ಜಾಹೀರಾತಿನ ವಿಚಾರದಲ್ಲಿ ತನಿಷ್ಕ್ ಪೇಚಿಗೆ ಬಿದ್ದ ಬೆನ್ನಲ್ಲೇ ಇದೀಗ ಪೋಸ್ಟರ್ ವಿಚಾರದಲ್ಲಿ ಎರೋಸ್ ನೌ ಸಂಕಷ್ಟಕ್ಕೆ ಬಿದ್ದಿದೆ. ಅಶ್ಲೀಲವಾಗಿ ನವರಾತ್ರಿಗೆ ಪೋಸ್ಟರ್ ಹಾಕಿದ ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಎರೋಸ್ ನೌ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. 

ಎರೋಸ್ ಇಂಟರ್‌ನ್ಯಾಷನಲ್ ಒಡೆತನದ ಎರೋಸ್ ನೌ ನವರಾತ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಿತ್ತು. ನೆಟ್ಟಿಗರು ಪೋಸ್ಟರ್ ವಿರೋಧಿಸ್ತಿದ್ದಂತೆ ಅವುಗಳನ್ನು ಡಿಲೀಟ್ ಮಾಡಲಾಗಿದೆ.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಬೀ ನಾಟಿ, ಸ್ವೀಟ್ ತೋ ಮಿಠಾಯಿ ಭೀ ಹೈ(ನಾಟಿಯಾಗಿ, ಸ್ವೀಟ್‌ಗೆ ಮಿಠಾಯಿ ಇದೆ) ಎಂದು ಕ್ಯಾಪ್ಶನ್ ಕೊಡಲಾಗಿತ್ತು. ಇನ್ನೊಂದರಲ್ಲಿ ಕತ್ರೀನಾ ಕೈಫ್ ಫೋಟೋ ಹಾಕಿ, ನಿಮ್ಮ ರಾತ್ರಿಯನ್ನು ನನ್ನ ನವರಾತ್ರಿಗೆ ಹಾಕಬೇಕಾ ಎಂದು ಪ್ರಶ್ನಿಸಲಾಗಿದೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ #BoycottErosNow ಟ್ರೆಂಡ್ ಆಗಿದೆ. ಹಿಂದೂ ಹಬ್ಬವನ್ನು ಅವಮಾನಿಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ #BoycottErosNow ಟ್ರೆಂಡ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಎರೋಸ್ ನೌ ನಾವು ಸಂಸ್ಕೃತಿಯನ್ನು ಸಮನಾಗಿ ಗೌರವಿಸುತ್ತೇವೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದು ಬರೆದಿದ್ದಾರೆ. ನಾವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದೇವೆ, ನಿಮ್ಮ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ್ದಾರೆ.