Social Media ಯೂಸರ್ ಕೇಳಿದ ಪ್ರಶ್ನೆಗೆ ಕೋಪಗೊಂಡ ಸಮಂತಾ ರುತ್ ಪ್ರಭು!
ಸೌತ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಈ ದಿನಗಳಲ್ಲಿ ಅವರು ಚಲನಚಿತ್ರಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ, ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ಸಂವಾದ ವಿಭಾಗವನ್ನು ಇಟ್ಟುಕೊಂಡು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆಕೆ ಅಭಿಮಾನಿಗಳೊಂದಿಗೆ ಉತ್ತಮ ಸಂಭಾಷಣೆ ನಡೆಸುತ್ತಿದ್ದರು. ಅಷ್ಟರಲ್ಲಿ ಬಳಕೆದಾರರೊಬ್ಬರು ಅವರಿಗೆ ಕೇಳಿದ ಪ್ರಶ್ನೆಯಿಂದ ಆಕೆ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಶ್ನೆ ಕೇಳುದವರಿಗೆ ಕ್ಲಾಸ್ ಕೂಡ ತೆಗೆದು ಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಸಮಂತಾಗೆ Have you reproduced because I wanna reproduce you? ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ವಾಕ್ಯದಲ್ಲಿ reproduce ಪದವನ್ನು ಹೇಗೆ ಬರೆಯುವುದು ಎಂದು ಮೊದಲು ನೀವು ಅದರ ಬಗ್ಗೆ ಗೂಗಲ್ (Google) ಮಾಡಬೇಕು ಎಂದು ಸಮಂತಾ ಉತ್ತರಿಸಿದ್ದರು.
ಇನ್ನೂ, ಸಮಂತಾ ರುತ್ ಪ್ರಭು ಅವರ ವೃತ್ತಿಪರ ಜೀವನದ (Professional Life) ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಸಮಂತಾ ಅವರು ಶಾಕುಂತಲಂ (Shakunthalam) ಸಿನಿಮಾದ ಪೋಸ್ಟರ್ (poster) ಬಿಡುಗಡೆಯಾಯಿತು. ಅದರಲ್ಲಿ ಅವರು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ಅವರ ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಚಿತ್ರದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಹೆಜ್ಜೆ ಹಾಕಿರುವ 'ಊ ಅಂಟಾವಾ' ಹಾಡಿಗೆ ಇಡೀ ಪ್ರಪಂಚವೇ ಫಿದಾ ಆಗಿದೆ
ಕೆಲವು ತಿಂಗಳ ಹಿಂದೆ ಸಮಂತಾ ತನ್ನ ಪತಿ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನ ಪಡೆದ ಮೂರು ತಿಂಗಳ ನಂತರ, ನಾಗಾರ್ಜುನ ಅವರು ತಮ್ಮ ಮಾಜಿ ಸೊಸೆಯ ಬಗ್ಗೆ ಆಘಾತಕಾರಿ ವಿಷಯ ಬಹಿರಂಗಪಡಿಸಿದರು. ಆದರೆ, ನಂತರ ತಮ್ಮ ಹೇಳಿಕೆಯಿಂದ ಹಿಂದೆ ಸರಿದ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದರು.
ನಾಗ ಚೈತನ್ಯ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಬಂಗಾರ್ ರಾಜು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ, ಸಮಂತಾಗೆ ಸಂಬಂಧಿಸಿದಂತೆ ವಿಚ್ಛೇದನದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ನಾವು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಮತ್ತು ಭವಿಷ್ಯದಲ್ಲಿ ಇಬ್ಬರ ಸಂತೋಷಕ್ಕಾಗಿ ಇದನ್ನು ತೆಗೆದುಕೊಳ್ಳಲಾಗಿದೆ. ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ ಎಂದು ಅವರು ಹೇಳಿದರು.
ಸಮಂತಾ ಮತ್ತು ನಾಗ ಚೈತನ್ಯ ಇತ್ತೀಚೆಗೆ ತಮ್ಮ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ಸಂಬಂಧಿಸಿದಂತೆ ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋಗೆ ಬಂದಿದ್ದಾರೆ. ಈ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಅಕ್ಟೋಬರ್ 2021 ರಲ್ಲಿ ತಮ್ಮ ವಿಚ್ಛೇದನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವ ಮೂಲಕ ಸಮಂತಾ ಖಚಿತಪಡಿಸಿದ್ದರು. 'ಸಾಕಷ್ಟು ಚರ್ಚೆಯ ನಂತರ, ನಾಗ ಚೈತನ್ಯ ಮತ್ತು ನಾನು ನಮ್ಮ ಮಾರ್ಗಗಳನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕಕ್ಕೂ ಹೆಚ್ಚು ಕಾಲದ ನಮ್ಮ ಸ್ನೇಹವು ನಮ್ಮ ಸಂಬಂಧದ ತಿರುಳಾಗಿತ್ತು ಎಂಬುದು ನಮ್ಮ ಅದೃಷ್ಟ ಮತ್ತುಭವಿಷ್ಯದಲ್ಲಿಯೂ ನಮ್ಮ ನಡುವೆ ವಿಶೇಷ ಬಾಂಧವ್ಯ ಮುಂದುವರಿಯುತ್ತದೆ ಎಂದು ನಮಗೆ ಖಚಿತವಾಗಿದೆ' ಎಂದು ಸಮಂತಾ ಅವರು ಬರೆದಿದ್ದಾರೆ.