ಬಾಲಿವುಡ್‌ನ ಒಂದು ಕಾಲದ ಸೆಕ್ಸ್ ಬಾಂಬ್ 'ಸತ್ಯ ಹೇಳುವುದಾದರೆ' ಎನ್ನುತ್ತಾ ತಮ್ಮ ಆತ್ಮಕತೆಯಲ್ಲಿ ತಮ್ಮ ಜೀವನದ ಹಲವು ಸೀಕ್ರೆಟ್‌ಗಳನ್ನು ಬಿಚ್ಚಿಟ್ಟಿದ್ದಾರೆ.  

ಬಾಲಿವುಡ್‌ನ ಒಂದು ಕಾಲದ ಪ್ರತಿಭಾವಂತ ನಟಿ, ಸೆಕ್ಸ್‌ ಬಾಂಬ್ ಆಗಿದ್ದ ನೀನಾ ಗುಪ್ತಾ ತಮ್ಮ ಆತ್ಮಕತೆಯನ್ನು ಹೊರತಂದಿದ್ದಾರೆ. ಅದರ ಹೆಸರು 'ಸಚ್ ಕಹೋ ತೋ'- 'ಸತ್ಯ ಹೇಳುವುದಾದರೆ' ಅಂತ. ಇದರಲ್ಲಿ ಆಕೆ ತಮ್ಮ ಒಂದು ಕಾಲದ ಅನೇಕ ಕತೆಗಳನ್ನು ಹೇಳಿದ್ದಾರೆ. 
ನೀನಾ ಗುಪ್ತಾಳಂಥ ವೆಟರನ್ ನಟಿಗೂ ಕಾಸ್ಟಿಂಗ್ ಕೌಚ್ ಅಥವಾ ಪಾತ್ರಕ್ಕಾಗಿ ಸೆಕ್ಸ್ ಅನುಭವ ಆಗಿತ್ತು.

ದಕ್ಷಿಣ ಭಾರತದ ದೊಡ್ಡ ಪ್ರೊಡ್ಯೂಸರ್ ಒಬ್ಬರನ್ನು ಕಾಣಲು ಆಕೆ ಒಂದು ಹೋಟೆಲ್‌ಗೆ ಹೋದರಂತೆ. ಅಲ್ಲಿ ಆತ ಆಕೆಯನ್ನು ಕೂರಿಸಿಕೊಂಡು, ಪಾತ್ರದ ಬಗ್ಗೆ ಹೇಳಿದರಂತೆ. ಅದೇನೂ ದೊಡ್ಡ ಪಾತ್ರ ಆಗಿರಲಿಲ್ಲ. ಆದರೆ ಆಫರ್ ಮಾಡಿದ ಮೊತ್ತ ಮಾತ್ರ ದೊಡ್ಡದಾಗಿತ್ತು. ಆಕೆ ತಾನಿನ್ನು ಹೋಗಬಹುದೇ ಎಂದು ಕೇಳಿದರು. ಆಗ ಆ ಪ್ರೊಡ್ಯೂಸರ್, "ಹೋಗುವುದಾ? ಯಾಕೆ? ನೀನು ಇಲ್ಲೇ ರಾತ್ರಿ ಕಳೆಯುವುದಿಲ್ಲವೇ?' ಎಂದು ಪ್ರಶ್ನಿಸಿದರಂತೆ. ಈಗ ಶಾಕ್ ಆಗುವ ಸರದಿ ನೀನಾರದು. ಮೈಮೇಲೆ ತಣ್ಣೀರು ಸುರುವಿದಂತಾಯ್ತು ಎಂದು ಬರೆದುಕೊಂಡಿದ್ದಾರೆ ನೀನಾ.

ಮಗಳಿಗೆ ಸೆಲ್ಫ್ ಡಿಫೆನ್ಸ್‌ ಬದಲು, ಗೌರವಿಸುವುದ ಹೇಗೆಂದು ಮಗನಿಗೆ ಕಲಿಸಿ: ಓವಿಯಾ ...

