ಭಾರತೀಯ ಕ್ರಿಕೆಟ್‌ ರಂಗದ ದಂತಕತೆಮ ಕ್ಯಾಪ್ಟನ್‌ ಕೂಲ್‌  ನಿವೃತ್ತಿಯ ಘೋಷಣೆ ಎಲ್ಲರಿಗೂ ಹೃದಯ ಭಾರ ಮಾಡುವಂಥ ವಿಷಯವೇ. ಸಚಿನ್‌ ತೆಂಡುಲ್ಕರ್‌ ಅವರಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೆ ಎಲ್ಲರೂ ಅವರ ಕೊಡುಗೆಯನ್ನು ನೆನೆಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಮತ್ತು ನಟಿ ಅನುಷ್ಕಾ ಶೆಟ್ಟಿ ಕೂಡ ಧೋನಿ ಆಟದ ಬಗ್ಗೆ ತಮ್ಮ ನೆನಪಿನ ಕೂಲ್‌ ಕೂಲ್‌ ನೋಟ್ ಒಂದನ್ನು ಬರೆದಿದ್ದಾರೆ. ಅದು ಈಗ ವೈರಲ್ ಆಗಿದೆ. 
ಅದು ೨೦೧೧ರ ವಿಶ್ವಕಪ್‌ ಫೈನಲ್‌ ಪಂದ್ಯ. ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯುತ್ತಿತ್ತು.

ಆಗ ಅಲ್ಲಿ ಮಹೇಶ್‌ ಬಾಬು ಪ್ರೇಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು. ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಿದ್ದ ಶ್ರೀಲಂಕಾ ತಂಡ, ಕುಮಾರ ಸಂಗಕ್ಕರ ನೇತೃತ್ವದಲ್ಲಿ ೨೭೪ ರನ್‌ಗಳ ಟಫ್ ಚಾಲೆಂಜ್‌ ಅನ್ನು ಭಾರತದ ಮುಂದಿಟ್ಟಿತ್ತು. ಧೋನಿಯ ನೇತೃತ್ವದಲ್ಲಿ ಭಾರತ ತಂಡ ಚೇಸಿಂಗ್‌ ನಡೆಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹವಾಗ್ ಸೊನ್ನೆಗೆ ಔಟಾಗಿದ್ದರು. ಇನ್ನೊಬ್ಬ ಆರಂಭಿಕ ದಾಂಡಿಗ ಸಚಿನ್ ತೆಂಡುಲ್ಕರ್‌ ೧೮ ರನ್‌ ಸಿಡಿಸಿ ಔಟಾಗಿದ್ದರು. ನಂತರ ಬಂದ ಗೌತಮ್‌ ಗಂಭೀರ್‌ ೯೭ ರನ್‌ ಪೇರಿಸಿದ್ದರು. ಕೊನೆಯದಾಗಿ ಧೋನಿ ಹಾಗೂ ಯುವರಾಜ್‌ ಸಿಂಗ್‌ ಜೊತೆಯಾಟದಲ್ಲಿ ೧೧೨ ರನ್‌ಗಳನ್ನು ಸೇರಿಸಿದರು. ತಮ್ಮ ಕೊನೆಯ ಬಾಲನ್ನು ಸಿಕ್ಸರ್‌ಗೆ ಎತ್ತುವ ಮೂಲಕ ಧೋನಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇದು ಭಾರತೀಯರು ಎಂದೂ ಮರೆಯದ ದಿನವಾಗಿತ್ತು. ಭಾರತ ಎರಡನೇ ವಿಶ್ವಕಪ್‌ ಗೆದ್ದ ಸಂಭ್ರಮ ಆಚರಿಸಿಕೊಂಡಿತು.

