Alia Bhatಗೆ ಸದ್ಯ ಮದ್ವೆ ಬೇಡ್ವಂತೆ, ಲವ್ ಗಿವ್ವು ಪರ್ವಾಗಿಲ್ವಂತೆ!
ರಣಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಡೇಟಿಂಗ್ ಮಾಡ್ತಿರೋದು, ಇಬ್ಬರೂ ಲಾಂಗ್ ಡ್ರೈವ್ ಹೋಗೋದೆಲ್ಲ ಗುಟ್ಟಾಗಿ ಉಳಿದಿಲ್ಲ. ಇಬ್ರಿಬ್ರೂ ಮದ್ವೆ ಆಗ್ತಾರಂತೆ ಅನ್ನೋ ಸುದ್ದಿ ಬಹಳ ಕಾಲದಿಂದ ಇದೆ. ಆದ್ರೆ ಆಲಿಯಾಗೆ ಸದ್ಯಕ್ಕೆ ಮದ್ವೆ ಬೇಡ್ವಂತೆ.
ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia Bhat) ಸದ್ಯ ಗಂಗೂಬಾಯಿ ಕಾಠಿಯಾವಾಡಿ (Gangubai Kathiavadi) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿನ ಅವ್ರ ಪರ್ಫಾಮೆನ್ಸ್ ಕಂಡು ಬಾಲಿವುಡ್ ಗೆ ಬಾಲಿವುಡ್ಡೇ ಹಾಡಿ ಹೊಗಳ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಆಲಿಯಾ ಅನೇಕ ಕಡೆ ಸಂದರ್ಶನ ನೀಡುತ್ತಿದ್ದಾರೆ. ಹೀಗೆ ನಡೆದ ಅನೇಕ ಸಂದರ್ಶನಗಳಲ್ಲಿ ಅವರ ಪರ್ಸನಲ್ ವಿಚಾರಗಳನ್ನು ಸಹಜವಾಗಿಯೇ ಕೇಳಿದ್ದಾರೆ. ಅದರಲ್ಲಿ ಬಹುಮುಖ್ಯವಾದದ್ದು ಇವರ ಮತ್ತು ರಣಬೀರ್ ಕಪೂರ್ (Ranbir Kapoor) ಸಂಬಂಧದ ಬಗ್ಗೆ. ಹೀಗೊಂದು ಸಂದರ್ಶನದ ವೇಳೆ ಮಾತನಾಡುವಾಗ ನಿಮ್ಮಿಬ್ಬರ ಮದುವೆ ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬಂದಿದೆ. ಆದರೆ ಇದಕ್ಕೆ ಆಲಿಯಾ ಉತ್ತರಿಸಿದ ರೀತಿ ಒಂದು ಕ್ಷಣ ಸಂದರ್ಶಕರನ್ನೇ ತಬ್ಬಿಬ್ಬು ಮಾಡಿದೆ. ಮತ್ತು ಒಂದಿಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
ಅನುಮಾನ ಯಾಕೆ ಅಂದರೆ ಸೆಲೆಬ್ರಿಟಿಗಳ ಲೈಫನಲ್ಲಿ ಲವ್, ಡೇಟಿಂಗ್ (Dating) ಗಳಷ್ಟೇ ಬ್ರೇಕಪ್ಪೂ ಸಹಜ. ಇವತ್ತು ಡೇಟಿಂಗ್ ಮಾಡ್ತೀವಿ ಅಂತ ಓಡಾಡಿದ ಜೋಡಿ ಮರುದಿನ ಬ್ರೇಕಪ್ಪು ಅಂತ ಸ್ಟೇಟಸ್ ಹಾಕ್ಕೊಳ್ಳೋದು ತೀರಾ ನಾರ್ಮಲ್. ಸೋ, ಇಲ್ಲಿ ಆಲಿಯಾ ಉತ್ತರಿಸಿದ ರೀತಿಯೂ ಇಂಥಾ ಅನುಮಾನಗಳಿಗೆ ಎಡೆ ಮಾಡಿದೆ.