ಒಂದು ಬಾರಿ ನೀನಾ ಗುಪ್ತಾ, ತಮ್ಮ ಮಗಳು ಮಸಾಬಾ ಗುಪ್ತಾಗೆ 'ನೀನು ಏನು ಬೇಕಾದರೂ ಆಗು, ಆದರೆ ಬಾಲಿವುಡ್ ನಟಿ ಆಗಬೇಡ' ಎಂದು ಹೇಳಿದ್ದರಂತೆ. ಅದರಲ್ಲೂ ಭಾರತದಲ್ಲಂತೂ ನಟಿಯಾಗುವ ಸಾಹಸ ಮಾಡಲೇಬೇಡ ಎಂದಿದ್ದರಂತೆ. ಬೇರೆ ಎಲ್ಲಾದರೂ ನಿನ್ನ ಚಾನ್ಸ್ ಪ್ರಯತ್ನಿಸು, ಆದರೆ ಇಲ್ಲಿ ಬೇಡ. ನೀನು ಎಂದೂ ಇಲ್ಲಿ ಹೇಮಾಮಾಲಿನ ಅಥವಾ ಆಲಿಯಾ ಭಟ್ ಥರ ಆಗಲಾರೆ ಎಂದಿದ್ದರಂತೆ. ಅದಕ್ಕೆ ಕಾರಣ ಮಸಾಬಾ ಗುಪ್ತಾ ಸ್ವಲ್ಪ ನೋಡುವುದಕ್ಕೆ ಕಪ್ಪಗಾಗಿ, ಕರ್ಲೀ ತಲೆಗೂದಲು ಇರುವುದು ಹಾಗೂ ಆ ಮೂಲಕ ಸ್ವಲ್ಪ ವೆಸ್ಟ್ ಇಂಡಿಯನ್ನರ ಥರ ಕಾಣುತ್ತಾರೆ. ನಮ್ಮ ಬಾಲಿವುಡ್‌ಗೆ ಬಿಳೀ ಚರ್ಮ, ಕಪ್ಪಗಾಗಿ ಹೊಳೆಯುವ ತಲೆಗೂದಲು, ಪರ್‌ಫೆಕ್ಟ್ ಫಿಟ್ ಬಾಡಿ ಮೇಲೆ ಸದಾ ಗೀಳು. ಹೀಗಾಗಿ ಈ ಮಾತು. ಆದರೆ ಮಸಾಬಾ ಈ ಮಾತು ಕೇಳಲಿಲ್ಲ. ಆದರೆ ಆಕೆಗೆ ಬಾಲಿವುಡ್ ಅವಕಾಶಗಳು ಸಿಗಲಿಲ್ಲ. ಬದಲಾಗಿ ಮಸಾಬಾ ಒಳ್ಳೆಯ ಆಲ್ಬಂ ಸಿಂಗರ್ ಹಾಗೂ ಮಾಡೆಲ್ ಆದರು. 

ಮಸಾಬಾ ಗುಪ್ತಾಳ ತಂದೆ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್. ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ತಂದ ಪ್ರಖ್ಯಾತ ಆಟಗಾರ, ಕ್ಯಾಪ್ಟನ್ ಆಗಿದ್ದ ಅವರು ಸಿಡಿಗುಂಡಿನಂತೆ ಆಡುತ್ತಿದ್ದವರು. ಭಾರತಕ್ಕೆ ಬಂದಾಗ ಅವರನ್ನು ಕಂಡು ಮೋಹಿಸಿ, ಜೊತೆಗೆ ಹೋಗಿದ್ದ ನೀನಾ, ಅವರೊಂದಿಗೇ ಬಹುಕಾಲ ಬಾಳಿದ್ದರು. ಆದರೆ ಇಬ್ಬರೂ ಮದುವೆ ಆಗಿರಲಿಲ್ಲ. ಈ ಜೋಡಿಯಲ್ಲಿ ಹುಟ್ಟಿದ ಮಗುವೇ ಮಸಾಬಾ. ಈ ಸಂಬಂಧದ ಬಗ್ಗೆ ನೀನಾ ಸಾಕಷ್ಟು ಬಾರಿ ಮುಕ್ತವಾಗಿ ಹೇಳಿಕೊಂಡಿದ್ದು, ಆತ್ಮಕತೆಯಲ್ಲೂ ಬರೆದಿದ್ದಾರೆ. ಮಸಾಬಾಳನ್ನು ಹೊಟ್ಟೆಯಲ್ಲಿ ಹೊತ್ತಿರುವಾಗಲೇ, ಇನ್ನೊಬ್ಬ ನಟ ಸತೀಶ್‌ ಕೌಶಿಕ್‌ ಅವರು ನೀನಾ ಗುಪ್ತಾಳನ್ನು ಮದುವೆಯಾಗುವ ಆಫರ್ ನೀಡಿದ್ದರು. ಹುಟ್ಟುವ ಮಗು ಕಪ್ಪು ಚರ್ಮ ಹೊಂದಿದ್ದರೆ, ಅದು ನನ್ನದೇ ಮಗು ಎಂದು ನೀನಾ ಹೇಳಬಹುದು. ಯಾರೂ ಸಂಶಯಿಸಲಾರರು. ನಾವು ಮದುವೆಯಾಗಬಹುದು ಎಂದು ಸತೀಶ್ ಭರವಸೆ ನೀಡಿದ್ದರಂತೆ. 

ಬಾಲಿವುಡ್ ಎಂಟ್ರಿಯಾಗ್ತಿದ್ದಾರೆ ಸೌತ್ ಲೇಡಿ ಸೂಪರ್‌ಸ್ಟಾರ್, ಸುದೀಪ್ ವಿಲನ್ ? ...

