ಬಾಲಿವುಡ್ ಎಂಟ್ರಿಯಾಗ್ತಿದ್ದಾರೆ ಸೌತ್ ಲೇಡಿ ಸೂಪರ್‌ಸ್ಟಾರ್, ಸುದೀಪ್ ವಿಲನ್ ?
ಬಾಲಿವುಡ್ ಎಂಟ್ರಿಯಾಗ್ತಿದ್ದಾರೆ ನಯನತಾರಾ ಶಾರೂಖ್ ಜೊತೆ ಸೌತ್‌ನ ನೀಳ ಸುಂದರಿ

ನಟಿ ನಯನತಾರಾ ಅವರು ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಅಂತೂ ಸೌತ್‌ನ ಟಾಪ್ ನಟಿ ಬಾಲಿವುಡ್‌ಗೆ ಲಗ್ಗೆ ಇಡುತ್ತಿದ್ದಾರೆ.

ಅವರು ಇತ್ತೀಚೆಗೆ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದರು. ಅಧಿಕೃತ ಪ್ರಕಟಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು.

ಇದುವರೆಗೆ ಅಟ್ಲೀ ಅವರ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ ನಯನತಾರಾ ಮೂರನೇ ಬಾರಿಗೆ ಮತ್ತೆ ಒಂದಾಗಲಿದ್ದಾರೆ.

ಕನ್ನಡ ನಟ ಸುದೀಪ್ ವಿಲನ್ ಪಾತ್ರವನ್ನು ನಿರ್ವಹಿಸಲು ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.

ನಯನತಾರಾ ಕೊನೆಯ ಬಾರಿಗೆ ತಮಿಳು ಕಾಮೆಡಿ ಮೂವಿ ಮೂಕುತಿ ಅಮ್ಮನ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ದೇವತೆಯಾಗಿ ನಟಿಸಿದ್ದಾರೆ.

ಕೊರಿಯಾದ ಥ್ರಿಲ್ಲರ್ ಬ್ಲೈಂಡ್ ಚಿತ್ರದ ರಿಮೇಕ್ ಆಗಿರುವ ಮುಂಬರುವ ತಮಿಳು ಥ್ರಿಲ್ಲರ್ ನೆಟ್ರಿಕನ್ ಬಿಡುಗಡೆಗಾಗಿ ಅವರು ಪ್ರಸ್ತುತ ಕಾಯುತ್ತಿದ್ದಾರೆ.

ಏತನ್ಮಧ್ಯೆ ಶಾರುಖ್ ಖಾನ್ ಅವರೊಂದಿಗಿನ ಅಟ್ಲೀ ಯೋಜನೆಯು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿದೆ.

2019 ರಲ್ಲಿ, ಅಟ್ಲೀ ಯೋಜನೆಯ ಬಗ್ಗೆ ಸುಳಿವು ನೀಡಿದ್ದರು. ತನ್ನ ಕೊನೆಯ ಚಿತ್ರ ಬಿಗಿಲ್ ಬಿಡುಗಡೆಯ ಕೆಲವೇ ಗಂಟೆಗಳ ಮೊದಲು, ಅಟ್ಲೀ ಟ್ವಿಟ್ಟರ್ ಚಾಟ್ ಮೂಲಕ ಶಾರುಖ್ ಖಾನ್ ಅವರೊಂದಿಗಿನ ಪ್ರಾಜೆಕ್ಟ್ ಬಗ್ಗೆ ಹಿಂಟ್ ಕೊಟ್ಟಿದ್ದರು

ಅವರು ಶೀಘ್ರದಲ್ಲೇ ಶಾರುಖ್ ಅವರೊಂದಿಗೆ ಸೇರಿ ಸಿನಿಮಾ ಮಾಡುವ ಬಗ್ಗೆ ಅಟ್ಲೀ ಸುಳಿವು ನೀಡಿದರು.

ನನಗೆ ಎಸ್‌ಆರ್‌ಕೆ ಸರ್ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ನನ್ನ ಕೆಲಸವನ್ನು ಸಹ ಪ್ರೀತಿಸುತ್ತಾರೆ. ಶೀಘ್ರದಲ್ಲೇ, ಆಶಾದಾಯಕವಾಗಿ, ನಾವು ಏನಾದರೂ ಮಾಡುತ್ತೇವೆ ಎಂದು ಅಟ್ಲೀ ಹೇಳಿದ್ದಾರೆ.

ತಮಿಳು ಚಿತ್ರ ಮರ್ಸಲ್ ಚಿತ್ರದ ಹಿಂದಿ ರಿಮೇಕ್ಗಾಗಿ ಅಟ್ಲೀ ಮತ್ತು ಶಾರುಖ್ ಕೈಜೋಡಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ವದಂತಿಗಳು ಹಬ್ಬಿವೆ.

ಈ ಚಿತ್ರದಲ್ಲಿ ತ್ರಿವಳಿ ಪಾತ್ರಗಳನ್ನು ನಿರ್ವಹಿಸಿದ ವಿಜಯ್ ಅವರೊಂದಿಗೆ ಅಟ್ಲೀ ಮೆರ್ಸಲ್ ನಿರ್ದೇಶನ ಮಾಡಿದ್ದರು.

ಅವರ ಸಹಯೋಗದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಶಾರುಖ್ ಅವರ ಜನ್ಮದಿನದಂದು ಸಿನಿಮಾ ಎನೌನ್ಸ್ ನಿರೀಕ್ಷಿಸಬಹುದು ಎನ್ನಲಾಗಿದೆ.