Social Media ಯೂಸರ್ ಕೇಳಿದ ಪ್ರಶ್ನೆಗೆ ಕೋಪಗೊಂಡ ಸಮಂತಾ ರುತ್ ಪ್ರಭು!
ರಣಬೀರ್ ಕಪೂರ್ ಹಿಸ್ಟರಿಯೂ ಇದಕ್ಕೊಂದು ಕಾರಣ ಅನ್ನಬಹುದೇನೋ. ರಣಬೀರ್ ಕಪೂರ್ ಗೆ ಯಾರಾದರೂ ನೀಡಬಹುದಾದ ಬೆಸ್ಟ್ ಗಿಫ್ಟ್ ಅಂದರೆ ಕಾಂಡೋಮ್ ಅಂತ ಕೆಲವು ಸಮಯದ ಹಿಂದೆ ದೀಪಿಕಾ ಪಡುಕೋಣೆ (Deepika Padukone) ಹೇಳಿದ್ದು ವೈರಲ್ (Viral) ಆಗಿತ್ತು. ಇದು ರಣಬೀರ್ ಎಂಥಾ ವ್ಯಕ್ತಿ ಅನ್ನೋದನ್ನೂ ಸಾಮಾನ್ಯ ಜನರಿಗೆ ರಿವೀಲ್ ಮಾಡಿತ್ತು. ರಣಬೀರ್ ಕಪೂರ್ ಬಹಳ ಕಾಲ ದೀಪಿಕಾ ಪಡುಕೋಣೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಗ್ರೀಸ್ ಫಕ್ರಿ (Nargis Fakri) ಜೊತೆಗೆ ರಣಬೀರ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತು ಕೇಳಿಬಂದಿತ್ತು. ಕತ್ರಿನಾ ಕೈಫ್ (Katrina Kaif) ಕೆಲವು ಕಾಲ ರಣಬೀರ್ ಅವರ ಗರ್ಲ್ ಫ್ರೆಂಡ್ ಆಗಿದ್ರು. ಆಮೇಲೆ ಬ್ರೇಕಪ್ ಆಗಿತ್ತು. ಇವರಲ್ಲದೇ ಕಾಲೇಜು ದಿನಗಳಲ್ಲಿ ಆವಂತಿಕಾ ಮಲ್ಲಿಕ್ ಜೊತೆಗೆ ಅಫೇರ್ ಇತ್ತು. ಸೋನಂ ಕಪೂರ್ (Sonam Kapoor) ಜೊತೆಗೂ ಓಡಾಟ ಇತ್ತು. ಹೀಗೆ ರಣಬೀರ್ ಜೊತೆ ಓಡಾಡಿಕೊಂಡಿದ್ದ ಹೆಚ್ಚಿನ ಹುಡುಗಿಯರು ಈಗ ಮದುವೆ ಆಗಿದ್ದಾರೆ ಇಲ್ಲವೇ ಹೊಸ ಬಾಯ್ ಫ್ರೆಂಡ್ ಹುಡುಕಿಕೊಂಡಿದ್ದಾರೆ. ಕಳೆದ ಕೆಲವು ಸಮಯದಿಂದ ರಣಬೀರ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿರೋದು ಆಲಿಯಾ ಭಟ್.
Gangubai Kathiawadi ಮೇರಿ ಜಾನ್ ಹಾಡು ರೀಲಿಸ್ ನಟನೊಂದಿಗೆ ಆಲಿಯಾ ಭಟ್ ರೊಮ್ಯಾನ್ಸ್!
ರಣಬೀರ್ ಆಲಿಯಾ ಜೋಡಿ ಬಾಲಿವುಡ್‌ನಲ್ಲಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಕಳೆದ ಕೆಲವು ಸಮಯದಿಂದ ಇವರಿಬ್ಬರ ಮದುವೆ ಬಗ್ಗೆ ಎಲ್ಲೆಲ್ಲೂ ಚರ್ಚೆ. ಒಮ್ಮೆಯಂತೂ ಆಲಿಯಾ ರಣಬೀರ್ ಅವರ ಮದುವೆಯ ಇನ್ವಿಟೇಶನ್ ಅಂತ ಒಂದಿಷ್ಟು ಕಾರ್ಡ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿದವು. ಇದೇ ದಿನ ಇವ್ರು ಇಂಥಾ ಕಡೆ ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿ ನಿಜವೇ ಇರಬೇಕು ಅಂತ ಜನ ನಂಬೋವಷ್ಟು ಲೆವೆಲ್‌ಗೆ ಓಡಾಡಿತ್ತು. ಆಲಿಯಾ ಅವರೂ ತಮ್ಮ ರಿಲೇಶನ್‌ಶಿಪ್‌ಅನ್ನು ಗುಟ್ಟಾಗಿಟ್ಟಿರಲಿಲ್ಲ. ಸಂದರ್ಶನಗಳಲ್ಲಿ ರಣಬೀರ್ ಬಗ್ಗೆ ಮಾತಾಡೋದು, ಅವರ ಜೊತೆಗಿನ ಒಡನಾಟ ಹಂಚಿಕೊಳ್ಳೋದು ಕಾಮನ್ ಆಗಿತ್ತು. ಇದರ ಜೊತೆಗೆ ಈ ಜೋಡಿ ಅನೇಕ ಕಡೆ ಜೊತೆಯಾಗಿ ಓಡಾಡ್ತಿದ್ದು, ಜನ ಇವರನ್ನು ಮದುವೆ ಆಗೋ ಜೋಡಿ ಅಂತಲೇ ಭಾವಿಸಿದ್ರು.
ಆದರೆ ಸಂದರ್ಶನದಲ್ಲಿ ಆಲಿಯಾ ಮದ್ವೆ ಎಲ್ಲ ಸದ್ಯಕ್ಕಿಲ್ಲ ಅಂದಿದ್ದಾರೆ. ಹಾಗಿದ್ರೆ ಬೇಕಪ್ಪು, ಗೀಕಪ್ಪು ಏನಾದ್ರೂ.. ಅನ್ನೋ ಪ್ರಶ್ನೆಯನ್ನು ಕೇಳಲೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದ ನಿರೂಪಕರ ಗೊಂದಲವನ್ನೂ ಆಲಿಯಾ ಕ್ಲಿಯರ್ ಮಾಡಿದ್ದಾರೆ. ಮದ್ವೆ ಆಗೋದಕ್ಕೆ ಒಂದು ಮನಸ್ಥಿತಿ ಬೇಕು, ಇಬ್ಬರಿಗೂ ಮದುವೆ ಆಗೋಣ ಈಗ ಅಂತ ಅನಿಸಬೇಕು. ಹಾಗಂತ ನಮ್ಮಿಬ್ಬರ ಸಂಬಂಧ ಹಾಗೇ ಇದೆ ಅಂದಿದ್ದಾರೆ. ಅಲ್ಲಿಗೆ ಎಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೊತೆಗೆ ಆಲಿಯಾ ಮತ್ತು ರಣಬೀರ್ ಮುಂದಿನ ತಿಂಗಳು ಮದ್ವೆ ಆಗ್ತಾರೆ, ಈ ವರ್ಷ ಮದ್ವೆ ಪಕ್ಕಾ ಅಂತ ಅಂದುಕೊಂಡವರಿಗೆ ಸದ್ಯ ನಿರಾಸೆಯಾಗಿದೆ.
Kareena Home: ಬಾಲಿವುಡ್ ಬೇಬೋ ಹೊಸ ಮನೆ ವಿನ್ಯಾಸ ನೋಡಿ!