ನನ್ನನ್ನ ಒಂಟಿಯಾಗಿ ಬಿಟ್ಬಿಡಿ, ಆ ರೇಸ್‌ನಲ್ಲಿ ನಾನಿಲ್ಲ; ಬ್ರಹ್ಮಾಸ್ತ್ರ ಕಲೆಕ್ಷನ್ ವಿರುದ್ಧ ಅಗ್ನಿಹೋತ್ರಿ ಕಿಡಿ

 ಬ್ರಾಹ್ಮಾಸ್ತ್ರ ಕಲೆಕ್ಷನ್ ಬಗ್ಗೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಆ ಸಿನಿಮಾ ಹೇಗೆ ಕಾಶ್ಮೀರ್ ಫೈಲ್ಸ್ ಬೀಟ್ ಮಾಡಿದೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Vivek Agnihotri reacts to Brahmastra beating The Kashmir Files at box office he asks How Did They Beat sgk

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾ ಸೂಪರ್ ಸಕ್ಸಸ್‌ ಆಗಿದೆ. ಬ್ರಹ್ಮಾಸ್ತ್ರ ಬಾಯ್ಕಟ್ ಸಮಸ್ಯೆಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. ಅಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇಡೀ ತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿದ್ದರು. ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡಿದ್ದರು. ಅಂದಹಾಗೆ ಅಲಿಯಾ ಭಟ್ ಗರ್ಭಿಣಿ ಆದರೂ ಸಿನಿಮಾ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಶ್ರಮಕ್ಕೆ ಅಭಿಮಾನಿಗಳಿಂದ ತಕ್ಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ 300 ಕೋಟಿ ಬಾಚಿಕೊಂಡಿದೆ. ಇದು ಬಾಲಿವುಡ‌್ ಗೆ ಹೊಸ ಚೈತನ್ಯ ತುಂಬಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಳಿಕ ಬಾಲಿವುಡ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಬ್ರಹ್ಮಾಸ್ತ್ರವಾಗಿದೆ. ವಿವೇಕ್ ಅಗ್ನಿಹೋತ್ರಿ ಅರ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಿದೆ ಮುನ್ನುಗ್ಗುತ್ತಿದೆ. 

ಆದರೆ ಬ್ರಹ್ಮಾಸ್ತ್ರ ಕಲೆಕ್ಷನ್ ಬಗ್ಗೆ ಅನೇಕರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಕಂಗನಾ ರಣಾವತ್ ಸೇರಿದಂತೆ ಅನೇಕರು ಫೇಕ್ ಕಲೆಕ್ಷನ್ ಎಂದು ಆರೋಪ ಮಾಡಿದ್ದಾರೆ. ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಆ ಸಿನಿಮಾ ಹೇಗೆ ಕಾಶ್ಮೀರ್ ಫೈಲ್ಸ್ ಬೀಟ್ ಮಾಡಿದೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಆ ರೇಸ್ ನಲ್ಲಿ ಇಲ್ಲ, ನಮ್ಮನ್ನು ಬಿಟ್ಬಿಡಿ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಶ್ಮಿಕಾ ಫೈಲ್ಸ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಿದೆ ಎಂದಿರುವ ಒಂದಿಷ್ಟು ಆರ್ಟಿಕಲ್‌ಗಳ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. 

'ಹಾಹಾಹಾ..ಅವರು ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹೇಗೆ ಬೀಟ್ ಮಾಡಿದರು ನನಗೆ ಗೊತ್ತಿಲ್ಲ. ದೊಣ್ಣೆ, ಹಾಕಿ ಸ್ಟಿಕ್, ಎಕೆ47 ಅಥವಾ ಹಣನೀಡಿ, ಪ್ರಭಾವಿಗಳಿಂದ ಸೋಲಿಸಿದ್ದಾರಾ? ನನಗೆ ಗೊತ್ತಿಲ್ಲ. ಬಾಲಿವುಡ್ ಸಿನಿಮಾಗಳು ಒಂದಕ್ಕೊಂದು ಪೈಪೋಟಿ ನೀಡಲಿ. ನನ್ನನ್ನು ಒಂಟಿಯಾಗಿ ಬಿಡಿ. ನಾನು ಆ ಸೈಲೆಂಟ್ ರೇಸ್ ನಲ್ಲಿ ಇಲ್ಲ. ಧನ್ಯವಾದಗಳು. ಆದರೆ ಬಾಲಿವುಡ್‌ಗೆ ಅಲ್ಲ' ಎಂದು ಹೇಳಿದರು.  

