ನಾವಿಬ್ಬರೂ ಮಾತು ನಿಲ್ಲಿಸಬೇಕು ಎಂದು ಸಂಬಂಧಿಕರು ಕಾಯುತ್ತಾರೆ; ಅತ್ತಿಗೆ ಕತ್ರಿನಾ ಕೈಫ್‌ ಬಗ್ಗೆ ಸನ್ನಿ ಮಾತು

ವಿಕ್ಕಿ ಫ್ಯಾಮಿಲಿಯಲ್ಲಿ ನಾನು ಒಬ್ಬಳಾಗಿರುವುದಕ್ಕೆ ಸಖತ್ ಖುಷಿಯಾಗಿರುವೆ ಎಂದ ಕತ್ರಿನಾ ಕೈಫ್. ಮೊದಲ ಸಲ ಅತ್ತಿಗೆ ಬಗ್ಗೆ ಸನ್ನಿ ಮಾತು.... 
 

We talk alot says Vicky Kaushal brother sunny about Katrina Kaif vcs

ಬಾಲಿವುಡ್ ಪವರ್ ಕಪಲ್ ನಟ ವಿಕ್ಕಿ ಕೌಶಾಲ್ ಮತ್ತು ನಟಿ ಕತ್ರಿನಾ ಕೈಫ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ಷಣದಿಂದ ಜೀವನ ತುಂಬಾನೇ ಕಪರ್ ಆಗಿದೆ. ಪಾರ್ಟಿಯಲ್ಲಿ, ಏರ್‌ಪೋರ್ಟ್‌ನಲ್ಲಿ, ಫ್ಯಾಲಿಮಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹೆಡ್‌ಲೈನ್ಸ್‌ ಕ್ರಿಯೇಟ್ ಮಾಡುವ ಈ ಜೋಡಿ ನಿಜಕ್ಕೂ ಖುಷಿಯಾಗಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈಗ ವಿಕ್ಕಿ ಸಹೋದರ ಸನ್ನಿ ಅತ್ತಿಗೆ ಬಗ್ಗೆ ಮಾತನಾಡಿದ್ದಾರೆ. 

'ಇಡೀ ಫ್ಯಾಮಿಲಿ ಒಟ್ಟಿಗೆ ಕುಳಿತುಕೊಂಡಿರುವಾಗ ನಾನು ಅತ್ತಿಗೆ ಕತ್ರಿನಾ ನಾನ್ ಸ್ಟಾಪ್ ಮಾತನಾಡುತ್ತೀವಿ. ಯಾವುದಾದರೂ ಒಂದು ವಿಚಾರ ಚರ್ಚೆ ಮಾಡುತ್ತಲೇ ಇರುತ್ತೀವಿ ಆಗ ನಮ್ಮ ಸುತ್ತಲು ಕುಳಿತುಕೊಂಡಿರುವವರು ನಮ್ಮ ನೋಡುತ್ತಾ ಯಾವಾಗ ಮಾತು ನಿಲ್ಲಿಸುತ್ತೀವಿ ಎಂದು ಕಾಯುತ್ತಾರೆ. ನಾವು ಮಾತು ನಿಲ್ಲಿಸಿದರೆ ಮಾತ್ರ ಅವರು ಮಾತು ಆರಂಭಿಸುವುದು. ನಮ್ಮಿಬ್ಬರಿಗೂ ಮಾತನಾಡುವುದು ಅಂದ್ರೆ ತುಂಬಾ ಇಷ್ಟ. ನಮ್ಮಿಬ್ಬರ ನಡುವೆ ಅನೇಕ ವಿಚಾರಗಳ ಹೊಳಿಕೆ ಇದೆ ಹೀಗಾಗಿ ಖುಷಿಯಾಗಿ ಗಂಟೆಗಟ್ಟಳೆ ಮಾತನಾಡುತ್ತೀವಿ'ಎಂದು ಸನ್ನಿ ಕೌಶಾಲ್ ಸಿದ್ಧಾರ್ಥ್‌ ಕನ್ನಾ ಸಂದರ್ಶನದಲ್ಲಿ ಹೇಳಿದ್ದಾರೆ. 

ತಂದೆ-ತಾಯಿ ವಿಚ್ಛೇದನಕ್ಕೆ ಕಾರಣ ಈಗಲೂ ಸೀಕ್ರೆಟ್; ಕಹಿ ಘಟನೆ ಹಂಚಿಕೊಂಡ ಕತ್ರಿನಾ ಕೈಫ್‌

ವಿಕ್ಕಿ ಮತ್ತು ಕ್ಯಾಟ್ ಮದುವೆ ನಂತರ ನಮ್ಮ ಸಂಬಂಧ ಗಟ್ಟಿ ಆಗಿದ್ದು ಅಲ್ಲ ಅವರು ಮದುವೆ ಆಗುವುದಕ್ಕಿಂತ ಮುಂಚೆನೇ ಅತ್ತಿಗೆ ನನ್ನ ಜೊತೆ ಚೆನ್ನಾಗಿದ್ದಾರೆ ಎಂದಿದ್ದಾರೆ. 'ನನಗೆ ಸ್ನೀಕರ್ಸ್‌ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಇದನ್ನು ತಿಳಿದುಕೊಂಡು ಅತ್ತಿಗೆ ಕಳೆದ ಎರಡು ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬಕ್ಕೆಂದು ಸ್ನೀಕರ್ಸ್‌ ಡಿಸೈನ್‌ ಇರುವ ಕೇಕ್‌ನ ತಯಾರಿಸಿ ಮಾಡಿಸಿದ್ದರು. ಅದು ನನ್ನ ನೆಚ್ಚಿನ ಕೇಕ್ ಆಗಿತ್ತು. ಈ ರೀತಿ ಪ್ರೀತಿ ನಿರೀಕ್ಷೆ ಮಾಡಿರಲಿಲ್ಲ ಆದರೆ ತುಂಬಾ ಖುಷಿ ಆಯ್ತು' ಎಂದು ಸನ್ನಿ ಹೇಳಿದ್ದಾರೆ.

