Asianet Suvarna News Asianet Suvarna News

ಮೋಹನ್‌ಲಾಲ್‌ ಮಗಳು ಏನ್ಮಾಡ್ತಾಳೆ ಗೊತ್ತೇ? ಕೇಳಿದ್ರೆ ಆಶ್ಚರ್ಯಪಡ್ತೀರಿ!

ಮಲಯಾಳಂನ ಸೂಪರ್ ಸ್ಟಾರ್ ಮೋಹನ್‌ಲಾಲ್‌ ಅವರ ಮಗಳು ವಿಸ್ಮಯ ಏನ್ ಮಾಡ್ತಿದಾಳೆ ಅಂತ ಕೇಳಿದ್ರೆ ನೀವು ಆಶ್ಚರ್ಯಪಡ್ತೀರಿ.

What malayalam superstar Mohanlals daughter doing
Author
Bengaluru, First Published Mar 4, 2021, 4:56 PM IST

ಮಲಯಾಳಂ ಚಿತ್ರರಂಗದ ದೊಡ್ಡ ನಟ ಮೋಹನ್‌ಲಾಲ್‌. ಆತನ ಮಗಳು ವಿಸ್ಮಯ. ಏನು ಮಾಡ್ತಿದಾಳೆ ಎಂದು ತಿಳಿದರೆ ನಿಮಗೆ ಅಚ್ಚರಿ ಆಗಬಹುದು.

ವಿಸ್ಮಯ ಮೋಹನ್‌ಲಾಲ್‌ ಎಂಬ ಹೆಸರಿನಲ್ಲಿ ಈಕೆ ಕವಿತೆಗಳನ್ನು ಬರೆದಿದಾಳೆ. ಈಕೆ ಬರೆದ ಕವಿತೆಗಳನ್ನು ಪ್ರತಿಷ್ಠಿತ ಪೆಂಗ್ವಿನ್‌ ಪ್ರಕಾಶನ ಪ್ರಕಟಿಸಿದೆ. ಇಂಗ್ಲಿಷ್‌ನಲ್ಲಿರುವ ಈ ಕವಿತೆಗಳ ಸಂಕಲನದ ಹೆಸರು ಗ್ರೇನ್ಸ್‌ ಆಫ್‌ ಸ್ಟಾರ್‌ಡಸ್ಟ್‌. ಇದನ್ನು ಇತ್ತೀಚೆಗೆ ಸ್ವತಃ ಆಕೆಯ ತಂದೆ, ನಟ ಮೋಹನ್‌ಲಾಲ್‌ ಬಿಡುಗಡೆ ಮಾಡಿದರು.

ವಿವಾದಗಳಿಗೆ ಹೆದರಿ ಮಹಾಭಾರತ ಪ್ರಾಜೆಕ್ಟ್‌‌ ಕೈ ಬಿಟ್ರಾ ಆಮೀರ್‌ ಖಾನ್‌? ...

