ಕೈ ಕೈ ಹಿಡಿದು ಒಟ್ಟಿಗೆ ಪೋಸ್ ನೀಡಿದ ತಮನ್ನಾ- ವಿಜಯ್ ವರ್ಮಾ; ಲವ್ ಬರ್ಡ್ಸ್ ಫೋಟೋ ವೈರಲ್
ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದುಕೈ ಕೈ ಹಿಡಿದು ಪೋಸ್ ನೀಡಿರುವ ಫೋಟೋ ವೈರಲ್ ಆಗಿದೆ.
ದಕ್ಷಿಣ ಭಾರತೀಯ ಸಿನಿಮಾರಂಗದ ಮೂಲಕ ಪ್ರಸಿದ್ಧಿ ಗಳಿಸಿರುವ ನಟಿ ತಮನ್ನಾ ಸದ್ಯ ಪ್ರೀತಿ, ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ ಮೇಲೆ ಇಬ್ಬರ ಡೇಟಿಂಗ್ ವಿಚಾರ ಬಹಿರಂಗವಾಗಿದೆ. ಇದೀಗ ಎಲ್ಲಾ ಕಡೆ ಇಬ್ಬರ ಲವ್ ಸ್ಟೋರಿದೇ ಮಾತು.
ಇದೀಗ ಮತ್ತೆ ಮಿಲ್ಕಿ ಬ್ಯೂಟಿ ರೂಮರ್ ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸಿದ್ದಾರೆ. ಮುಂಬೈನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಇಬ್ಬರೂ ಭಾಗಿಯಾಗಿದ್ದರು. ಪಾಪಾರಾಜಿಗಳಿಗೆ ಇಬ್ಬರೂ ಒಟ್ಟಿಗೆ ಪೋಸ್ ನೀಡುವ ಮೂಲಕ ವೈರಲ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದ್ದಾರೆ.
ವೇದಿಕೆ ಮೇಲೆ ನಿಂತಿದ್ದ ತಮನ್ನಾ ಕ್ಯಾಮರಾಗೆ ಪೋಸ್ ನೀಡುತ್ತಿದ್ದರು. ಆಗ ವಿಜಯ್ ವರ್ಮಾ ಕೂಡ ಎಂಟ್ರಿ ಕೊಟ್ಟರು. ವಿಜಯ್ ವರ್ಮಾ ಅವರನ್ನು ಕೈ ಹಿಡಿದು ಎಳೆದುಕೊಂಡು ಪಕ್ಕದಲ್ಲೇ ನಿಲ್ಲಿಸಿಕೊಂಡರು. ಇಬ್ಬರೂ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರನ್ನೂ ಮತ್ತೆ ಒಟ್ಟಿಗೆ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ಜೋಡಿಯನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ಜೋಡಿ ಚಂದ ಇಲ್ಲ ಎನ್ನುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ತಮನ್ನಾಗಿಂತ ವಿಜಯ್ ವರ್ಮಾ ಉತ್ತಮ ನಟ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಗ್ರೇಟ್ ಜೋಡಿ ಎಂದು ಹೇಳುತ್ತಿದ್ದಾರೆ.
ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಲಸ್ಟ್ ಸ್ಟೋರಿ -2 ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದು ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎನ್ನಲಾಗಿದೆೇ. ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ತಮನ್ನಾ ಮತ್ತು ವಿಜಯ್ ವರ್ಮಾ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿರುದ್ದಾರೆ ಎನ್ನುವ ಸುಳಿವು ಎಲ್ಲೂ ನೀಡಿರಲಿಲ್ಲ. ಆದರೀಗ ಬಹಿರಂಗವಾಗಿದೆ. ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೋಲ ಶಂಕರ್. ಗುರ್ತುಂದ ಸೀತಕಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.