ಕೆಲವರು ಬಿಟ್ಟೋದ್ರು, ಇನ್ನು ಕೆಲವರು ಡ್ರಗ್ಸ್ ತೆಗೆದುಕೊಳ್ತಿದ್ದಾರೆ; ಪ್ರಿಯಾಂಕಾ ಬೆಂಬಲಕ್ಕೆ ನಿಂತ ಅಗ್ನಿಹೋತ್ರಿ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಭಾರತ ತೊರೆದ ಬಗ್ಗೆ ಹೇಳಿಕೆಗೆ ನಿರ್ದೇಶಕ ಅಗ್ನಿಹೊತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬಿಟ್ಟೋದ್ರು, ಇನ್ನು ಕೆಲವರು ಡ್ರಗ್ಸ್ ತೆಗೆದುಕೊಳ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಿಯಾಂಕಾ ಬೆಂಬಲಕ್ಕೆ ನಿಂತಿದ್ದಾರೆ.
ಭಾರತ ಬಿಟ್ಟು ಹೋಗಿದ್ದೇಕೆ ಎಂದು ಪ್ರಿಯಾಂಕಾ ಚೋಪ್ರಾ ಬಹಿರಂಗ ಪಡಿಸಿದ ಬಳಿಕ ಈಗ ಪರ ವಿರೋಧ ಚರ್ಚೆ ನಡೆಯುತ್ತಿದೆ. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಹಾಲಿವುಡ್‌ಗೆ ಹಾರಿದ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದರು. ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಸಿನಿಮಾರಂಗದ ರಾಜಕೀಯದಿಂದ ಬೇಸತ್ತಿದ್ದೆ, ಮೂಲೆಗೆ ತೆಳ್ಳಲ್ಪಟ್ಟಿದ್ದೆ ಹಾಗಾಗಿ ಭಾರತ ಬಿಟ್ಟು ಹಾಲಿವುಡ್‌ಗೆ ಹಾರಿದೆ ಎನ್ನುವ ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ್ದರು. ಪ್ರಿಯಾಂಕಾ ಚೋಪ್ರಾ ಹೇಳುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ಪ್ರಿಯಾಂಕಾ ಹೇಳಿಕೆಯನ್ನು ಬೆಂಬಲಿಸಿದ್ದರು. ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿ ಪ್ರಿಯಾಂಕಾ ಬೆಂಬಲಕ್ಕೆ ನಿಂತಿದ್ದಾರೆ. ಗ್ಯಾಂಗ್ ಆಫ್ ಬುಲ್ಲೀಸ್ ಎಂದು ಕರೆದಿರುವ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ನಟಿ ಕಂಗನಾ ಬಳಿಕ ಇದೀಗ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. 'ದೊಡ್ಡ ಗುಂಪು ಬೆದರಿಸಿದಾಗ ಕೆಲವರು ಮಂಡಿಯೂರಿದರು, ಕೆಲವರು ಶರಣಾದರು. ಕೆಲವರು ಬಿಟ್ಟು ಹೊರಟು ಹೋದರು. ಕೆಲವರು ಡ್ರಗ್ಸ್ ಸೇವಿಸುತ್ತಿದ್ದಾರೆ, ಇನ್ನೂ ಕೆಲವರು ಪ್ರಾಣ ಕಳೆದುಕೊಂಡರು. ಬುಲ್ಲೀಸ್ ವಿರುದ್ಧ ನಿಲ್ಲುವುದು ಕಷ್ಟ. ಕೆಲವೇ ಕೆಲವರು ಯಶಸ್ಸು ಕಂಡಿದ್ದಾರೆ. ಅವರು ನಿಜಕ್ಕೂ ರಿಯಲ್ ಲೈಫ್ ಸ್ಟಾರ್ ಆಗಿದ್ದಾರೆ' ಎಂದು ಹೇಳಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಬೆಂಬಲ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಾಧನೆಯನ್ನು ಹೊಗಳುತ್ತಿದ್ದಾರೆ.
ಕರಣ್ ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತು; ಭಾರತ ಬಿಟ್ಟ ಬಗ್ಗೆ ಪ್ರಿಯಾಂಕಾ ಮಾತಿಗೆ ಕಂಗನಾ ಪ್ರತಿಕ್ರಿಯೆ
ಕಂಗನಾ ಹೇಳಿದ್ದೇನು?
ಪ್ರಿಯಾಂಕಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕಂಗನಾ, ಬಾಲಿವುಡ್ ನ ಕರಾಳ ಮುಖವನ್ನು ಪ್ರಿಯಾಂಕಾ ಕೂಡ ಬೆಚ್ಚಿಟ್ಟಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. 'ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಕೂಡ ಇದನ್ನೇ ಹೇಳುತ್ತಿದ್ದಾರೆ. ಜನರ ಗುಂಪು ಪ್ರಿಯಾಂಕಾ ವಿರುದ್ಧ ತಿರುಗಿಬಿತ್ತು. ಆಕೆಯನ್ನು ಬೆದರಿಸಿದರು. ಅವಳನ್ನು ಓಡಿಸಿದರು. ಸಿನಿಮಾರಂಗದ ಸ್ವಯಂ ನಿರ್ಮಿತ ಮಹಿಳೆಯನ್ನು ಭಾರತದಿಂದ ಓಡಿಸಿದರು. ಕರಣ್ ಜೋಹರ್ ಆಕೆಯನ್ನು ಬ್ಯಾನ್ ಮಾಡಿದ್ದರು ಎನ್ನುವುದು ಕೂಡ ಪ್ರತಿಯೊಬ್ಬರಿಗೂ ಗೊತ್ತು' ಎಂದು ಹೇಳಿದ್ದರು. ಕರಣ್ ಜೋಹರ್ ಜೊತೆಗಿನ ವೈಪರೀತ್ಯದ ಬಗ್ಗೆ ಮಾಧ್ಯಮಗಳು ವ್ಯಾಪಕವಾಗಿ ಬರೆದಿವೆ. ಪ್ರಿಯಾಂಕಾಗೆ ಕಿರುಕುಳ ನೀಡಲಾಯಿತು. ಒಂದು ಹಂತದಲ್ಲಿ ಭಾರತ ಬಿಟ್ಟು ಹೊರಡಬೇಕಾಯಿತು' ಎಂದು ಕಂಗನಾ ಹೇಳಿದ್ದರು
ದನದ ಮಾಂಸ ತಿಂದಿದ್ದಕ್ಕೆ ಭಾರತ ಬಿಟ್ಟು ಹೋದ್ರಾ ಪ್ರಿಯಾಂಕಾ; ಊಹಾಪೋಹಗಳಿಗೆ ನಟಿ ಹೇಳಿದ್ದೇನು?
ಭಾರತದ ಬಿಟ್ಟಿದ್ದೇಕೆ ಎಂದು ಬಹಿರಂಗ ಪಡಿಸಿದ್ದ ಪ್ರಿಯಾಂಕಾ
ಡಾಕ್ಸ್ ಶೆಫರ್ಡ್ ಅವರ ಪಾಡ್‌ಕಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡದ ಪ್ರಿಯಾಂಕಾ ಭಾರತ ಬಿಟ್ಟು ಯಾಕೆ ಬಂದೆ ಎಂದು ಬಹಿರಂಗಪಡಿಸಿದ್ದಾರೆ. 'ನಾನು ಇಂಡಸ್ಟ್ರಿಯಲ್ಲಿ (ಬಾಲಿವುಡ್) ಮೂಲೆಗೆ ತಳ್ಳಲ್ಪಟ್ಟಿದ್ದೆ, ನನ್ನನ್ನು ಯಾವುದೇ ಸಿನಿಮಾಗೆ ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಾಲಿವುಡ್ ಜನರ ಜೊತೆ ಗೋಮಾಂಸ ತಿಂದಿದ್ದೇನೆ. ನನಗೆ ಆ ಆಟದಲ್ಲಿ ಆಡಲು ಇಷ್ಟವಿರಲ್ಲ. ಆ ರಾಜಕೀಯದಿಂದ ಬೇಸತ್ತಿದ್ದೆ ಮತ್ತು ನನಗೆ ಬ್ರೇಕ್ ಬೇಕಿತ್ತು' ಎಂದು ಹೇಳಿದ್ದರು.