Asianet Suvarna News Asianet Suvarna News

ವಿಜಯ್​ ಸೇತುಪತಿ ಲವ್​ ಮಾಡಿದ ಹುಡುಗಿ, ಶಾರುಖ್​ ಲವರ್​! ಇಂಟರೆಸ್ಟಿಂಗ್​ ಗುಟ್ಟು ರಟ್ಟು...

ಚೆನ್ನೈನಲ್ಲಿ ನಡೆದ ಜವಾನ್​ ಪ್ರೀ ರಿಲೀಸ್​ ಈವೆಂಟ್​ನಲ್ಲಿ ವಿಜಯ್​ ಸೇತುಪತಿ ಅವರು ಗರ್ಲ್​ಫ್ರೆಂಡ್​ ವಿಷಯದ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡಿದ್ದಾರೆ. ಏನದು?
 

Vijay Sethupathi  Reveals about  Shah Rukhs and his crush suc
Author
First Published Aug 31, 2023, 12:49 PM IST

 ಶಾರುಖ್ ಖಾನ್  ನಟನೆಯ ‘ಜವಾನ್‘ (Jawan) ಚಿತ್ರದ ಬಿಡುಗಡೆಗೆ ಕೌಂಟ್​ಡೌನ್​ ಶುರುವಾಗಿದೆ. ಸೆಪ್ಟೆಂಬರ್​ 7ರಂದು ಇದರ ಬಿಡುಗಡೆಯಾಗಲಿದೆ.  ಇದರ ಅಂಗವಾಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ  ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಜವಾನ್’ ಹಿಂದಿ ಸಿನಿಮಾ ಆದರೂ ಬಹುತೇಕ ನಟ, ತಂತ್ರಜ್ಙರು ತಮಿಳಿನವರೇ ಆಗಿರುವ ಕಾರಣ ಹಾಗೂ ಸಿನಿಮಾ ಸಹ ಹಿಂದಿಯ ಜೊತೆಗೆ ತಮಿಳು, ತೆಲುಗು ಭಾಷೆಗಳಿಗೆ ಡಬ್ ಆಗುತ್ತಿರುವ ಕಾರಣ ಚೆನ್ನೈನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ   ನಟ ಶಾರುಖ್ ಖಾನ್, ವಿಜಯ್ ಸೇತುಪತಿ, ನಿರ್ದೇಶಕ ಅಟ್ಲೀ ಅವರು ಭಾಗವಹಿಸಿದ್ದರು. ಆ ವೇಳೆ ವಿಜಯ್ ಹಾಗೂ ಶಾರುಖ್ (Shah Rukh Khan) ಮಧ್ಯೆ ಹುಡುಗಿ ವಿಚಾರವಾಗಿ ಒಂದಷ್ಟು ಕುತೂಹಲದ ಮಾತುಕತೆ ನಡೆದಿದೆ. ಅದಕ್ಕೂ ಮುನ್ನ ಶಾರುಖ್​ ಅವರು,  ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಭರ್ಜರಿ ಸ್ಟೆಪ್​ ಹಾಕಿದರು. ಬಳಿಕ ಮಾತನಾಡಿದ ಅವರು,  ‘ನಾನು ಈ ಮೂರು ವರ್ಷ ತಮಿಳು ಕಲಾವಿದರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬಹಳಷ್ಟು ಜನ ಗೆಳೆಯರನ್ನು ನಾನು ಮಾಡಿಕೊಂಡಿದ್ದೇನೆ. ತಮಿಳು ಜನರ ಪ್ರೀತಿ ನೋಡಿದ್ದೇನೆ, ಮುಂದೆಯೂ ನೋಡಲಿದ್ದೇನೆ' ಎಂದರು. ಇದರ ನಡುವೆಯೇ, ಹುಡುಗಿಯ ವಿಷಯವೊಂದು ಚರ್ಚೆಗೆ ಬಂತು. ಈ ಹುಡುಗಿಯ ವಿಷಯವಾಗಿ ಶಾರುಖ್​ ಖಾನ್​ ಹಾಗೂ ಜವಾನ್​ ಚಿತ್ರದಲ್ಲಿ ಸಾವಿನ ವ್ಯಾಪಾರಿ ಎಂದೇ ಬಣ್ಣಿಸಲಾಗುವ ವಿಜಯ್​ ಸೇತುಪತಿ ನಡುವಿನ ಕುತೂಹಲದ ವಿಷಯ ಇದು. 

