'ಅವತ್ತು ಬೆಂಗಳೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಶೋ ಇತ್ತು. ಆಗ ಸೌತ್ ಟೀಮ್ ನ ಇಬ್ಬರು ಆಟಗಾರರು ನನ್ನ ಕಡೆ ಕೈ ತೋರಿಸಿ, ನೋಡು, ಆತ ಜಿನಿಲಿಯಾ ಗಂಡ ಅಂತ ಪಿಸುಮಾತಲ್ಲಿ ಹೇಳ್ತಿದ್ದರು. ಆಗ ನನ್ನ ಇಗೋಗೆ ಹರ್ಟ್ ಆಯ್ತು. ನಾನು ಅವರನ್ನು ಪಕ್ಕ ಕರೆದು ಹೇಳಿದೆ, ನೋಡಿ ಇಲ್ಲಿ ನಿಮಗೆ ನಾನು ಜಿನಿಲಿಯಾ ಗಂಡ ಆಗಿರಬಹುದು, ಆದರೆ ಮಹಾರಾಷ್ಟ್ರದಲ್ಲಿ ಜಿನಿಲಿಯಾ ರಿತೀಶ್ ಹೆಂಡತಿ. ಆಗ ಅವರೇನು ಅಂದರು ಗೊತ್ತಾ..'

ಬಾಲಿವುಡ್ ನಟ, ಅದಕ್ಕಿಂತ ಹೆಚ್ಚಾಗಿ ಆಗರ್ಭ ಶ್ರೀಮಂತ ರಿತೀಶ್ ದೇಶ್ ಮುಖ್ ಇಂಥದ್ದೊಂದು ವಿಚಿತ್ರ ಪ್ರಸಂಗದ ಬಗ್ಗೆ ಹೇಳಿರೋದು ಕಪಿಲ್ ಶರ್ಮಾ ಶೋದಲ್ಲಿ. ಅಷ್ಟಕ್ಕೂ ಈ ಶೋ ಇನ್ನೂ ಟೆಲಿಕಾಸ್ಟ್ ಆಗಿಲ್ಲ. ಈ ವೀಕೆಂಡ್ ನಲ್ಲಿ ಕಪಿಲ್ ಶರ್ಮಾ ಶೋದಲ್ಲಿ ನೀವು ಜಿನಿಲಿಯಾ ಹಾಗೂ ರಿತೀಶ್ ಜೋಡಿಯ ಲೈಫ್ ನ ಸಖತ್ ಇಂಟೆರೆಸ್ಟಿಂಗ್ ವಿಚಾರಗಳನ್ನು ತಿಳ್ಕೊಳ್ಳಬಹುದು. ಈ ಶೋದ ಪ್ರೊಮೋದಲ್ಲಿ ಈ ಸಂಗತಿ ರಿವೀಲ್ ಮಾಡಿದ್ದು ಸಖತ್ ವೈರಲ್ ಆಗಿದೆ.

ಜಿನಿಲಿಯಾ ಸೌತ್ ಇಂಡಿಯಾದ ಮುದ್ದು ಹುಡುಗಿಯಾಗಿ ಬಹಳ ಫೇಮಸ್ ಆದವಳು. ಬೊಮ್ಮರಿಲು ವಿನಂಥಾ ಸಿನಿಮಾ ನೋಡಿದವರಿಗೆ ಜಿನಿಲಿಯಾಳನ್ನು ಇಷ್ಟಪಡದೇ ಇರಲು ಸಾಧ್ಯವೇ ಇಲ್ಲ. ಅಂಥಾ ಮುಗ್ಧ ಸ್ನಿಗ್ಧ ಅಭಿನಯ ಈಕೆಯದ್ದು. ಈಕೆಯನ್ನು ಸೌತ್‌ನ ಜನ ಬಹಳ ಆರಾಧಿಸುತ್ತಿದ್ದರು. ಬಾಲಿವುಡ್‌ನ ಸಿನಿಮಾದ ಮೂಲಕವೂ ಹುಡುಗರ ಹೃದಯ ಕದ್ದ ಹುಡುಗಿ ಈಕೆ. ಇಂಥಾ ಹುಡುಗಿ ಚಿಕ್ಕ ಪ್ರಾಯದಲ್ಲೇ ಮದುವೆಯಾದಾಗ ಖಿನ್ನರಾದ ಹುಡುಗರಿಗೆ ಲೆಕ್ಕವಿಲ್ಲ. ಆಮೇಲೆ ಎರಡು ಮಕ್ಕಳನ್ನೂ ಮಾಡಿಕೊಂಡು ತಾನಾಯ್ತು, ತನ್ನ ಲೈಫ್ ಆಯ್ತು ಅನ್ನೋ ಹಾಗೆ ಇದ್ದಾಳೆ. ಆದರೆ ಹಿಂದಿನ ಚೆಲುವು, ಮುಗ್ಧ ಎಕ್ಸ್‌ಪ್ರೆಶನ್ಸು ಹಾಗೇ ಇದೆ. ಆದರೆ ಬೇಡಿಕೆ ಮಾತ್ರ ಕುಸಿದಿದೆ. ಹೀಗಿದ್ದೂ ಜನ ಜಿನಿಲಿಯಾನ ಮರೆತಿಲ್ಲ. ಮರೆಯುವಂಥಾ ಹುಡುಗಿ ಅವಳಲ್ವೇ ಅಲ್ಲ ಅಂತ ಅಂದುಕೊಂಡಿದ್ದಾರೆ.