ಕತ್ರಿನಾ ಬಗ್ಗೆ ವಿಕ್ಕಿ:

. ಆಗಾಗ ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋ ಅಪ್ಲೋಡ್ ಮಾಡುವ ಕಾರಣ ವಿಕ್ಕಿ ಪರ್ಫೆಕ್ಟ್‌ ಗಂಡ, ಪರ್ಫೆಕ್ಟ್‌ ಅಪ್ಪ ಆಗಬಹುದು ಎನ್ನುವ ಕಾಮೆಂಟ್‌ಗಳು ಬರುತ್ತದೆ. ಈ ಪರ್ಫೆಕ್ಟ್‌ ಅನ್ನೋ ಪದಕ್ಕೆ ನಾನು ಸೂಕ್ತನಲ್ಲ ಅದರಲ್ಲೂ ಕತ್ರಿನಾ ಕೈಫ್‌ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಲೈಫ್‌ ಎಷ್ಟು ಬದಲಾಗಿದೆ ಎಂದು ವಿಕ್ಕಿ ಹಂಚಿಕೊಂಡಿದ್ದಾರೆ. 

ಕತ್ರಿನಾ - ವಿಕ್ಕಿ ಮದುವೆಯಾಗಿ 1 ವರ್ಷ; ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರಗಳಿದು!

'ಯಾವ ರೀತಿಯಲ್ಲೂ ನಾನು ಪರ್ಫೆಕ್ಟ್‌ ಅಲ್ಲ. ಪತಿಯಾಗಿ ಪರ್ಫೆಕ್ಟ್‌ ಆಗಿಲ್ಲ, ಮಗನಾಗಿ ಪರ್ಫೆಕ್ಟ್‌ ಆಗಿಲ್ಲ, ಫ್ರೆಂಡ್ ಮತ್ತು ನಟನಾಗಿಯೂ ಪರ್ಫೆಕ್ಟ್‌ ಅಲ್ಲ. ಇದು ಜೀವನದಲ್ಲಿ ಪ್ರತಿಯೊಬ್ಬರೂ ಎದುರಿಸುವ ಕ್ಷಣಗಳು ಹಾಗೂ ದಿನವೂ ಒಂದೊಂದು ಪಾಠ ಕಲಿಯಬೇಕು ಹೀಗಾಗಿ ಪರ್ಫೆಕ್ಟ್‌ ಅಲ್ಲ. ಪರ್ಫೆಕ್ಟ್‌ ಆಗಿರಬೇಕು ಅನ್ನೋದು ಒಂದು ರೀತಿ ಕಂಡಿಷನ್ ಹಾಕಿದ ಹಾಗೆ. ಆ ನಿರೀಕ್ಷೆ ತಲುಪುತ್ತಿದ್ದೀವಿ ಅಂದುಕೊಳ್ಳುತ್ತೀವಿ ಆದರೆ ಅದು ಅಸಾಧ್ಯ. ಹೀಗಾಗಿ ಯಾವ ಕಾರಣಕ್ಕೂ ನಾನು ಪರ್ಫೆಕ್ಟ್‌ ಗಂಡನಲ್ಲ. ಯಾವ ರೀತಿಯಲ್ಲೂ ನಾನು ಪರ್ಫೆಕ್ಟ್‌ ಆಗಿರುವ ವ್ಯಕ್ತಿ ಅಲ್ಲ. ಆದರೆ ಯಾವುದೇ ಕಷ್ಟ ಬರಲಿ ಪತಿಯಾಗಿ ನನ್ನ ಕಾರ್ಯವನ್ನು ನಾನು ನಿಭಾಯಿಸುತ್ತಿರುವೆ. ಗಂಡನ ಸ್ಥಾನದಲ್ಲಿ ನಿಂತು ಕೊರತೆ ಆಗದಂತೆ ನೋಡಿಕೊಂಡಿರುವೆ. ಖಂಡಿತಾ ಮುಂಬರುವ ದಿನಗಳಲ್ಲಿ ನಾನು ಬೆಟರ್‌ ವ್ಯಕ್ತಿಯಾಗುವೆ. ನಿನ್ನೆಗಿಂತ ನಾಳೆ ಎನ್ನುವುದರಲ್ಲಿ ಬದಲಾವಣೆ ಕಾಣಬಹುದು. ಯಾವ ಸ್ಥಾನವಿರಲಿ ಯಾವುದೇ ಕೆಲಸವಿರಲಿ ನನ್ನ 100 ಶ್ರಮ ಹಾಕುವೆ. ಕತ್ರಿನಾ ಕೈಫ್‌ ಬಂದ ಒಂದು ವರ್ಷದಲ್ಲಿ ನನ್ನ ಜೀವನ ಚೆನ್ನಾಗಿದೆ, ಸಿಂಗಲ್ ಆಗಿದ್ದ ವಿಕ್ಕಿಗಿಂತ ನಾನು ಮದುವೆಯಾದ ಮೇಲೆ ಆಗಿರುವ ವಿಕ್ಕಿ ಇಷ್ಟವಾಗುತ್ತಿದೆ. ಇದೊಂದು ಬ್ಯೂಟಿಫುಲ್ ಜರ್ನಿ ಆಗಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಆರಂಭಿಸುತ್ತೀವಿ, ಒಟ್ಟಿಗೆ ಬೆಳೆಯುತ್ತಿವಿ' ಎಂದು ವಿಕ್ಕಿ ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios