Asianet Suvarna News Asianet Suvarna News

'ಜವಾನ್'​ನಲ್ಲಿ ನಟಿಸಲು ವಿಜಯ್​ ಸೇತುಪತಿ ಒಪ್ಪಿದ್ದೇಕೆ? ಫ್ರೀ ಸೇವೆ ಅಂದ ನಟ ಪಡೆದದ್ದೆಷ್ಟು?

'ಜವಾನ್'​ನಲ್ಲಿ ನಟಿಸಲು ತಮಿಳು ಚಿತ್ರನಟ ವಿಜಯ್​ ಸೇತುಪತಿ ಒಪ್ಪಿದ್ದೇಕೆ? ಈ ಚಿತ್ರವನ್ನು ಉಚಿತ ಮಾಡುವುದಾಗಿ ಹೇಳಿದ್ದ ನಟ  ಪಡೆದ ಸಂಭಾವನೆಯೆಷ್ಟು?
 

Vijay Sethupathi reveals he did jawan for  special reason suc
Author
First Published Jul 17, 2023, 4:48 PM IST

ಬರುವ ಸೆಪ್ಟೆಂಬರ್​ 7ರಂದು ಬಿಡುಗಡೆಯಾಗಲಿರುವ ಶಾರುಖ್​ (Shah Rukh Khan ) ಅಭಿನಯದ ಜವಾನ್​ ಚಿತ್ರಕ್ಕೆ ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್​ ಇನ್ನೊಂದು ದಾಖಲೆ ಚಿತ್ರದತ್ತ ಕಣ್ಣು ನೆಟ್ಟಿದ್ದರೆ, ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಅಭಿಮಾನಿಗಳೂ ಕಾತರರಾಗಿದ್ದಾರೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್​ ಇದಾಗಲೇ ಬಿಡುಗಡೆಯಾಗಿದ್ದು ಸಕತ್​ ಹಿಟ್​ ಆಗಿವೆ.  ಇಂತಹ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ 7 ಶಾರುಖ್‌ಗೆ ತುಂಬಾ ವಿಶೇಷವಾಗಲಿದೆ.   ಈ ಸಿನಿಮಾದಲ್ಲಿ ನಟಿಸಿರುವ ದೊಡ್ಡ ದೊಡ್ಡ ಸ್ಟಾರ್​ಗಳಲ್ಲಿ ಈಗ  ತಮಿಳು ನಟ ವಿಜಯ್​ ಸೇತುಪತಿ ಅವರ ವಿಷಯ ಮುನ್ನೆಲೆಗೆ ಬಂದಿದೆ. 

1978 ರಲ್ಲಿ ಜನಿಸಿರೋ  ವಿಜಯ್ ಸೇತುಪತಿ (Vijay Setupathi) ಅವರಿಗೆ ವಯಸ್ಸು 45 ಆದರೂ ಇಂದಿಗೂ ತಮಿಳು ಇಂಡಸ್ಟ್ರಿಯಲ್ಲಿ ಸಕತ್​ ಮಿಂಚುತ್ತಿದ್ದಾರೆ. ನಾಯಕನಾಗಿ ಇವರು ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ.  ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಬಿಡುಗಡೆಗೊಂಡ ವಿಕ್ರಮ್ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ಪಡೆದ ಅಪಾರ ಮೆಚ್ಚುಗೆ ಪಡೆದರು. ಈ ಚಿತ್ರ ಬ್ಲಾಕ್​ಬಸ್ಟರ್​ ಆದ ಮೇಲೆ ವಿಜಯ್​ ಅವರ ವರ್ಚಸ್ಸಿನ ಜೊತೆ ಸಂಭಾವನೆಯೂ ಹೆಚ್ಚಿದೆ.

ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

ಇಷ್ಟಿದ್ದರೂ, ನಟ ಜವಾನ್​ (Jawan) ಚಿತ್ರದಲ್ಲಿ ಫ್ರೀಯಾಗಿ ನಟಿಸಲು ರೆಡಿಯಾಗಿದ್ದರು ಎನ್ನುವ ಸುದ್ದಿಯಿದೆ. ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್, ವಿಜಯ್ ಸೇತುಪತಿ ಅವರಿಗೆ 'ಜವಾನ್' ಚಿತ್ರದ ಆಫರ್ ನೀಡುತ್ತಿದ್ದಂತೆ ಏನೂ ಕೇಳದೇ ಅವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಕಾರಣ, ಅಟ್ಲಿ ಕುಮಾರ್​ ಅವರಂಥ ನಿರ್ದೇಶಕ ಜೊತೆ ಕೆಲಸ ಮಾಡುವುದು ಒಂದೆಡೆಯಾದರೆ, ಈ ಚಿತ್ರವನ್ನು ತಾವು ಉಚಿತವಾಗಿ ಮಾಡುವುದಾಗಿಯೂ ಹೇಳಿದ್ದರಂತೆ. ಈ ಉಚಿತ ಘೋಷಣೆಗೆ ಅವರು ನೀಡಿದ್ದ ಕಾರಣ ಏನೆಂದರೆ,  'ಶಾರುಖ್ ಅವರೊಂದಿಗೆ ಸಿನಿಮಾ ಮಾಡುವ ಅವಕಾಶವನ್ನು ಕಳೆದುಕೊಳ್ಳುವುದು ನನಗೆ ಇಷ್ಟವಿಲ್ಲ. ಅವರ ಜೊತೆ ಕೆಲಸ ಮಾಡಲು ನನಗೆ ಹಣ ಬೇಕಿಲ್ಲ. ಅದು ನನ್ನ ಅದೃಷ್ಟ. ನಾನು ಹಣ ತೆಗೆದುಕೊಳ್ಳದೇ ಈ ಸಿನಿಮಾ ಮಾಡುತ್ತೇನೆ' ಎಂದಿದ್ದರಂತೆ. ಈ ಕುರಿತು ಅವರು ನಿರ್ದೇಶಕ ಅಟ್ಲಿ ಅವರ ಮುಂದೆಯೇ ಹೇಳಿದ್ದರು ಎನ್ನಲಾಗಿದೆ.
 
ಆದರೆ ಈಗ ಬಂದಿರುವ ವರದಿಯ ಪ್ರಕಾರ, ಮೊದಲೇ ಹೇಳಿದಂತೆ ನಟ ವಿಜಯ್​ ಸೇತುಪತಿ ವಿಕ್ರಮ್​ (Vikram) ಚಿತ್ರದ ಬಳಿಕ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 15 ಕೋಟಿ ರೂಪಾಯಿವರೆಗೆ ಪ್ರತಿ ಚಿತ್ರಕ್ಕೆ ಸಂಭಾವನೆ ಪಡೆಯುತ್ತಿದ್ದ ನಟ, ಈಗ ಅದನ್ನು 21 ಕೋಟಿ ರೂಪಾಯಿಗೆ ಏರಿಸಿಕೊಂಡಿದ್ದಾರೆ. ಅದರಂತೆಯೇ ಜವಾನ್​ ಚಿತ್ರಕ್ಕೂ ಅವರು  21 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.  

Ileana D'Cruz ಬಾಯ್‌ಫ್ರೆಂಡ್‌ ಫೋಟೋ ರಿವೀಲ್​? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!

Follow Us:
Download App:
  • android
  • ios