ಮಹೇಶ್‌ ಬಾಬು ತಮ್ಮ ಟ್ವಿಟ್ಟರ್‌ನಲ್ಲಿ, ''ಧೋನಿಯವರ ಆ ಅಭೂತಪೂರ್ವ ಸಿಕ್ಸರ್‌ ಅನ್ನು ಹೇಗೆ ಮರೆಯಲು ಸಾಧ್ಯ! ವರ್ಲ್ಡ್ ಕಪ್‌ ಚಾಂಪಿಯನ್ಸ್ ೨೦೧೧ ಇಂಡಿಯಾ! ವಾಂಖೇಡೆ ಸ್ಟೇಡಿಯಂನಲ್ಲಿ ನಾನಿದ್ದೆ. ಹೆಮ್ಮೆಯಾಗುತ್ತಾ ಇತ್ತು. ಕಣ್ಣೀರು ಸುರಿಯುತ್ತಾ ಇತ್ತು. ಮುಂದೆಂದೂ ಭಾರತದ ಕ್ರಿಕೆಟ್‌ ಮೊದಲಿನಂತೆ ಇರಲೇ ಇಲ್ಲ. ಮಹೀಂದ್ರ ಧೋನಿ, ಲೆಜೆಂಡ್‌. ತಲೆಬಾಗುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ಲೋಕದ ದಂತಕಥೆ ಎಂ ಎಸ್ ಧೋನಿ; ಧೋನಿಗೆ ಸರಿಸಾಟಿಯುಂಟೇ..? 
ತೆಲುಗಿನ ಇನ್ನೊಬ್ಬ ನಟಿ ಅನುಷ್ಕಾ ಶೆಟ್ಟಿ ಕೂಡ ಹೃದಯಸ್ಪರ್ಶಿಯಾದ ಸಾಲುಗಳನ್ನು ಧೋನಿ ಬಗ್ಗೆ ಬರೆದುಕೊಂಡಿದ್ದಾರೆ- ನೀವು ಚಾಂಪಿಯನ್‌ಗಳ ಚಾಂಪಿಯನ್. ನೀವು ನಮ್ಮ ಚಾಂಪಿಯನ್‌ ಸಾಮರ್ಥ್ಯದ ಮೇಲೆ ನಂಬಿಕೆ ಇಡುವಂತೆ ಮಾಡಿದಿರಿ. ನೀವು ಗೆದ್ದ ಪ್ರತಿಯೊಂದು ಪಂದ್ಯವೂ ನಮಗೆ ಹೆಮ್ಮೆ. ಗೆಲ್ಲುವುದನ್ನು ಹ್ಯಾಬಿಟ್‌ ಆಗಿಸಿದಿರಿ. ಅದು ನಿಮಗೇ ಯೂನಿಕ್‌ ಆದಂಥ ಹ್ಯಾಬಿಟ್. ನೀವು ಎಲ್ಲ ಕ್ರಿಕೆಟ್‌ ಫ್ಯಾನ್‌ಗಳ ಕನಸನ್ನು ವಾಸ್ತವ ಮಾಡಿದಿರಿ. ಈಗ ನಿಮ್ಮ ರಿಟೈರ್‌ಮೆಂಟ್‌ನ ವಾಸ್ತವಕ್ಕೆ ನಮ್ಮನ್ನು ತೆರೆದಿದ್ದೀರಿ. ಇದರಿಂದ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಆದರೆ ನೀವು ಯುವ ಆಟಗಾರರಲ್ಲಿ ಬಿತ್ತಿದ ಸ್ಫೂರ್ತಿಯ ಕಿಡಿ, ಚಾಂಪಿಯನ್‌ಶಿಪ್‌ ತುರುಸುಗಳು ಮುಂದೆ ಬೆಳೆಯುತ್ತವೆ ಎಂಬ ಭರವಸೆಯನ್ನು ಮೂಡಿಸಿದ್ದೀರಿ. ನಿಮ್ಮ ಸಾಧನೆಗಳಿಗಾಗಿ ಕಂಗ್ರಾಚ್ಯುಲೇಶನ್, ಹಾಗೂ ನೆಕ್ಸ್ಟ್ ಇನಿಂಗ್ಸ್‌ಗೆ ಬೆಸ್ಟ್‌ ವಿಷಸ್‌''  ಅಂತ ಅನುಷ್ಕಾ ಬರೆದುಕೊಂಡಿದ್ದಾರೆ. 

ಜಾಗತಿಕ ಕ್ರಿಕೆಟ್‌ನ ಕೂಲ್ ಕ್ಯಾಪ್ಟನ್ ಮಹೇಂದ್ರ..! 
ತೆಲುಗಿನ ಮಹಾನ್‌ ನಿರ್ದೇಶಕ ರಾಜಮೌಳಿ ಕೂಡ ಹೀಗೆ ಬರೆದಿದ್ದಾರೆ- "ನೀವು ನಮ್ಮನ್ನು ಎಂಟರ್‌ಟೇನ್‌ ಮಾಡಿದಿರಿ. ನೀವು ನಾವು ಹೆಮ್ಮೆ ಪಡುವಂತೆ ಮಾಡಿದಿರಿ. ಉತ್ಕಟತೆಯಿಂದ ನರ ಸಿಡಿಯುವಂಥ ಸನ್ನಿವೇಶದಲ್ಲೂ ಕೂಲ್ನೆಸ್‌ ಕಳೆದುಕೊಳ್ಳದೆ ನಿಭಾಯಿಸಿದಿರಿ. ನೀವು ನಮಗೆ ಸ್ಫೂರ್ತಿ ತುಂಬಿದಿರಿ. ನಿಮ್ಮ ಈ ನಿವೃತ್ತಿಯ ಗಳಿಗೆ ನಮಗೆ ಕಷ್ಟ. ನೀವು ಮುಂದಿನ ತಲೆಮಾರಿಗೂ ಸ್ಫೂರ್ತಿಯ ಸೆಲೆ.'' ಅಂತ ಬರೆದುಕೊಂಡಿದ್ದಾರೆ. 

ಯಾರಿಗೂ ಬೇಡವಾಗಿದ್ದ ಟಿ20 ನಾಯಕತ್ವ ವಹಿಸಿಕೊಂಡಿದ್ದ ಧೋನಿ..!