ಮೋಹನ್‌ಲಾಲ್‌ ಥರವೇ ಉರುಟಾದ ಮುಖ ಹೊಂದಿರುವ ಈ ಚೆಲುವೆ, ಚಿತ್ರರಂಗದ ಗ್ಲಾಮರಸ್ ಜಗತ್ತಿಗೆ ಮನಸೋತಿಲ್ಲ. ನಟಿಸಲು ಮುಂದಾಗಿಲ್ಲ. ಬದಲಾಗಿ ತನ್ನ ಕ್ರಿಯೇಟಿವಿಟಿಯನ್ನು ಬೇರೆ ಕಡೆ ಅಭಿವ್ಯಕ್ತಿಸಲು ಕಲಿಯುತ್ತಿದ್ದಾಳೆ. ಅದರ ಫಲವೇ ಈ ಕವನ ಸಂಕಲನ. ಇದೂ ಕೂಡ ತುಂಬ ಯೊಚಿಸಿ ತಂದುದಲ್ಲ. ಈಕೆಗೊಬ್ಬ ಸೋದರನಿದ್ದಾನೆ, ಇವನ ಹೆಸರು ಪ್ರಣವ್‌. ವಿಸ್ಮಯಳ ಒಂದು ಅಭ್ಯಾಸ ಎಂದರೆ ತನ್ನ ಯೋಚನೆಗಳನ್ನು ಒಂದು ನೋಟ್‌ಬುಕ್‌ನಲ್ಲಿ ಬರೆದಿಡುವುದು ಹಾಗೂ ಅದಕ್ಕೆ ಸ್ಕೆಚ್‌ಗಳನ್ನು ಮಾಡುವುದು. ಹಾಗೆ ಮಾಡಿದ ನೋಟ್‌ಬುಕ್‌ಗಳನ್ನು ಒಂದು ದಿನ ನೋಡುತ್ತಿದ್ದಾಗ, ಪ್ರಣವ್‌, ಇದನ್ನೊಂದು ಸಂಕಲನವಾಗಿ ತರುವ ಐಡಿಯಾ ನೀಡಿದನಂತೆ. ಹಾಗೆ ಬಂದ ಪುಸ್ತಕ ಇದು. 

ವಿಸ್ಮಯ ಪ್ರಿವಲೆಜ್ಡ್‌ ಚೈಲ್ಡೇ. ಆಕೆ ಕಲಿತದ್ದು ಊಟಿಯ  ಶ್ರೀಮಂತರ ವಸತಿ ಶಾಲೆಯಲ್ಲಿ. ಕಲಾ ವಿಷಯದಲ್ಲಿ ಆಕೆ ನ್ಯೂಯಾರ್ಕ್‌. ಪ್ರೇಗ್, ಲಂಡನ್‌ ಮುಂತಾದ ಕಡೆಗೆಲ್ಲ ಹೋಗಿ ಕಲಿತಿದ್ದಾಳೆ. ಸಾಕಷ್ಟು ಅಧ್ಯಯನ ಮಾಡಿದ ಹುಡುಗಿ. ಇವೆಲ್ಲ ಒಂದೇ ಸಲ ಬರೆದವುಗಳಲ್ಲ. ಜೀವನದ ಬೇರೆ ಬೇರೆ ಹಂತಗಳಲ್ಲಿ ಬರೆದಂಥವು.  ಮೋಹನ್‌ಲಾಲ್‌ ಕೂಡ ತನ್ನ ಮಗಳ ಈ ಪ್ರತಿಭೆಯ ಬಗ್ಗೆ ಬಹಳ ರೋಮಾಂಚಿತರಾಗಿದ್ದಾರೆ. ಮಗಳ ಪದ್ಯ ಸಂಕಲನಕ್ಕೆ ಅವರೇ ಮುನ್ನುಡಿ ಬರೆದಿದ್ದು, ಅವರೇ ಬಿಡುಗಡೆ ಕೂಡ ಮಾಡಿದ್ದಾರೆ. ಅವರು ಅದನ್ನು ಓದುತ್ತಿರುವ ಒಂದು ಫೋಟೋವನ್ನು ಕೂಡ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿದ್ದಾರೆ.

ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ! ...

