ನಟ ವಿಜಯ್ ವರ್ಮಾ ಪ್ರೀತಿಯಲ್ಲಿ ತಮನ್ನಾ; ಮಿಲ್ಕಿ ಬ್ಯೂಟಿ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೇಗೆ?
ಟಾಲಿವುಡ್ ಸ್ಟಾರ್ ತಮನ್ನಾ ಮತ್ತು ನಟ ವಿಜಯ್ ವರ್ಮಾ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರೂ ಮೊದಲು ಭೇಟಿಯಾಗಿದ್ದು ಎಲ್ಲಿ, ಪ್ರೀತಿ ಪ್ರಾರಂಭವಾಗಿದ್ದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಉತ್ತರ ಭಾರತ ಮೂಲದ ಸೌತ್ ಸ್ಟಾರ್ ತಮನ್ನಾ ಲವ್ ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಿಲ್ಕಿ ಬ್ಯೂಟಿ ಲವ್, ಡೇಟಿಂಗ್ ಗಾಸಿಪ್ ವಿಚಾರಗಳಿಂದ ತುಂಬಾ ಇದ್ದರು. ಸ್ಟಾರ್ ಕಲಾವಿದರ ಜೊತೆ ತಮನ್ನಾ ಹೆಸರು ಥಳಕು ಹಾಕಿಕೊಂಡಿದ್ದೇ ಇಲ್ಲ. ಆದರೆ ಹೊಸ ವರ್ಷದ ವಿಡಿಯೋ ತಮನ್ನಾ ಲವ್ ಸ್ಟೋರಿ ಮಾಡಿದೆ. ಬಾಯ್ ಫ್ರೆಂಡ್ ಜೊತೆ ಮಿಲ್ಕಿ ಬ್ಯೂಟಿ ಸಂಭ್ರಮಾಚರಣೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೊಸ ವರ್ಷ ಆಚರಣೆ ಮೂಲಕ ತಮನ್ನಾ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೌತ್ ಸ್ಟಾರ್ ತಮನ್ನಾ ಪ್ರೀತಿಯಲ್ಲಿ ಬಿದ್ದಿರುವುದು ಮಿರ್ಜಾಪುರ್ ಖ್ಯಾತಿಯ ನಟ ವಿಜಯ್ ವರ್ಮಾ ಜೊತೆ. ಹೌದು ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ್ದಾರೆ. ಇಬ್ಬರೂ ಗೋವಾದಲ್ಲಿ 2023ರನ್ನು ಸ್ವಾಗತಿಸಿದ್ದಾರೆ. ಇಬ್ಬರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮನ್ನಾ- ವಿಜಯ್ ವರ್ಮಾ ಮೊದಲ ಭೇಟಿ ಎಲ್ಲಿ?
ತಮನ್ನಾ ಮತ್ತು ವಿಜಯ್ ವರ್ಮಾ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೇಗೆ, ಇಬ್ಬರೂ ಕ್ಲೋಸ್ ಆಗಿದ್ದು ಯಾವಾಗ ಎನ್ನುವ ಕತೂಹಲ ಅಭಿಮಾನಿಗಳಿಗೆ ಇದೆ. ಪಿಂಕ್‌ವಿಲ್ಲಾ ವರದಿ ಮಾಡಿರುವಪ್ರಕಾರ ಇಬ್ಬರೂ ಮೊದಲು ಭೇಟಿಯಾಗಿದ್ದರು 'ಲಸ್ಟ್ ಸ್ಟೋರಿಸ್-2' ಸೀರಿಸ್‌ನಲ್ಲಿ. ಬಬ್ಲಿ ಬೌನ್ಸರ್ ನಟಿ ಮತ್ತು ಮಿರ್ಜಾಪುರ್ ನಟ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಲಸ್ಟ್ ಸ್ಟೋರಿಸ್ ಮೊದಲ ಭಾಗದ ಸಕ್ಸಸ್ ಬಳಿಕ ಪಾರ್ಟ್-2 ಮೂಲಕ ಮತ್ತೆ ಬರ್ತಿದೆ. ಪಾರ್ಟಿ ನಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಇಬ್ಬರೂ ಮೊದಲು ಭೇಟಿಯಾದರು. ಅಲ್ಲಿಂದ ಪ್ರಾರಂಭವಾದ ಸ್ನೇಹ ಇದೀಗ ಪ್ರೀತಿಗೆ ತಿರುಗಿ ಮದುವೆ ಹಂತಕ್ಕೆ ಹೋಗಿದೆ ಎನ್ನಲಾಗಿದೆ.
'ಆ' ಟೈಪ್ ಸೀನ್ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು
ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ. ಇಬ್ಬರಿಂಗೂ ಸಿನಿಮಾ ಎಂದರೆ ತುಂಬಾ ಪ್ರೀತಿ. ಇಬ್ಬರೂ ಸದ್ಯ ಸಂತಸದಲ್ಲಿದ್ದು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷದ ಪಾರ್ಟಿಗೂ ಮೊದಲು ತಮನ್ನಾ ಮತ್ತು ವಿಜಯ್ ವರ್ಮಾ ದಿಲ್ಜಿತ್ ದೋಸಾಂಜ್ ಅವರ ಮ್ಯೂಸಿಕ್ ಈವೆಂಟ್ ನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಹೊಸ ವರ್ಷದ ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಿ ವೈರಲ್ ಆಗಿದ್ದಾರೆ.
'ಮಿರ್ಜಾಪುರ್' ನಟನ ಜೊತೆ ತಮನ್ನಾ ಡೇಟಿಂಗ್; ಹೊಸ ವರ್ಷಕ್ಕೆ ತಬ್ಬಿ ಕಿಸ್ ಮಾಡಿದ ಮಿಲ್ಕಿ ಬ್ಯೂಟಿ ವಿಡಿಯೋ ವೈರಲ್
ತಬ್ಬಿಕೊಂಡು ಕಿಸ್ ಮಾಡಿ ಹೊಸ ವರ್ಷ ಆಚರಿಸಿದ ಜೋಡಿ
ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದರು. ವಿಜಯ್ ವರ್ಮಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಇಬ್ಬರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ತಮನ್ನಾ ಮತ್ತು ವಿಜಯ್ ವರ್ಮಾ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೆ ಇಬ್ಬರೂ ಡೇಟಿಂಗ್ ಮಾಡುತ್ತಿರುದ್ದಾರೆ ಎನ್ನುವ ಸುಳಿವು ಎಲ್ಲೂ ನೀಡಿರಲಿಲ್ಲ. ಇದೀಗ ಹೊಸ ವರ್ಷ ಒಟ್ಟಿಗೆ ಆಚರಿಸಿ ಸುದ್ದಿಯಾಗಿದ್ದಾರೆ. ಆಕಾಶದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆಗ ವಿಜಯ್ ಮತ್ತು ತಮನ್ನಾ ಇಬ್ಬರೂ ತಬ್ಬಿಕೊಂಡು ಸಂಭ್ರಮಿಸಿದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದರೆ ಇಬ್ಬರೂ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ.