ಪ್ರೇಮಿಗಳ ದಿನ ವಿಶೇಷ ಫೋಟೋ ಶೇರ್ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ್ರಾ ವಿಜಯ್ ವರ್ಮಾ?

ನಟ ವಿಜಯ್ ವರ್ಮಾ ಪ್ರೇಮಿಗಳ ದಿನಾಚರಣೆ ದಿನ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮನ್ನಾ ಜೊತೆಗಿನ ಪ್ರೀತಿ ವಿಚಾರ ಅಧಿಕೃತಗೊಳಿಸಿದ್ರಾ ಎನ್ನುವ ಮಾತು ಕೇಳಿಬರುತ್ತಿದೆ. 

Vijay Varma shares special photo of Valentine's Day, is his relationship official with Tamannaash Bhatia? sgk

ದಕ್ಷಿಣ ಭಾರತೀಯ ಸಿನಿಮಾರಂಗದ ಮೂಲಕ ಪ್ರಸಿದ್ಧಿ ಗಳಿಸಿರುವ ಉತ್ತರದ ಭಾರತದ ನಟಿ ತಮನ್ನಾ ಇತ್ತೀಚಿಗೆ ಪ್ರೀತಿ, ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ.  ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ. ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ ಮೇಲೆ ಇಬ್ಬರ ಡೇಟಿಂಗ್ ವಿಚಾರ ಬಹಿರಂಗವಾಗಿದ್ದು ಈಗ ಅವರದ್ದೇ ಸುದ್ದಿ. ಅನೇಕ ಬಾರಿ ತಮನ್ನಾ ಮತ್ತು ವಿಜಯ್ ವರ್ಮಾ ಒಟ್ಟಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಕ್ಲೋಸ್ ನೆಸ್ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿವೆ. ಇದೀಗ ವಿಜಯ್ ವರ್ಮ ಶೇರ್ ಮಾಡಿರುವ ಫೋಟೋ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. 

ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಹಬ್ಬದ ದಿನ. ಜೋಡಿ ಹಕ್ಕಿಗಳು ಈ ದಿನವನ್ನು ಸಂಭ್ರಮಿಸುತ್ತಾರೆ, ಗಿಫ್ಟ್ ಎಕ್ಸೇಂಜ್ ಮಾಡಿಕೊಳ್ಳುತ್ತಾರೆ. ತರಹೇವಾರಿ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಪ್ರೇಮಿಗಳ ದಿನವನ್ನು ವಿಜಯ್ ವರ್ಮಾ ಕೂಡ ಆಚರಿಸಿದ್ದಾರೆ. ಫೋಟೋ ಶೇರ್ ಮಾಡುವ ಮೂಲಕ ಪ್ರೇಮಿಗಳ ದಿನಕ್ಕೆ ತನ್ನ ಪ್ರೇಯಸಿಗೆ ವಿಶ್ ಮಾಡಿದ್ದಾರೆ. ಹೌದು ವಿಜಯ್ ಕಾಲಿನ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದಾರೆ. ಯಾರು ಎಂದು ವಿಜಯ್ ವರ್ಮಾ ರಿವೀಲ್ ಮಾಡಿಲ್ಲ. 

ಕೈ ಕೈ ಹಿಡಿದು ಒಟ್ಟಿಗೆ ಪೋಸ್ ನೀಡಿದ ತಮನ್ನಾ- ವಿಜಯ್ ವರ್ಮಾ; ಲವ್ ಬರ್ಡ್ಸ್ ಫೋಟೋ ವೈರಲ್

ಆದರೆ ವಿಜಯ್ ವರ್ಮಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಯಾರೆಂದು ಗುರುತು ಹಿಡಿದಿದ್ದಾರೆ. ವಿಜಯ್ ವರ್ಮಾ ಶೇರ್ ಮಾಡಿರುವ ಕಾಲಿನ ಫೋಟೋ ತಮನ್ನಾ ಅವರದ್ದೇ ಎಂದು ಹೇಳುತ್ತಿದ್ದಾರೆ. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎನ್ನುತ್ತಿದ್ದಾರೆ. ಈ ಮೂಲಕ ವಿಜಯ್ ವರ್ಮಾ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. 

ನಟ ವಿಜಯ್ ವರ್ಮಾ ಪ್ರೀತಿಯಲ್ಲಿ ತಮನ್ನಾ; ಮಿಲ್ಕಿ ಬ್ಯೂಟಿ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೇಗೆ?

ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಲಸ್ಟ್ ಸ್ಟೋರಿ -2 ಸಿನಿಮಾ ಸೆಟ್ ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ. ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಗುರ್ತುಂದ ಸೀತಕಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
 

Latest Videos
Follow Us:
Download App:
  • android
  • ios