Mouni Roy Bachelorette Party: ಅರೆ ಮೌನಿ ರಾಯ್ ಮದುವೆ ಆಗ್ತಿದ್ದಾರಾ ? ಬಾಲಿವುಡ್ ಬೆಡಗಿಯ ಮದುವೆ ಫಿಕ್ಸ್ ಆಗಿದ್ದು ಯಾವಾಗ ? ಕೆಜಿಎಫ್ ಹುಡುಗಿಯ ಬ್ಯಾಚುರಲೆಟ್ ಪಾರ್ಟಿ ಗೋವಾದಲ್ಲಿ ನಡೆದಿದೆ, ಮದ್ವೆ ಯಾವಾಗ ?

ಮದುವೆಯ ಸೀಸನ್ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಅನೇಕ ಜನಪ್ರಿಯ ನಟ, ನಟಿಯರು ವಿವಾಹವಾಗಿದ್ದಾರೆ. ಈಗ ವರದಿಗಳ ಪ್ರಕಾರ, ಬಾಲಿವುಡ್‌ನ ಸ್ಟೈಲಿಷ್ ನಟಿ ಮೌನಿ ರಾಯ್(Mouni Roy) ತನ್ನ ದೀರ್ಘಕಾಲದ ಗೆಳೆಯ ಸೂರಜ್ ನಂಬಿಯಾರ್(Suraj Nambiar) ಅವರನ್ನು ಮದುವೆಯಾಗಲಿರುವ ಕಾರಣ ಶೀಘ್ರದಲ್ಲೇ ನವವಧುವಾಗಿ ಮಿಂಚಲಿದ್ದಾರೆ . ದಂಪತಿಗಳು ಜನವರಿ 2022 ರಲ್ಲಿ ಮದುವೆಯಾಗಲಿದ್ದಾರೆ. ಆಕೆಯ ಸ್ನೇಹಿತೆ ಆಶ್ಕಾ ಗೊರಾಡಿಯಾ ಅವರು ಹಂಚಿಕೊಂಡ ಇತ್ತೀಚಿನ ಫೋಟೋಗಳ ಪ್ರಕಾರ, ಅವರು ಗೋವಾದಲ್ಲಿ(Goa) ತಮ್ಮ ಹುಡುಗಿಯರೊಂದಿಗೆ ತಮ್ಮ ಬ್ಯಾಚುರಲೆಟ್ ಪಾರ್ಟಿಯನ್ನು(Bachelorette Party) ಎಂಜಾಯ್ ಮಾಡಿದ್ದಾರೆ.

ನಟಿ ಆಶ್ಕಾ ಗೊರಾಡಿಯಾ ಹಂಚಿಕೊಂಡ ಫೋಟೋಗಳಲ್ಲಿ ಅವರು ಮೌನಿ ರಾಯ್ ಅವರೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಒಂದು ಫೋಟೋದಲ್ಲಿ ಮೌನಿ ತನ್ನ ಹುಡುಗಿಯರ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರೆಲ್ಲರೂ ಕಪ್ಪು ನಿಲುವಂಗಿಯನ್ನು ಧರಿಸಿದ್ದಾರೆ. ಅವರು ವಧುವಿಗೆ ಸಂಬಂಧಿಸಿ ವಿವಿಧ ಫಲಕಗಳನ್ನು ಹಿಡಿದಿದ್ದಾರೆ. ಇತರ ಫೊಟೋಗಳಲ್ಲಿ, ಅವರು ಸಮುದ್ರತೀರದಲ್ಲಿ ಚಿಲ್ ಮಾಡುತ್ತಾ ಎಂಜಾಯ್ ಮಾಡುವುದನ್ನು ಕಾಣಬಹುದು.

