ಆಕೆಯೊಂದಿಗೆ ಸಿನಿಮಾ ಮಾಡಲಾರೆ; ಹೀಗೆಂದಿದ್ದೇಕೆ ವಿಜಯ್ ಸೇತುಪತಿ?
'ಉಪ್ಪೇನ' ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್‌ನಲ್ಲಿ ನಾನು 'ನನ್ನನ್ನು ನಿನ್ನ ತಂದೆಯ ಸ್ಥಾನದಲ್ಲಿ ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ, ಆಕೆಗೆ ನನ್ನ ಮಗನಷ್ಟೇ ವಯಸ್ಸು. ನಾನು ನಟಿ ಕೃತಿಯನ್ನು ನನ್ನ ಮಗಳೆಂದು ಭಾವಿಸಿದ್ದೇನೆ. ಅವಳೊಂದಿಗೆ ರೊಮ್ಯಾನ್ಸ್ ಸೀನ್ಸ್ ಮಾಡುವುದನ್ನು ನಾನು ಕಲ್ಪಿಸಿಕೊಳ್ಳಲೂ ಅಸಾಧ್ಯ' ಎಂದಿದ್ದಾರೆ ನಟ ವಿಜಯ್ ಸೇತುಪತಿ.

ತಮಿಳು ನಟ ವಿಜಯ್ ಸೇತುಪತಿ ಸದ್ಯ ಜವಾನ್ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ನಾಯಕತ್ವದ ಜವಾನ್ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜವಾನ್ ಚಿತ್ರವು ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 7 ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ದಾಖಲಿಸಿದೆ. ಇದಕ್ಕೂ ಮೊದಲು ಶಾರುಖ್ ನಟನೆಯ 'ಪಠಾಣ್' ಚಿತ್ರವು ಕೂಡ ಸೂಪರ್ ಹಿಟ್ ಆಗಿದೆ.
ಜವಾನ್ ಚಿತ್ರದ ಯಶಸ್ಸಿನ ಬಳಿಕ ನಟ ವಿಜಯ್ ಸೇತುಪತಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ನಟ ವಿಜಯ್ ಸೇತುಪತಿ ಮಿಂಚಿದ್ದಾರೆ. ಇದೀಗ ತಮಿಳು ಚಿತ್ರದ ಆಫರ್ ಒಂದಕ್ಕೆ ಮಾತುಕತೆ ನಡೆಯುತ್ತಿತ್ತು. ಈ ಚಿತ್ರದಲ್ಲಿ ನಾಯಕರಾಗಿ ನಟಿಸಲಿರುವ ವಿಜಯ್ ಸೇತುಪತಿ, ನಾಯಕಿ ಪಾತ್ರಧಾರಿ ಕೃತಿ ಶೆಟ್ಟಿ ಎಂದು ಗೊತ್ತಾಗುತ್ತಿದ್ದಂತೆ ಈ ಆಫರ್ ನಿರಾಕರಿಸಿದ್ದಾರೆ. 'ನಾನು ಈ ಚಿತ್ರದಲ್ಲಿ ನಟಿಸಲಾರೆ' ಎಂದುಬಿಟ್ಟಿದ್ದಾರೆ.
ಜನರಿಗಾಗಿ ಏನು ಮಾಡ್ತೀರಾ: ಬೊಂಬಾಟ್ ಉತ್ತರ ಕೊಟ್ಟ 'ಜವಾನ್' ಶಾರುಖ್!
"ಒಮ್ಮೆ ಮಗಳೆಂದು ಕಲ್ಪಿಸಿಕೊಂಡು ಪಾತ್ರ ಮಾಡಿದ ಮೇಲೆ ನಾನು ಅದೇ ನಟಿಯೊಂದಿಗೆ ಹೇಗೆ ಲವ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲಿ? ಆಕೆಯೊಂದಿಗೆ ರೊಮ್ಯಾನ್ಸ್ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. 'ಉಪ್ಪೇನ' ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್‌ನಲ್ಲಿ ನಾನು 'ನನ್ನನ್ನು ನಿನ್ನ ತಂದೆಯ ಸ್ಥಾನದಲ್ಲಿ ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ, ಆಕೆಗೆ ನನ್ನ ಮಗನಷ್ಟೇ ವಯಸ್ಸು. ನಾನು ನಟಿ ಕೃತಿಯನ್ನು ನನ್ನ ಮಗಳೆಂದು ಭಾವಿಸಿದ್ದೇನೆ. ಅವಳೊಂದಿಗೆ ರೊಮ್ಯಾನ್ಸ್ ಸೀನ್ಸ್ ಮಾಡುವುದನ್ನು ನಾನು ಕಲ್ಪಿಸಿಕೊಳ್ಳಲೂ ಅಸಾಧ್ಯ' ಎಂದಿದ್ದಾರೆ ನಟ ವಿಜಯ್ ಸೇತುಪತಿ.
ನನ್ನ ಸಿನಿಮಾ ಸೋಲಿಗೆ ಸೌತ್ ಸಿನಿಮಾ ಅಬ್ಬರವೇ ಕಾರಣ: ಬೆಚ್ಚಿಬಿದ್ದ ಬಾಲಿವುಡ್!
2021ರಲ್ಲಿ ಬಿಡುಗಡೆಯಾಗಿದ್ದ 'ಉಪ್ಪೇನ' ತೆಲುಗು ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ನಟಿ ಕೃತಿ ಶೆಟ್ಟಿಯ ಜತೆ ತೆರೆ ಹಂಚಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ಅವರು ಕೃತಿಯ ತಂದೆಯ ಪಾತ್ರದಲ್ಲಿ ನಟಿಸಿದ್ದರು. 'ಒಂದು ಚಿತ್ರದಲ್ಲಿ ಮಗಳ ಪಾತ್ರದ ನಟಿಯ ಜತೆ ಮತ್ತೊಂದು ಚಿತ್ರದಲ್ಲಿ ರೊಮ್ಯಾನ್ಸ್ ಸೀನ್ ಮಾಡುವುದು ಹೇಗೆ' ಎಂಬ ವಿಜಯ್ ಸೇತಪತಿ ಪ್ರಶ್ನೆಗೆ ಅನೇಕರು 'ಹೌದು, ನಿರ್ಧಾರ ಸರಿಯಾಗಿದೆ; ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ವಿಜಯ್ ಸೇತುಪತಿ-ಕೃತಿ ಶೆಟ್ಟಿ ಜೋಡಿಯ ಚಿತ್ರವನ್ನು ಯಾರಾದರೂ ನಿರೀಕ್ಷೆ ಮಾಡಿದ್ದರೆ ಅವರಿಗೆ ನಿರಾಸೆಯೇ ಗತಿ!