'ಬಿಗಿಲ್' ಚಿತ್ರದ ಭರ್ಜರಿ ಯಶಸ್ಸಿನ ನಂತರ  ತಮಿಳು ಸೂಪರ್‌ಸ್ಟಾರ್ ವಿಜಯ್ ಮುಂದಿನ ಸಿನಿಮಾ 'ದಳಪತಿ 64' ಬಗ್ಗೆ ಎಕ್ಸೈಟ್ ಆಗಿದ್ದಾರೆ. ದೆಹಲಿಯಲ್ಲಿ ಶೂಟಿಂಗ್ ನಡೆದಿದ್ದು ಇದೀಗ ಶಿವಮೊಗ್ಗಕ್ಕೆ ಬಂದಿದ್ದಾರೆ ತಮಿಳು ಸ್ಟಾರ್ಸ್. 

ಧ್ರುವ ಸರ್ಜಾಗೂ ಇದ್ದಾರೆ ಅಪರೂಪದ ತಂಗಿ; ಇವರ ಹಿಂದಿದೆ ಮನಮಿಡಿಯುವ ಕಥೆ!

ಶಿವಮೊಗ್ಗದ ಜೈಲಿನ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನೂ ಪಡೆದಿದ್ದಾರೆ ಎನ್ನಲಾಗಿದೆ. ಡಿಸಂಬರ್ 1 ರಿಂದ ಜನವರಿ 18 ರವರೆಗೆ ಶೂಟಿಂಗ್‌ಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. 

'ದಳಪತಿ 64' ಸಿನಿಮಾದಲ್ಲಿ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನಾನ್, ಅಂಟೋನಿ ವರ್ಗೀಸ್, ಶಂತನು ಭಾಗ್ಯರಾಜ್ ನಟಿಸಿದ್ದಾರೆ.