ಸೆಲೆಬ್ರಿಟಿ ದಂಪತಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮಗಳ ಫೊಟೋಸ್ ತೆಗೆಯದಂತೆ, ಖಾಸಗಿತನ ಕಾಪಾಡುವಂತೆ ವಿನಂತಿಸಿ ಪಾಪರಾಜಿಗಳಿಗೆ ವೈಯಕ್ತಿಕ ಪತ್ರಗಳನ್ನು ಕಳುಹಿಸಿದ್ದಾರೆ. ದಂಪತಿಗಳು ತಾವಾಗಿಯೇ ಫೋಟೋ ಅವಕಾಶಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಫೋಟೋಗ್ರಫರ್ ವೈರಲ್ ಭಯಾನಿ ಒಂದು ವಿಡಿಯೀ ಶೇರ್ ಮಾಡಿಕೊಂಡಿದ್ದಾರೆ. ತನ್ನ ಹಾಗೂ ತನ್ನ ತಂಡಕ್ಕೆ ವಿರುಷ್ಕಾ ಕೊಟ್ಟ ಗಿಫ್ಟ್‌ನ ವಿಡಿಯೋವನ್ನು ವೈರನ್ ಭಯಾನಿ ಶೇರ್ ಮಾಡಿಕೊಂಡಿದ್ದಾರೆ.

ವಿರುಷ್ಕಾ ದಂಪತಿ ಹೆಣ್ಣುಮಗುವಿನ ಫೋಟೋ ವೈರಲ್‌! ಫೇಕ್‌ ಯಾ ರಿಯಲ್‌?

ಅನ್‌ ಬಾಕ್ಸಿಂಗ್ ವೀಡಿಯೊ ದಲ್ಲಿ ಬಾಂಬೆ ಸ್ವೀಟ್ ಶಾಪ್ ಟೇಸ್ಟಿ ಚಾಕಲೇಟ್ಸ್, ರುಚಿಯಾದ ಒಣ ಹಣ್ಣುಗಳು, ಕೆಲವು ಡಾರ್ಕ್ ಚಾಕೊಲೇಟ್, ಸುವಾಸಿತ ಮೇಣದ ಬತ್ತಿ ಮತ್ತು ಒಂದು ಕಾಗದವಿತ್ತು.

ಟಿಪ್ಪಣಿಯಲ್ಲಿ, ವಿರಾಟ್ ಮತ್ತು ಅನುಷ್ಕಾ “ಹಾಯ್, ನೀವು ನಮಗೆ ನೀಡಿದ ಎಲ್ಲ ಪ್ರೀತಿಗೆ ಧನ್ಯವಾದಗಳು. ಈ ಮಹತ್ವದ ಸಂದರ್ಭವನ್ನು ನಿಮ್ಮೊಂದಿಗೆ ಆಚರಿಸಲು ನಾವು ಸಂತೋಷಪಡುತ್ತೇವೆ. ಪೋಷಕರಾಗಿ, ನಿಮಗೆ ಸರಳವಾದ ವಿನಂತಿಯನ್ನು ಮಾಡುತ್ತಿದ್ದೇವೆ. ನಮ್ಮ ಮಗುವಿನ ಖಾಸಗಿತನವನ್ನು ರಕ್ಷಿಸಲು ನಾವು ಬಯಸುತ್ತೇವೆ ಮತ್ತು ನಿಮ್ಮ ಸಹಾಯ ಮತ್ತು ಬೆಂಬಲ ನಮಗೆ ಬೇಕು" ಎಂದು ಕೇಳಿದ್ದಾರೆ.

ಹೆಣ್ಣು ಮಗುವನ್ನು ಸ್ವಾಗತಿಸಿದ ವಿರುಷ್ಕಾ ದಂಪತಿ

ನಮ್ಮನ್ನು ಒಳಗೊಂಡಂತೆ ನಿಮಗೆ ಅಗತ್ಯವಿರುವ ಎಲ್ಲಾ ವಿಷಯವನ್ನು ನೀವು ಪಡೆಯುತ್ತೀರಿ ಎಂದು ನಾವು ಯಾವಾಗಲೂ ಖಚಿತಪಡಿಸಿಕೊಳ್ಳುತ್ತೇವೆ, ಆದರೆ ನಮ್ಮ ಮಗುವನ್ನು ಹೊಂದಿರುವ ಯಾವುದೇ ವಿಷಯವನ್ನು ತೆಗೆದುಕೊಳ್ಳಬಾರದು ಎಂದು ನಾವು ನಿಮ್ಮನ್ನು ವಿನಂತಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಟಿ ರವೀನಾ ಟಂಡನ್ ಈ ಪೋಸ್ಟ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಮತ್ತು "ನಮ್ಮ ಎಲ್ಲ ಛಾಯಾಗ್ರಾಹಕರು ಯಾವಾಗಲೂ ಜನರ ಆಶಯಗಳನ್ನು ಗೌರವಿಸಿದ್ದೀರಿ. ನೀವೆಲ್ಲರೂ ನನ್ನ ಮಕ್ಕಳ ಫೋಟೋ ಕ್ಲಿಕ್ ಮಾಡಬಾರದು ಎಂದು ನಾನು ಬಯಸಿದಾಗ ನೀವು ಯಾವಾಗಲೂ ನನ್ನ ವಿನಂತಿಯನ್ನು ಸಹ ಉಳಿಸಿಕೊಂಡಿದ್ದೀರಿ. ಅವರು ಚಿಕ್ಕವರಿದ್ದಾಗ ಈ ದಯೆ ತೋರಿಸಿದ್ದಕ್ಕಾಗಿ ಈ ಸಂದರ್ಭ ಧನ್ಯವಾದ ಎಂದಿದ್ದಾರೆ.

ಸೋಮವಾರ ಮಧ್ಯಾಹ್ನ ವಿರುಷ್ಕಾ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ವಿರುಷ್ಕಾ ಅವರ ಮೊದಲ ಮಗುವಿನ ಆಗಮನದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.