ಜನವರಿ 11ರಂದು ಕೊಹ್ಲಿ ಮುದ್ದಾದ ಹೆಣ್ಣುಮಗುವಿಗೆ ಅಪ್ಪ ಆಗಿದ್ದಾರೆ. ಈ ಸೆಲೆಬ್ರಿಟಿ ಜೋಡಿ ಮಗು ಬಂದಾಗಿನಿಂದ ಜೊತೆಯಾಗಿ ಕಂದನ ಅರೈಕೆ ಮಾಡ್ತಿದ್ದಾರೆ. ಮುದ್ದಾದ ಮಗಳ ಜೊತೆ ಟೈಂ ಸ್ಪೆಂಡ್ ಮಾಡೋಕೆ ಮುಂಚೇನೇ ರಜಾ ತಗೊಂಡಿದ್ರು ಕೊಹ್ಲಿ.

ಇದೀಗ ಕೊಹ್ಲಿ ತಮ್ಮ ಟ್ವಿಟರ್‌ನ ಬಯೋ ಚೇಂಜ್ ಮಾಡಿದ್ದಾರೆ. ಈ ಮೂಲಕ ತಾವು ಡಿಫರೆಂಡ್ ಅಂತ ತೋರಿಸಿಕೊಟ್ಟಿದ್ದಾರೆ ಕೊಹ್ಲಿ. ಟ್ವಿಟರ್ ಬಯೋದಲ್ಲಿ ಸ್ವೀಟಾಗಿ ಕೊಹ್ಲಿ ಏನು ಬರೆದಿದ್ದಾರೆ ನೋಡಿ. 

ಮಗಳು ಬಂದ ಖುಷಿಗೆ ಮಾಧ್ಯಮಕ್ಕೆ ಗಿಫ್ಟ್ ಕೊಟ್ಟ ವಿರುಷ್ಕಾ: ಜೊತೆಗಿತ್ತೊಂದು ರಿಕ್ವೆಸ್ಟ್

“A proud husband and father” - ಪತಿ, ತಂದೆ ಎನ್ನುವ ಹೆಮ್ಮೆ ಇದೆ ಎಂಬರ್ಥದಲ್ಲಿ  ಬಯೋ ಬರೆದಿದ್ದಾರೆ. ವಿರುಷ್ಕಾ ತಮ್ಮ ಮಗಳ ಖಾಸಗಿ ಬದುಕಿನ ಬಗ್ಗೆ ಹೆಚ್ಚು ಸ್ಟ್ರಿಕ್ಟ್ ಆಗಿದ್ದಾರೆ. ವಿರುಷ್ಕಾ ಮಗುವಿಗೆ ಉಡುಗೊರೆ ನೀಡುವುದನ್ನೂ, ಆಗಾಗ್ಗೆ ಭೇಟಿಯಾಗುವುದನ್ನೂ ನಿರಾಕರಿಸಿದ್ದಾರೆ.

ಪಪ್ಪರಾಜಿಗೆ ಉಡುಗೊರೆಯೊಂದಿಗೆ ಸಣ್ಣ ಸಂದೇಶ ಕಳುಹಿಸಿ ಕೊಟ್ಟ ದಂಪತಿ ತಮ್ಮ ಮಗಳ ಖಾಸಗಿತನವನ್ನು ಕಾಪಾಡಲು ನೆರವಾಗಬೇಕೆಂದೂ ಕೇಳಿಕೊಂಡಿದ್ದಾರೆ. ನಮ್ಮ ಬದುಕಿನ ಬಗ್ಗೆ ನಿಮಗೆ ನಾನು ಅಪ್‌ಡೇಟ್ ಮಾಡುತ್ತಿರುತ್ತೇವೆ, ಆದರೆ ನಮ್ಮ ಮಗಳ ಕುರಿತು ಏನೂ ಬರೆಯಬೇಡಿ ಎಂದೂ ಕೇಳಿಕೊಂಡಿದ್ದಾರೆ.