ವಿವಿಯನ್ ರಿಚರ್ಡ್ಸ್ ಐದು ವರ್ಷಗಳ ಕಾಲ ಆಕೆಯ ಜೊತೆಗೆ ಮಾತಾಡಿರಲೇ ಇಲ್ಲವಂತೆ. ಅದಕ್ಕೆ ಕಾರಣ ಕ್ಯಾನ್ಸಲ್ ಮಾಡಿದ ಒಂದು ಟ್ರಿಪ್. ಮಸಾಬಾಳನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿ ಒಂದು ಟ್ರಿಪ್ ಕ್ಯಾನ್ಸಲ್ ಮಾಡಬೇಕಾಗಿ ಬಂತು. ಆಗ ಸಿಟ್ಟಿಗೆದ್ದ ವಿವಿಯನ್ ನೀನಾಳ ಬಳಿ ಐದು ವರ್ಷ ಮಾತಾಡಿರಲೇ ಇಲ್ಲವಂತೆ. ವಿವಿಯನ್, ಸತೀಶ್ ಕೌಶಿಕ್ ಅಲ್ಲದೆ ಇನ್ನೂ ಒಬ್ಬರನ್ನು ನೀನಾ ಮದುವೆಯಾಗಿದ್ದಳು. ಆದರೆ ಅದು ಬಹುಕಾಲ ಉಳಿಯಲಿಲ್ಲ. 

ಬಾಲಿವುಡ್‌ನ ಅನೇಕ ಸಂಗತಿಗಳ ಬಗ್ಗೆ ನೀನಾ ಉಲ್ಲೇಖಿಸಿದ್ದಾರೆ. ನೀನಾ ಹೆಚ್ಚು ಹೆಚ್ಚು ಗಟ್ಟಿಗತ್ತಿ ಪಾತ್ರಗಳನ್ನು ಬಯಸುತ್ತಿದ್ದರು. ಆದರೆ ಅದಕ್ಕೆ ತಕ್ಕ ಹೀರೋಯಿನ್ ಪಾತ್ರಗಳು ಬರಲಿಲ್ಲ. ಬದಲಾಗಿ ವಿಲನ್ ಅಥವಾ ಕೆಡುಕಿಯ ಪಾತ್ರಗಳು ಆಕೆಗೆ ಸಿಗುತ್ತ ಹೋದವು. ನೀನಾ ಗುಪ್ತಾಳ ಅಗಲವಾದ ಕಂಗಳು ಮತ್ತು ಆಕೆಯ ವ್ಯಕ್ತಿತ್ವ ಅವರ ಪಾತ್ರಪೋಷಣೆಗೆ ಪೂರಕವಾಗಿದ್ದವು.

ಎಷ್ಟೇ ಲವ್ ಮಾಡಿದ್ರು ಸಲ್ಮಾನ್ ಸಂಬಂಧ ಮದುವೆಗೆ ತಲುಪೋದೇ ಇಲ್ಲ ...

ಈಗ ನೀನಾ ಗುಪ್ತಾ ಮುಂಬಯಿಯಲ್ಲಿ ತಮ್ಮ ಹೊಸ ಫಿಲಂ 'ಗುಡ್‌ಬೈ'ಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರ ಕೋ ಸ್ಟಾರ್ ಅಮಿತಾಭ್‌ ಬಚ್ಚನ್. ನಂಬಿ, ಜೀವಮಾನದಲ್ಲಿ ಅವರು ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಜೊತೆಗೆ ನಟಿಸುತ್ತಿದ್ದಾರೆ. ಅಮಿತಾಭ್ ಮತ್ತು ಜಯಾ ಬಚ್ಚನ್ ಜೊತೆಗೆ ಅವರು ಸಾಕಷ್ಟು ಒಳ್ಳೆಯ ಸ್ನೇಹವನ್ನೂ ಹೊಂದಿವರಾದರೂ, ಇದುವರೆಗೆ ಜೊತೆಯಾಗಿ ನಟಿಸುವ ಅವಕಾಶ ದೊರೆತಿರಲಿಲ್ಲ. ಕಳೆದ ವರ್ಷವೇ ಶೂಟಿಂಗ್ ಆರಂಭವಾದ ಈ ಫಿಲಂ ಶೂಟಿಂಗ್ ಕೋವಿಡ್‌ನಿಂದಾಗಿ ಅರ್ಧಕ್ಕೇ ನಿಂತಿತ್ತು. ಅಮಿತಾಭ್ ಜೊತೆಎಗ ಹಲವು ಫಿಲಂ ಮಾಡುವ ಬಗ್ಗೆ ಮಾತಾಗಿದ್ದರೂ ಯಾವುದೂ ಕೂಡಿ ಬಂದಿರಲಿಲ್ಲ.