ವಿಸ್ಮಯ ಬಳಿ ಇನ್ನಷ್ಟು ವಿಸ್ಮಯಕಾರಿಯಾದ ಒಂದಷ್ಟು ಪ್ರತಿಭೆಗಳೂ ಇವೆ. ಈಕೆ ಡ್ಯಾನ್ಸ್ ಮಾಡ್ತಾಳೆ. ಪೇಂಟಿಂಗ್‌ ಮಾಡ್ತಾಳೆ. ಸಂಗೀತ ಹೇಳುವುದೂ ಗೊತ್ತು. ರಂಗಭೂಮಿ ನಟನೆಯೂ ಇವಳಿಗೆ ಗೊತ್ತು. ಪ್ರಕೃತಿಯಿಲ್ಲಿ ಸುಮ್ಮನೇ ಸುತ್ತಾಡುವುದು, ಗುಡ್ಡಬೆಟ್ಟ ತಿರುಗುವುದು ಬಹಳ ಇಷ್ಟ. ಥಾಯ್ಲಂಡ್‌ನ ಮಾರ್ಷಲ್‌ ಆರ್ಟ್‌ ಯುದ್ಧಕಲೆ ಮುಯಿ ಥಾಯ್‌ ಅನ್ನೂ ಕಲಿತಿದ್ದಾಳೆ. ಎಲ್ಲರದಲ್ಲೂ ತನ್ನ ತಂದೆ ತಾಯಿ ಉತ್ತೇಜಕವಾಗಿ ಇದ್ದಾರೆ ಎಂಬುದು ಆಕೆಯ ಖುಷಿ. ಕಾದಂಬರಿ ಅಥವಾ ಕತೆ ಬರೆಯುವುದು, ತಂದೆಯ ಚಲನಚಿತ್ರಕ್ಕೆ ಸ್ಕ್ರೀನ್ ಪ್ಲೇ ಬರೆಯುವುದು? ಆ ಪ್ರಶ್ನೆ ಮುಂದಿದೆ, ಕಾಲ ಕೂಡಿಬಂದಿಲ್ಲ. 

‘ಒಂದು ಪೆನ್ಸಿಲ್‌ ನನ್ನ ಹೃದಯದೊಳಗೆ/ ಸೀಸ ನೇರವಾಗಿ ದಾರಿಯನ್ನು ಕೊರೆಯುತ್ತಿದೆ/ ಪದಗಳು ರಕ್ತದಂತೆ ಹರಿಯುತ್ತಿವೆ’ ಎಂಬುದು ಈಕೆಯ ಕವನದ ಒಂದು ಸಾಲು. ‘ಮತ್ತೆ ಅದನ್ನು ಸಂಭವಿಸಲು ಬಿಡುವುದು ಹೇಗೆ/ನನ್ನ ಹೃದಯವ ಮತ್ತೆ ಹೇಗೆ ಕೊಟ್ಟುಬಿಡಲಿ?/ ಈಗ ತಾನೇ ಅದನ್ನು ಮರಳೀ ಪಡೆದುಕೊಂಡಿರುವೆನಲ್ಲವೇ’ ಎಂಬುದು ಇನ್ನೊಂದು ಕವನದ ಸಾಲುಗಳು.

ಕಾಡನ್ ಟ್ರೈಲರ್ ಬಿಡುಗಡೆ: ಹೊಸ ಅವತಾರದಲ್ಲಿ ರಾಣಾ ದಗ್ಗುಬಾಟಿ ...

ಇವಳ ಕವನಗಳು ಸಾಮಾನ್ತವಾಗಿ ಮನಸ್ಸಿನ ಮೇಲ್ಪದರದ ಭಾವನೆಗಳು, ಪ್ರೇಮ ಇತ್ಯಾದಿ ಸಂಗತಿಗಳನ್ನು ವಸ್ತುವಾಗಿ ಇರಿಸಿಕೊಂಡಿವೆ. ‘ನನ್ನ ಮನಸ್ಸು/ ಅಮೂರ್ತ ಪೇಂಟಿಂಗ್‌/ ನನ್ನ ಯೋಚನೆಗಳು/ ಅವುಗಳಿಗೆ ಆರಂಭವೇ ಇಲ್ಲ/ ಮಧ್ಯದಲ್ಲೆಲ್ಲೋ ಸಿಕ್ಕಿಕೊಂಡಿವೆ/ ನಾನು ವೃತ್ತಾಕಾರವಾಗಿ ತಿರುಗುತ್ತಿದ್ದೇನೆ/ ಬಣ್ಣಗಳಲ್ಲಿ ಮೀಯುತ್ತಿದ್ದೇನೆ/ ಸವಿಯಾದ ದ್ವಂದ್ವವಿದು’ ಇದು ಸಂಕಲನದ ಇನ್ನೊಂದು ಕವನ.

Follow Us:
Download App:
  • android
  • ios