Mouni Roy In Blue Bikini: ಸೆಕ್ಸೀ ನೀಲಿ ಬಿಕಿನಿಯಲ್ಲಿ ಕೆಜಿಎಫ್ ಬೆಡಗಿ

ಆಸ್ಖಾ ಗೊರಾಡಿಯಾ ಅವರು ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟು, ಇನ್ನಷ್ಟು ಅದ್ಭುತ ಯುವತಿಯರ ಸಹವಾಸದಲ್ಲಿ ಅದ್ಭುತ ಸಮಯ ಎಂದು ಬರೆದಿದ್ದಾರೆ. ಮೌನಿ ರಾಯ್ ಹಲವಾರು ವರ್ಷಗಳಿಂದ ಉದ್ಯಮಿ ಸೂರಜ್ ನಂಬಿಯಾರ್(Suraj Nambiar) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ನಟಿ ಈ ಹಿಂದೆ ದುಬೈನಲ್ಲಿ(Dubai) ಮದುವೆಯಾಗಲು ಯೋಜಿಸಿದ್ದರು. ಆದರೂ ದಂಪತಿಗಳು ಪ್ಲಾನ್ ಬದಲಾಯಿಸಿದ್ದಾರೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾರತದಲ್ಲಿ ತಮ್ಮ ಮದುವೆ ದಿನ ಸಂಭ್ರಮಿಸಲು ನಿರ್ಧರಿಸಿದ್ದಾರೆ. ಜನವರಿ 26 ರಂದು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿದ್ದು, ಜನವರಿ 27 ರಂದು ಮದುವೆ ನಡೆಯಲಿದೆ. ಅವರು ಪ್ರಸ್ತುತ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ(Brahmastra) ಬಿಡುಗಡೆ ಎದುರು ನೋಡುತ್ತಿದ್ದಾರೆ.

"

ಇತ್ತೀಚೆಗೆ ದುಬೈ ವೆಕೇಷನ್ ಎಂಜಾಯ್ ಮಾಡಿದ ಮೌನಿ ರಾಯ್ ಅಪ್ಪಟ ನೀಲಿ ಬಣ್ಣದ ಸೆಕ್ಸೀ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದರು. ದುಬೈ ಉದ್ಯಮಿಯೊಂದಿಗೆ ಮೌನಿ ರಾಯ್ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳೂ ಇವೆ. ಹಾಗೆಯೇ ನಟಿ ದುಬೈ ಟ್ರಿಪ್ ಕೂಡಾ ಮಿಸ್ ಮಾಡುವುದಿಲ್ಲ.

ಈ ಹಿಂದೆಯೇ ವೈರಲ್ ಆಗಿತ್ತು ಮದುವೆ ಸುದ್ದಿ

ಇನ್‌ಸ್ಟಾಗ್ರಾಮ್‌ನಲ್ಲಿ 19.3 ಮಿಲಿಯನ್ ಫಾಲೋವರ್‌ಗಳೊಂದಿಗೆ ಒಳ್ಳೆಯ ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಳನ್ನೂ ಹೊಂದಿರುವ ಮೌನಿ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹಿಂದೆಯೇ ಹೇಳಲಾಗಿತ್ತು. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಹಲವು ಬಾರಿ ಒಟ್ಟಿಗೆ ಕಂಡುಬಂದಿದ್ದಾರೆ. ಮೌನಿ ಕೊರೋನಾ ಸಮಯವನ್ನು ದುಬೈನಲ್ಲಿ ಕಳೆದಿದ್ದರು.

View post on Instagram

ಈಗ ಇತ್ತೀಚಿನ ವರದಿಯ ಪ್ರಕಾರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಮೌನಿಯ ಸೋದರಸಂಬಂಧಿ ವಿದ್ಯುತ್ ರೊಯಿಸಾರ್ಕರ್ ಮೌನಿ ಮತ್ತು ಸೂರಜ್ ಜನವರಿ 2022 ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಸಮಾರಂಭವು ದುಬೈ ಅಥವಾ ಇಟಲಿಯಲ್ಲಿ ನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಕೂಚ್ ಬಿಹಾರದಲ್ಲಿಯೂ ಆರತಕ್ಷತೆ ಇರುತ್ತದೆ ಎಂದು ಅವರು ಹೇಳಿದ್ದರು. ರಾಯ್ಸಾರ್ಕರ್ ಅವರು ಮತ್ತು ಅವರ ಕುಟುಂಬವು ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ಈ ಜೋಡಿ ಭಾರತದಲ್ಲಿಯೇ ಮದುವೆಯಾಗಲಿದ್ದಾರೆ.