ವಿಜಯ್ ಸೇತುಪತಿ ನನ್ನ ಸಹೋದರ, ಅವರಿಂದ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಂಥಹಾ ನಟರು ಭಾರತದಲ್ಲಿ ಅಪರೂಪ ಎಂದು ಮೊದಲಿಗೆ ಶಾರುಖ್​ ಹೊಗಳಿದರು. ನಂತರ  ಈ ಸಮಯದಲ್ಲಿ  ವಿಜಯ್​ ಸೇತುಪತಿ ಅವರು 'ನಾನು ಶಾಲೆಯಲ್ಲಿದ್ದಾಗ ನನಗೊಂದು ಹುಡುಗಿ ಮೇಲೆ ಪ್ರೀತಿ ಹುಟ್ಟಿತ್ತು. ಆ ಸಮಯದಲ್ಲಿ ಅವೆಲ್ಲಾ ಮಾಮೂಲು ಬಿಡಿ. ಆದರೆ ಈಗ ನೋಡಿದ್ರೆ ಅದೇ ಹುಡುಗಿಗೆ ಈಗ  ಶಾರುಖ್ ಖಾನ್  ಮೇಲೆ ಲವ್ ಇರೋದು ಗೊತ್ತಾಯ್ತು.  ನನ್ನ ಸ್ಥಿತಿ ಹೇಗಿರಬೇಡ ಎಂದ ವಿಜಯ್​ ಸೇತುಪತಿ,  ಆ ರಿವೆಂಜ್ ತೀರಿಸಿಕೊಳ್ಳೋಕೆ ಇಷ್ಟು ವರ್ಷ ಬೇಕಾಯ್ತು. ಜವಾನ್​ ಬಿಡುಗಡೆಗೆ ಕಾಯಬೇಕಾಯ್ತು ಎಂದು ತಮಾಷೆ ಮಾಡಿದರು.

'ಜವಾನ್'​ ವಿಡಿಯೋ ಲೀಕ್​, FIR​: ಬಿಡುಗಡೆಗೆ ಮುನ್ನವೇ ನೋಡುವವರಿಗೂ ಕಾದಿದೆ ಅಪಾಯ!
 
ಅದಕ್ಕೆ ಶಾರುಖ್​ ಸುಮ್ಮನಿರುತ್ತಾರೆಯೆ? ಅಷ್ಟೇ ಹಾಸ್ಯದ ರೂಪದಲ್ಲಿ ವಿಜಯ್​ ಅವರೇ ನೀವು ನನ್ನ ಮೇಲೆ ಎಷ್ಟು ರಿವೇಂಜ್ ಬೇಕಾದ್ರೂ ತಗೊಳ್ಳಿ.  ಆದರೆ ಆ ಹುಡುಗಿಯ ಮೇಲೆ ಮಾತ್ರ ಏನೂ ರಿವೇಂಜ್​ ತಗೋಬೇಡಿ, ಪಾಪ. ಆಕೆಯಷ್ಟೇ ಅಲ್ಲ, ಎಲ್ಲರೂ ನನ್ನವರೇ ಎಂದಾಗ ಅಲ್ಲಿದ್ದವರು ನಕ್ಕು ನಕ್ಕು ಸುಸ್ತಾದರು. ಇದೇ ವೇಳೆ ವಿಜಯ್​ ಸೇತುಪತಿ ಅವರು, ಶಾರುಖ್​ ಅವರನ್ನು ಹಾಡಿ ಹೊಗಳಿದರು.  'ನಾನು ಶಾರುಖ್ ಖಾನ್ ಜೊತೆ ನಟಿಸುತ್ತೇನೆ, ಅವರೊಟ್ಟಿಗೆ ಫೈಟ್ ಮಾಡುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಅವರೊಬ್ಬ ಅದ್ಭುತ ನಟ ಆಗಿರುವ ಜೊತೆಗೆ ಅದ್ಭುತವಾದ ವ್ಯಕ್ತಿ. ಎಲ್ಲರನ್ನೂ ಸಮಾನವಾಗಿ, ಗೌರವದಿಂದ ಕಾಣುವ ಗುಣ ಕಲಾವಿದನಿಗೆ ಮೊದಲಿಗೆ ಇರಬೇಕಾಗುತ್ತದೆ. ಆ ಗುಣ ಅವರಲ್ಲಿ ತುಂಬಿ ತುಳುಕುತ್ತಿದೆ. ಅವರು ತಮ್ಮ ಸುತ್ತಲೂ ಇರುವವರನ್ನು ನಡೆಸಿಕೊಳ್ಳುವ ರೀತಿ ಅದ್ಭುತ' ಎಂದರು.

 'ಜವಾನ್' ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ (Sanya Malhotra) ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಜರ್ಮನಿಯಲ್ಲಿ ಶಾರುಖ್ ಖಾನ್​ ದಾಖಲೆ​; ಇತಿಹಾಸ ಸೃಷ್ಟಿಸಲಿದೆ ಜವಾನ್!

Follow Us:
Download App:
  • android
  • ios