ರಣಬೀರ್ ಕಪೂರ್ ತೋಳಲ್ಲಿ ಬೇಬಿ ಶಿವ; 'ವಾವ್.. ಕ್ಯೂಟ್' ಎಂದ ಫ್ಯಾನ್ಸ್

ಬ್ರಹ್ಮಾಸ್ತ್ರ ಸಿನಿಮಾ ಭಾರತದಲ್ಲಿಯೇ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಓವರ್‌ಸೀಸ್ ಕಲೆಕ್ಷನ್ ಸೇರಿದ್ರೆ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದು ಕಾಶ್ಮೀರ್ ಪೈಲ್ಸ್ ಸಿನಿಮಾದ ಒಟ್ಟು 340 ಕೋಟಿ ರೂಪಾಯಿ ಕಲೆಕ್ಷನ್ ಹಿಂದಿಕ್ಕಿದೆ ಎನ್ನಲಾಗಿದೆ. ಈ ವರದಿ ನಿರ್ದೇಶಕ ಅಗ್ನಿಹೋತ್ರಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಬ್ರಹ್ಮಾಸ್ತ್ರ ಸಿನಿಮಾ ದೊಡ್ಡ ಮೊತ್ತದಲ್ಲಿ ನಿರ್ಮಾಣವಾದ ಸಿನಿಮಾ. 400 ಕೋಟಿ ರೂಪಾಯಿಗೂ ಅಧಿಕ ಬೆಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿ ಬ್ರಹ್ಮಾಸ್ತ್ರ ಸಿನಿಮಾವನ್ನು ಹಿಟ್ ಸಿನಿಮಾ ಎಂದು ಕರೆಯಲು ಸಾಧ್ಯವಿಲ್ಲ ಎಂದಿದ್ದರು. 600 ಕೋಟಿ ರೂಪಾಯಿಗೂ ಅಧಿಕ ಬಜೆಟ್ ನಲ್ಲಿ ತಯಾರಾದ ಸಿನಿಮಾ 240 ಕೋಟಿ ಗಳಿಕೆ ಮಾಡಿದೆ ಎಂದಾಗ ಹಿಟ್ ಅಂತ ಕರೆಯಲು ಸಾಧ್ಯವಿಲ್ಲ ಎಂದಿದ್ದರು.


Kangana Ranaut ಬ್ರಹ್ಮಾಸ್ತ್ರ ಸಿನಿಮಾ 144 ಕೋಟಿ ಕಲೆಕ್ಷನ್ ಮಾಡಿಲ್ಲ, ಇದು ಮೂವಿ ಮಾಫಿಯಾ

ಬ್ರಹ್ಮಾಸ್ತ್ರ ಚಿತ್ರದ ಬಗ್ಗೆ

ಒಟ್ನಲ್ಲಿ ಒಂದಿಷ್ಟು ವಿರೋಧ, ಬಾಯ್ಕಟ್ ಸಮಸ್ಯೆ ನಡುವೆಯೂ ಬ್ರಹ್ಮಾಸ್ತ್ರ ಗೆಲುವಿನ ನಗೆಬೀರಿದೆ. ಈ ಚಿತ್ರದಲ್ಲಿ ಅಲಿಯಾ ಭಟ್, ರಣಬೀರ್ ಜೊತೆಗೆ ಅಮಿತಾಭ್​ ಬಚ್ಚನ್​, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಮುಂತಾದ ಸ್ಟಾರ್​ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅತಿಥಿ ಪಾತ್ರ ಮಾಡಿರುವುದು ವಿಶೇಷ.  ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. 

 

Latest Videos
Follow Us:
Download App:
  • android
  • ios