ಶಾರುಕ್ ಖಾನ್‌: ಶಾರುಕ್ ಖಾನ್‌ಗೆ ಕುದುರೆಗಳೆಂದರೆ ಒಂಥರಾ ಭಯ. ಕುದುರೆ ಏರ ಬೇಕಾದೀತು ಎಂಬ ಕಾರಣಕ್ಕೋ ಏನೋ, ಆತ ಇದುವರೆಗೂ ಯಾವುದೇ ಐತಿಹಾಸಿಕ, ಪೌರಾಣಿಕ, ರಾಜ ಅಥವಾ ಸೈನಿಕನ ಪಾತ್ರದಲ್ಲಿ ನಟಿಸಿಲ್ಲ. 

ದೀಪಿಕಾ ಪಡುಕೋಣೆ: ಕರ್ನಾಟಕದ ಹುಡುಗಿ ದೀಪಿಕಾ ಪಡುಕೋಣೆ ಎಂದೂ ನಾಗಿಣಿಯ ಚಿತ್ರ ಮಾಡಲಾರಳು. ಯಾಕಂದ್ರೆ ಹಾವುಗಳೆಂದರೆ ಆಕೆಗೆ ಮರಣ ಭಯ. ಹಾವುಗಳ ಜೊತೆಗಿನ ನಟನೆಯ ದೃಶ್ಯವೂ ಆಕೆಗೆ ಆಗದು.

ಪ್ರಿಯಾಂಕ ಚೋಪ್ರಾ: ಶಾರುಕ್ ಖಾನ್‌ ಥರಾ ಪ್ರಿಯಾಂಕ ಚೋಪ್ರಾಗೂ ಕುದುರೆಗಳ ಬಗ್ಗೆ ವಿನಾಕಾರಣ ಭಯ. ಈಕೆ ಕುದುರೆ ಏರುವ ಸೀನ್‌ನಲ್ಲಿ ಭಾಗವಹಿಸುವುದೇ ಇಲ್ಲ. ಕುದುರೆಗಳ ಹತ್ತಿರ ಸುಳಿಯಲೂ ಅಂಜುತ್ತಾರೆ.


ಕತ್ರಿನಾ ಕೈಫ್: ಬಾಲಿವುಡ್‌ನ ಈ ಬಾರ್ಬಿ ಡಾಲ್‌ಗೆ ಟೊಮೆಟೋ ಅಂದ್ರೆ ಮಹಾ ಭಯ. ಟೊಮೆಟೋವನ್ನು ಆಕೆ ತಿನ್ನಲಾರಳು. ಮಾತ್ರವಲ್ಲ ನೋಡಲೂ ಇಷ್ಟಪಡುವುದಿಲ್ಲ. ಯಾಕೆಂದರೆ ಟೊಮೆಟೋ ನೋಡಿದರೆ ಆಕೆಗೆ ತಾನು ಕೊಂಚವೂ ಇಷ್ಟವಿಲ್ಲದೆ ನಟಿಸಿದ ದೃಶ್ಯಗಳು ನೆನಪಾಗುತ್ತವಂತೆ.

ಸೋನಮ್ - ದೀಪಿಕಾ: ಸಿನಿಮಾಕ್ಕಾಗಿ ಕಾಲೇಜಿಗೆ ಗುಡ್‌ ಬೈ ಹೇಳಿದ ನಟಿಯರು! 

ಅಭಿಷೇಕ್ ಬಚ್ಚನ್‌: ನಾವೇನೋ ಹಣ್ಣುಗಳನ್ನು ಕಂಡರೆ ತಿಂದು ಮುಗಿಸುತ್ತೇವೆ. ಅವು ಆರೋಗ್ಯಕ್ಕೆ ಒಳ್ಳೆಯದೆಂದೂ ನಮಗೆ ಗೊತ್ತು. ಆದರೆ ಅಭಿಷೇಕ್ ಬಚ್ಚನ್‌ಗೆ ಹಣ್ಣುಗಳೆಂದರೆ ಭಯ. ಆತ ಫಿಟ್‌ನೆಸ್ ಫ್ರೀಕ್ ಕೂಡ. ಜೀವಮಾನದಲ್ಲಿ ಒಂದೇ ಒಂದು ಹಣ್ಣನ್ನೂ ತಿಂದಿಲ್ಲ ಎಂದು ಹೇಳಿಕೊಳ್ಳುತ್ತಾನೆ. ಅವನದು ಎಂಥ ಲೈಫೋ ಭಗವಂತ ಬಲ್ಲ.

