಸಲ ಒಳನೋಟ, ಕೆಲವು ಸಲ ವಾಸ್ತವಾಂಶಗಳು ನೆರವಾಗುತ್ತಿದ್ದವು. ಇನ್ನು ಕೆಟ್ಟ ಪಾರ್ಟ್ ಅಂದರೆ ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ನಮ್ಮನ್ನು ಇನ್ಯಾರೋ ಬೈಪಾಸ್ ಮಾಡಿಕೊಂಡು ಹೋಗಿಬಿಡುವುದು. ಇತರರಿಗಿಂತ ಎರಡು ಪಟ್ಟು ಮೂರು ಪಟ್ಟು ಶ್ರಮ ಹಾಕಬೇಕಾಗಿ ಬರುತ್ತಿತ್ತು ಎಂದು ಸನ್ನಿ ಹೇಳಿದ್ದಾಳೆ.
ಇದೇ ಸಂದರ್ಭದಲ್ಲಿ ರಣವೀರ್‌ಗೆ ಅಪ್ಲೈ ಆಗಬಹುದಾದ ಒಂದು ಮಾತನ್ನೂ ಸನ್ನಿ ಹೇಳಿದ್ದಾಳೆ. ನನ್ನ ತಲೆಮಾರಿನಲ್ಲಿ, ವಿಶೇಷವಾಗಿ ನನಗೆ ಹಂತ ಹಂತವಾಗಿ ಸ್ಟೆಪ್ ಬೈ ಸ್ಟೆಪ್ ಬೆಳವಣಿಗೆ ದೊರೆಯಿತು. ಹೀಗಾಗಿ ನಮ್ಮ ಯಶಸ್ಸು ದೃಢವಾಗಿತ್ತು. ಆದರೆ ಕೆಲವರು ಸರ್ರನೆ ಮೇಲೆ ಹೋಗ್ತಾರೆ. ಆದ್ರೆ ಅವರು ಬಿದ್ದಾಗ ಅವರಿಗೆ ಬೀಳುವ ಏಟು ಬಲವಾಗಿರುತ್ತೆ. ನಿಮ್ಮಲ್ಲೂ ಕೂಡ ಯೂಟ್ಯೂಬರ್‌ಗಳಲ್ಲಿ, ಇನ್‌ಫ್ಲುಯೆನ್ಸರ್‌ಗಳಲ್ಲಿ ಇದನ್ನು ಕಾಣ್ತೀನಿ. ಬೇರೆಯವರ ವಿಡಿಯೋಗಳಿಗೆ ಮಿಲಿಯಗಟ್ಟಲೆ ವ್ಯೂಸ್ ಸಿಗ್ತಿವೆ, ಆದ್ರೆ ನನಗೆ ಯಾಕೆ ಸಿಗ್ತಿಲ್ಲ ಅಂತ ಕೆಲವರು ಕೊರಗಬಹುದು. ಆದ್ರೆ ಬದ್ಧತೆ, ನಿರಂತರತೆಯಿಂದ ಮಾತ್ರ ಯಶಸ್ಸು ಸಿಗೋಕೆ ಸಾಧ್ಯ ಅಂತಾಳೆ ಸನ್ನಿ.
ರಣವೀರ್ ಅಲಹಾಬಾದಿಯಾ ತಂದೆಯ ಮೇಲೂ ಒಂದು ಕರಾಳ ಪೊಲೀಸ್ ಕೇಸ್ ಇದೆ!
ಹಿಂದಿಯ ಬಿಗ್ ಬಾಸ್ ಶೋ ಮೂಲಕ ಸನ್ನಿ ಭಾರತಕ್ಕೆ ಎಂಟ್ರಿ ಕೊಡ್ತಾಳೆ. ಭಾರತೀಯ ಟಿವಿ ವೀಕ್ಷಕರ (ಪೋರ್ನ್ ನೋಡುವವರಿಗೆ ಆಕೆಯ ಪರಿಚಯ ಮೊದಲೇ ಇತ್ತೆನ್ನಿ!) ಕಣ್ಣಿಗೆ ಆಕೆ ಬಿದ್ದದ್ದು ಹಾಗೆ. ನಂತ್ರ ಆಕೆ ಬಿಗ್‌ಬಾಸ್‌ನಲ್ಲಿ ಖ್ಯಾತಿ ಗಳಿಸಿದಳು. ಅಲ್ಲಿಂದ ಹಿಂದಿ ಸಿನಿಮಾಗೆ ಎಂಟ್ರಿ ಕೊಟ್ಟಳು. ಆಕೆ ಹೇಳೋ ಪ್ರಕಾರ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಆಕೆಗೆ ಅಂಥಾ ಮಹತ್ವಾಕಾಂಕ್ಷೆ ಏನೂ ಇರಲಿಲ್ವಂತೆ. ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಹೋಗೋಣ ಅಂದುಕೊಂಡು ಬಂದಳಂತೆ. ಆದ್ರೆ ಬಿಗ್ ಬಾಸ್ ಶೋ ಅಲ್ಲಿನ ಸ್ಪರ್ಧಿಗಳನ್ನು ಸೈಕಾಲಾಜಿಕಲ್ ಆಗಿ ಕೆಡವಿಹಾಕುತ್ತದೆ ಎಂಬುದು ಆಕೆಯ ಅಭಿಪ್ರಾಯ. ಮೊದಲನೇದಾಗಿ ಸಮಯದ ಅರಿವೇ ಇರೋಲ್ಲ. ಹಸಿವಾದಾಗ ಊಟದ ಸಮಯ ಆಯ್ತು ಅಂತ ಅರ್ಥ ಮಾಡ್ಕೋಬೇಕು. ಆಗ ಡೇನಿಯಲ್ ಜೊತೆ ನಾನು ಡೇಟಿಂಗ್ ಮಾಡ್ತಾ ಇದ್ದೆ. ಅವನು ನನ್ನ ಬಿಗ್ ಬಾಸ್ ಶೋಗೆ ಬಿಟ್ಟು ಹೋಗಿದ್ದ ಅಂತಾಳೆ.
ರಣವೀರ್‌ಗೆ ಮತ್ತೊಂದು ಶಾಕ್, ಯೂಟ್ಯೂಬರ್ ಅನ್‌ಫಾಲೋ ಮಾಡಿದ ಯುವರಾಜ್ -ಕೊಹ್ಲಿ
ಇನ್ನು ಕೆನಡಾದಲ್ಲಿ, ಅಮೆರಿಕದಲ್ಲಿ ಮನೆಗಳನ್ನು ಹೊಂದಿರೋ ಸನ್ನಿ, ಅಲ್ಲಿ ಹೋಗಿ ನೆಲೆಸೋದಿಲ್ವಂತೆ. ನಿಜಕ್ಕೂ ನೀನು ಎಲ್ಲಿರೋಕೆ ಬಯಸ್ತೀಯ ಅನ್ನೋ ಪ್ರಶ್ನೆಗೆ ಅವಳು ಹೇಳಿದ್ದು- ಮುಂಬಯಿಯೇ ನನಗೆ ಅತ್ಯಂತ ಇಷ್ಟದ ಜಾಗ. ಇಲ್ಲಿಯೇ ಇರೋಕೆ ಇಷ್ಟಪಡ್ತೀನಿ. ನನ್ನ ಕೆರಿಯರ್, ಬ್ಯುಸಿನೆಸ್, ಮಕ್ಕಳನ್ನು ಬೆಳೆಸೋಕೆ ಎಲ್ಲದಕ್ಕೂ ಇದು ಅತ್ಯಂತ ಬೆಸ್ಟ್ ಜಾಗ. ಇದನ್ನು ನನ್ನ ಹೃದಯದಿಂದ ಹೇಳ್ತಿದೀನಿ ಅಂತಾಳೆ.