 

 

ಮ್ಯಾಟರು ಇಷ್ಟು ಡೀಪ್ ಇರುವಾಗ ರಿತೀಶ್ ಇಂಥಾ ಅನುಭವ ಆಗಿದ್ರಲ್ಲಿ ಆಶ್ಚರ್ಯ ಏನಿಲ್ಲ ಬಿಡಿ.

ಕೊರೋನಾ ಬಂದೋದ ನಂತರ ರಿವೀಲ್ ಮಾಡಿದ ಜೆನಿಲಿಯಾ; ಮುಚ್ಚಿಟ್ಟಿದ್ದೇಕೆ?

ಈಗ ಈ ಮ್ಯಾಟರಿಗೆ ಬರೋಣ. ರಿತೇಶ್ ತನ್ನನ್ನು ಜಿನಿಲಿಯಾ ಗಂಡ ಎನ್ನುತ್ತಿದ್ದವರಿಗೆ ಚೆನ್ನಾಗಿ ಕ್ಲಾಸ್ ತಗೊಳ್ಳಾಣ ಅಂದುಕೊಂಡು ಅಷ್ಟೆಲ್ಲ ಹೇಳಿದ್ರೆ ಆ ಹುಡುಗ್ರು ಏನಂದ್ರಂತೆ ಗೊತ್ತಾ, 'ಅಯ್ಯಾ ಬಿಡಿ ಸಾರ್. ಅವಳು ಮಹಾರಾಷ್ಟ್ರ ಒಂದು ರಾಜ್ಯದಲ್ಲಿ ಮಾತ್ರ ನಿಮ್ ಹೆಂಡ್ತಿ ಆಗಿರಬಹುದು. ಆದ್ರೆ ಕರ್ನಾಟಕ, ಆಂಧ್ರ, ತಮಿಳ್ನಾಡು, ಕೇರಳ ಎಲ್ಲಾ ಕಡೆ ನೀವ್ ಜಿನಿಲಿಯಾ ಗಂಡ..' ಅಂದಾಗ ಥಂಡಾ ಹೊಡೆಯೋ ಸರದಿ ರಿತೀಶ್ ದು!

ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್‌ನ ಈ ಜೋಡಿ 

ಜಿನಿಲಿಯಾ ರಿತೀಶ್ ಜೋಡಿ ಮದುವೆ ಆಗಿ ಈಗ ಎಂಟು ವರ್ಷಗಳಾಗಿವೆ. ಈ ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಂದು ಇಂಟೆರೆಸ್ಟಿಂಗ್ ವಿಚಾರ ಅಂದರೆ ರಿತೀಶ್ ಹಾಗೂ ಜಿನಿಲಿಯಾ ಇಬ್ಬರೂ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ೨೦೦೩ರಲ್ಲಿ. ತುಝೆ ಮೇರಿ ಕಸಂ ಸಿನಿಮಾದ ಮೂಲಕ. ಆದರೆ ರಿತೀಶ್ ಜಿನಿಲಿಯಾ ಳಷ್ಟು ಸಿನಿಮಾದಲ್ಲಿ ಸುದ್ದಿ ಮಾಡಲಿಲ್ಲ. ಆದರೆ ಮುಖ್ಯಮಂತ್ರಿಗಳ ಮಗ, ಬ್ಯುಸಿನೆಸ್ ಮೆನ್ ಫೇಮ್ ಇದ್ದೇ ಇತ್ತು. ಅದಕ್ಕೂ ಹೆಚ್ಚು ಕಾಸಿಗೇನೂ ಕೊರತೆ ಇರಲಿಲ್ಲ. ಜಿನಿಲಿಯಾ ಸೌತ್‌ ಇಂಡಿಯನ್ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದರು. ಬಾಲಿವುಡ್ ನ ಜಾನೆ ತು ಯಾ ಜಾನೇನಾ ಸಿನಿಮಾ ಆಕೆಯನ್ನು ಮತ್ತಷ್ಟು ಎತ್ತರಕ್ಕೇರಿಸಿತು. ಆದರೆ ಮದುವೆ ಆದ ಮೇಲೆ ಜಿನಿಲಿಯಾ ಸಿನಿಮಾದಿಂದ ದೂರವೇ ಉಳಿಯಬೇಕಾಯ್ತು.

ಭಾರತದ ಮಾರುಕಟ್ಟೆಗೆ ರಿತೇಶ್ ದಂಪತಿಯಿಂದ 'ಹೊಸ ಮಾಂಸ ರುಚಿ'