ಅಜಯ್ ದೇವಗನ್: ನಾವೆಲ್ಲ ಸೇವಿಸೋ ಆಹಾರಕ್ಕೆ ಇನ್ನಷ್ಟು ರುಚಿ ಬರಲಿ ಅಂತ ಕೈಯಲ್ಲಿ ಊಟ ಮಾಡುತ್ತೇವೆ. ಆದರೆ ಅಜಯ್ ದೇವಗನ್, ದೇವರಾಣೆ, ಚಮಚಾ ಹಾಗೂ ಪೋರ್ಕ್ ಬಿಟ್ಟು ಕೈಯಲ್ಲಿ ಯಾವತ್ತೂ ಫುಡ್ ಮುಟ್ಟವುದೇ ಇಲ್ಲ. ಕೈಯಿಂದ ಆಹಾರಕ್ಕೆ ಏನಾದರೂ ಸೋಂಕು ತಗುಲೀತು ಎಂಬ ಭಯವಂತೆ ಅಜಯ್‌ಗೆ. ಹಾಗೇ ಕೈ ಬೆರಳುಗಳು ಸುರುಟಿಹೋದೀತು ಎಂಬ ಭಯವೂ ಉಂಟಂತೆ.

ಫಾರಿನ್ ಹುಡಗರ ಪ್ರೀತಿಗೆ ಬಿದ್ದ ಭಾರತದ ನಟಿಯರಿವರು..! 

ಅನುಷ್ಕಾ ಶರ್ಮಾ: ಅನುಷ್ಕಾ ಶರ್ಮಾ ತಮ್ಮ ಫಿಲಂಗಳಲ್ಲಿ ಸಾಕಷ್ಟು ಸಲ ಬೈಕ್, ಸ್ಕೂಟಿ ರೈಡ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನಿಜ ಜೀವನದಲ್ಲಿ ಅನುಷ್ಕಾಗೆ ಬೈಕ್‌ಗಳೆಂದರೆ ಭಯ. ರೈಡ್ ಮಾಡುವುದಿರಲಿ, ಹಿಂದೆ ಕುಳಿತುಕೊಳ್ಳುವುದೂ ಇಲ್ಲವಂತೆ. 

ಅರ್ಜುನ್ ಕಪೂರ್: ಈತನಿಗೆ ಸೀಲಿಂಗ್ ಫ್ಯಾನ್‌ಗಳನ್ನು ಕಂಡರೆ ಭಯ. ಅವುಗಳ ಕೆಳಗೆ ಎಂದೂ ಮಲಗುವುದಿಲ್ಲ. ತಲೆಯ ಮೇಲೆ ಅದು ಕಳಚಿ ಬಿದ್ದೀತು ಎಂಬ ಆತಂಕ.

ಬಿಪಾಶಾ ಬಸು: ಬಿಪಾಶಾ ಬಸು ಸಾಕಷ್ಟು ಹಾರರ್, ಭೂತದ ಫಿಲಂಗಳಲ್ಲಿ ನಟಿಸಿದ್ದಾರೆ. ಈಕೆ ಬಾಲಿವುಡ್‌ನ ಹಾರರ್ ಕ್ವೀನ್ ಅಂತಲೇ ಫೇಮಸ್ಸು. ಆದರೆ ನಿಜಕ್ಕೂ ಬಿಪಾಶಾಗೆ ಭೂತಗಳೆಂದರೆ ಒಂದು ಮಟ್ಟಿನ ಭಯವಿದೆ. ನಿರ್ಜನ ಜಾಗಗಳಲ್ಲಿ ಆಕೆ ಓಡಾಡುವುದಕ್ಕೆ ಹಿಂಜರಿಯುತ್ತಾರೆ. ಹಾಗೇ ಅವರಿಗೆ ತಮ್ಮದೇ ನಗುವನ್ನು ಕಂಡರೆ ಭಯ! ಕನ್ನಡಿಯನ್ನು ನೋಡುತ್ತಾ ಈಕೆ ನಗುವುದೇ ಇಲ್ಲವಂತೆ.

ಸೆಲಿನಾ ಜೇಟ್ಲಿ: ಚಿಟ್ಟೆಗಳೆಂದರೆ ಯಾರಾದರೂ ಹೆದರುತ್ತಾರಾ? ನಮಗೆ ಅವುಗಳೆಂದರೆ ಖುಷಿ. ಆದರೆ ಸೆಲಿನಾಗೆ ಚಿಟ್ಟೆ ಕಂಡರೆ ಜೀವಭಯ. ಒಮ್ಮೆ ಚಿಟ್ಟೆ ಕಂಡು ಗಾಬರಿಯಾಗಿ ಒಂದು ಪ್ರಪಾತದ ಅಂಚಿನಲ್ಲಿ ಆಕೆ ಕೆಳಗೆ ಬಿದ್ದೇ ಬಿಡುತ್ತಿದ್ದರಂತೆ. ನಂತರ ಕಣ್ಣು ಮುಚ್ಚಿ ಕುಳಿತು ಸುಧಾರಿಸಿಕೊಂಡರಂತೆ.

ಜೆನಿಲಿಯಾ ಗಂಡ ಅಂದ್ರೆ ರಿತೀಶ್‌ಗೆ ಹರ್ಟ್ ಆಗುತ್ತಂತೆ! 

ರಣಬೀರ್ ಕಪೂರ್‌: ಈತನಿಗೆ ಜಿರಲೆ ಕಂಡರೆ ಭಯ, ವಾಕರಿಕೆ ಅಸಹ್ಯ ಎಲ್ಲಾ. ಆತ ಜಿರಲೆ ಇರುವ ಸ್ಥಳದಿಂದ ಸಾಧ್ಯವಾದಷ್ಟು ಸ್ಪೀಡಾಗಿ ಎಸ್ಕೇಪ್ ಆಗುತ್ತಾನೆ.

ಸೋನಂ ಕಪೂರ್: ಈಕೆಗೆ ಲಿಫ್ಟುಗಳೆಂದರೆ ಭಯ, ಆತಂಕ. ಲಿಫ್ಟ್ ಏರಿದ ಕೂಡಲೆ ಆಕೆಗೆ ಉಸಿರು ಕಟ್ಟಿದಂತೆ ಆಗುತ್ತದೆ. ಎಲಿವೇಟರ್‌ಗಳೂ ಈಕೆಗೆ ಭಯ ಉಂಟುಮಾಡುತ್ತವೆ. ಈಕೆ ಮೆಟ್ಟಿಲು ಹತ್ತಿ ಹೋಗುವುದನ್ನೇ ಪ್ರಿಫರ್ ಮಾಡುತ್ತಾಳೆ.


ವಿದ್ಯಾ ಬಾಲನ್: ಈ ಕೇರಳಿ ಚೆಲುವೆಗೆ ಬೆಕ್ಕುಗಳೆಂದರೆ ಭಯವಂತೆ. ಬೆಕ್ಕಿನ ಮುಖ, ಅದರ ಕೂರುಗರು ಕಂಡರೆ ಈಕೆಗೆ ಮೈಯೆಲ್ಲ ಬೆವರಿಬಿಡುತ್ತದೆ. 

ಅಲಿಯಾ ಭಟ್: ಅಲಿಯಾ ಭಟ್‌ಗೆ ಕತ್ತಲನ್ನು ಕಂಡರೆ ಭಯ. ಹೀಗಾಗಿ ಮಲಗಿ ನಿದ್ರಿಸುವಾಗಲೂ ಸ್ವಲ್ಪ ಬೆಳಕು ಇರಲೇಬೇಕು. ಹೀಗಾಗಿ ಕಿಟಕಿ ಕರ್ಟನ್ ತೆಗೆದಿಟ್ಟುಕೊಂಡು, ಇಲ್ಲಾ ಜೀರೋ ಲೈಟ್ ಹಾಕಿಕೊಂಡೇ ನಿದ್ರಿಸುತ್ತಾಳೆ.