ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ಉರ್ಫಿ ಜಾವೇದ್​ ಪರ ಬ್ಯಾಟಿಂಗ್​ ಬೀಸಿದ್ದು, ಬಟ್ಟೆ ನೋಡಿ ನಿರ್ಧರಿಸ್ಬೇಡಿ... ನಮ್ದು ಕಾಮಸೂತ್ರದ ಭೂಮಿ ಎಂದಿದ್ದಾರೆ.  

 ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ. ತಾವು ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಈಕೆ ಈ ಹಿಂದೆ ಹೇಳಿರುವ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರ ತಲೆ ಕೆಡಿಸುತ್ತಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾಡೆಲ್ ನಟಿ, 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ನಂತರ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದ ನಟಿ ನಾನು ಹೇಳಿದ್ದನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ಮೊನ್ನೆ ಸ್ಪಷ್ಟನೆಯನ್ನೂ ಕೊಟ್ಟಿದ್ದರು. 

ಇಂತಿಪ್ಪ ನಟಿ ಈಗ ನಟಿ ಉರ್ಫಿ ಜಾವೇದ್​ ಪರವಾಗಿ ಬ್ಯಾಟಿಂಗ್​ ಬೀಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ನಟಿ ಉರ್ಫಿ ಜಾವೇದ್​ ತಮ್ಮ ಚಿತ್ರ ವಿಚಿತ್ರ ಉಡುಗೆಗಳಿಂದ ಕುಖ್ಯಾತಿ ಗಳಿಸುತ್ತಿರುವವರು. ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್​ಗಾಗಿಯೇ ಮುಂಬೈನ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೇ ತಾವು ತೊಡುವ ಬಟ್ಟೆಯಿಂದಾಗಿ ಯಾರೂ ತಮಗೆ ಮುಂಬೈನಲ್ಲಿ ಮನೆಯನ್ನೂ ಕೊಡುತ್ತಿಲ್ಲ ಎಂದು ನಟಿ ಹೇಳಿಕೊಂಡಿದ್ದರು.

ಇದೀಗ ನಟಿ ಶೆರ್ಲಿನ್​ ಚೋಪ್ರಾ ಉರ್ಫಿ (Urfi Javed) ಬಟ್ಟೆಯ ಬಗ್ಗೆ ಕೆಟ್ಟದ್ದಾಗಿ ಮಾತನಾಡುವವರ ವಿರುದ್ಧ ಮಾತನಾಡಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿ ಹೊರಬರುವಾಗಲೂ ಸೀರೆ ಉಟ್ಟು ದೇಹ ಪ್ರದರ್ಶನ ಮಾಡುತ್ತಿದ್ದ ಶೆರ್ಲಿನ್​ ಚೋಪ್ರಾ ಅವರನ್ನು ಪಾಪರಾಜಿಗಳು ಉರ್ಫಿ ಬಗ್ಗೆ ಕೇಳಿದ್ದಾರೆ. ಆಗ ಶೆರ್ಲಿನ್​ ನಾನು ಉರ್ಫಿ ಯಾವ ರೀತಿ ಬಟ್ಟೆ ತೊಡುತ್ತಾರೆ ಎಂದು ನೋಡಲಿಲ್ಲ ಎಂದಿದ್ದಾರೆ. ಆಗ ಪಾಪರಾಜಿಗಳು ಉರ್ಫಿ ತಮ್ಮ ಜೊತೆ ಇರುವ ಕೆಲವೊಂದು ಫೋಟೋಗಳನ್ನು ತೋರಿಸಿ ಅವರ ಇಷ್ಟದ ಬಟ್ಟೆ ತೊಟ್ಟರೆ ನೈತಿಕ ಪೊಲೀಸ್​ಗಿರಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶೆರ್ಲಿನ್​ ನನಗನಿಸುವ ಮಟ್ಟಿಗೆ ಉರ್ಫಿಯವರ ಜೊತೆ ನೈತಿಕ ಪೊಲೀಸ್​ಗಿರಿ ಆಗುತ್ತಿದೆ. ಬಟ್ಟೆ ತೊಡುವುದು ಅವರಿಷ್ಟ. ನಮ್ಮ ದೇಶವನ್ನು ಕಾಮಸೂತ್ರದ ನಾಡು ಎನ್ನುತ್ತಾರೆ. ಇಂಥ ದೇಶದಲ್ಲಿ ಬಟ್ಟೆಯ ಕುರಿತು ನೈತಿಕ ಪೊಲೀಸ್​ಗಿರಿ ಸಲ್ಲದು ಎಂದಿದ್ದಾರೆ.

ಶೆರ್ಲಿನ್​ ಚೋಪ್ರಾ ವಿಡಿಯೋ ವೈರಲ್​: ಥೂ... ಅದಕ್ಕೂ ಪ್ಲಾಸ್ಟಿಕ್​ ಸರ್ಜರಿನಾ ಅಂದ ಫ್ಯಾನ್ಸ್​!

ಅಂದಹಾಗೆ ನಟಿ ಇತ್ತೀಚೆಗೆ ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು. ಅದಾದ ಬಳಿಕ ಮೊನ್ನೆಯಷ್ಟೇ ಈಕೆಯ ಇನ್ನೊಂದು ವಿಡಿಯೋ ವೈರಲ್​ ಆಗಿತ್ತು. ಅದರಲ್ಲಿ ಈಕೆ ಸೀರೆ ತೊಟ್ಟಿದ್ದರೂ ದೇಹ ಪ್ರದರ್ಶಿಸಿದ್ದರಿಂದ ಸಕತ್​ ಟ್ರೋಲ್​ ಆಗಿತ್ತು. ಆ ಭಾಗಕ್ಕೂ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವಿರಾ ಎಂದು ಹಲವರು ಪ್ರಶ್ನಿಸಿದ್ದರು. ಥೂ... ಇದು ಅಸಹ್ಯದ ಪರಮಾವಧಿ ಎಂದಿದ್ದರು ಇನ್ನು ಕೆಲವರು. ಇದೀಗ ನಟಿ ಬಟ್ಟೆಯ ವಿಷಯದಲ್ಲಿ ಭಾರತವನ್ನು ಕಾಮಸೂತ್ರದ ನಾಡು ಎಂದು ಕರೆದಿದ್ದು, ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. 

ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ; ರಾಜಕಾರಣಿ ಮಗನೊಂದಿಗಿನ ಸಂಬಂಧದ ಗುಟ್ಟು ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