Asianet Suvarna News Asianet Suvarna News

ನಾನಿ- ಮೃಣಾಲ್‌ ಠಾಕೂರ್‌ ಚಿತ್ರದ ಪ್ರಮೋಷನ್‌ ವೇಳೆ ರಶ್ಮಿಕಾ-ವಿಜಯ್‌ ರೊಮ್ಯಾನ್ಸ್‌ ವಿಡಿಯೋ ಪ್ರದರ್ಶನ: ನಟಿ ಕಂಗಾಲು

ನಾನಿ- ಮೃಣಾಲ್‌ ಠಾಕೂರ್‌ ಚಿತ್ರದ ಪ್ರಮೋಷನ್‌ ವೇಳೆ ರಶ್ಮಿಕಾ-ವಿಜಯ್‌ ರೊಮ್ಯಾನ್ಸ್‌ ವಿಡಿಯೋ ಪ್ರದರ್ಶನ ಮಾಡಲಾಗಿದೆ. ಆಗಿದ್ದೇನು?
 

Vijay Deverakonda Rashmika Mandanna vacation pics shown at Hi Nanna event suc
Author
First Published Dec 2, 2023, 5:06 PM IST

'ದಸರಾ' ಸಿನಿಮಾದ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ 'ನ್ಯಾಚುರಲ್ ಸ್ಟಾರ್' ನಾನಿ ಅವರು ಇದೀಗ  ತಂದೆ ಮತ್ತು ಮಗಳ ಬಾಂಧವ್ಯದ ಕಥೆ ಇರುವ  'ಹಾಯ್ ನಾನ್ನ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ಮಿಂಚಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಇದರ ಟೀಸರ್‌ ಸಕತ್‌ ಸದ್ದು ಮಾಡಿತ್ತು. ಹೈಪ್ ಸೃಷ್ಟಿಸಿರುವ ಮಾಸ್ ಮಸಾಲಾ ಸಿನಿಮಾಗಳ ಮಾದರಿಯಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ‘ಹಾಯ್ ನಾನ್ನ’ ಸಿನಿಮಾದ ಬಗ್ಗೆ ಚರ್ಚೆಯಾಗಿತ್ತು. ಇದಕ್ಕೆ ಕಾರಣ, ಸಿನಿಮಾದ ಟೀಸರ್‌ನಲ್ಲಿ  ಲಿಪ್‌ಲಾಕ್ ಸೀನ್‌ಗಳೇ ಸಖತ್ ಹೈಲೈಟ್ ಆಗಿದ್ದವು. ಸೀತಾ ರಾಮಂ' ಸಿನಿಮಾದ ಬಳಿಕ ಇದು ಮೃಣಾಲ್ ಠಾಕೂರ್‌ಗೆ ತೆಲುಗಿನಲ್ಲಿ ಇದು ಎರಡನೇ ಸಿನಿಮಾ ಇದಾಗಿದೆ. 

ಟೀಸರ್ ಆರಂಭದಲ್ಲಿ ತಂದೆ ಮಗಳ ಭಾವುಕ ದೃಶ್ಯಗಳಿವೆ. ನಂತರ ಮೃಣಾಲ್ ಎಂಟ್ರಿ ಬಳಿಕ ಟೀಸರ್‌ ರೊಮ್ಯಾಂಟಿಕ್ ಆ್ಯಂಗಲ್ ತೆಗೆದುಕೊಳ್ಳುತ್ತದೆ. ಈ ಟೀಸರ್‌ನಲ್ಲಿ ಮಗಳಿಗೆ ತಂದೆಯೂ ಹೌದು. ಸಿನಿಮಾದ ಟ್ರೈಲರ್​​ನಲ್ಲಿ ಬಿಟ್ಟುಕೊಟ್ಟಿರುವ ಕತೆಯ ಎಳೆಯ ಪ್ರಕಾರ, ನಾನಿಗೆ ಮಗಳೊಬ್ಬಳಿದ್ದಾಳೆ, ಆಕೆಗೆ ತನ್ನ ತಾಯಿ ಯಾರು ಯಾಕೆ ತಮ್ಮೊಂದಿಗಿಲ್ಲ ಎಂಬ ಕೊರಗು, ಆದರೆ ನಾನಿಗೆ ತನ್ನ ಮಗಳ ತಾಯಿ ಯಾರು ಯಾಕೆ ಆಕೆ ನಮ್ಮೊಂದಿಗಿಲ್ಲ ಎಂದು ಹೇಳುವ ಇಷ್ಟವಿಲ್ಲ. ನಾನಿ ಹಾಗೂ ಆತನ ಪತ್ನಿಯ ನಡುವೆ ಏನಾಯ್ತು? ಯಾಕೆ ಅವರಿಬ್ಬರೂ ದೂರಾದರು ಎಂಬುದೇ ಸಿನಿಮಾದ ಕತೆ.  ಪ್ರೇಯಸಿಗೆ ಪ್ರೇಮಿಯೂ ಆಗಿ ನಾನಿ ಕಾಣಿಸಿಕೊಂಡಿದ್ದಾರೆ. ನಾಯಕಿ-ನಾಯಕಿಯ ಲಿಪ್‌ಲಾಕ್‌ ಸರಣಿ ನೋಡಿ ಫ್ಯಾನ್ಸ್ ಉಫ್‌ ಎಂದಿದ್ದರು. ಆದರೆ ಇದೀಗ ವಿಶಾಖಪಟ್ಟಣದಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ ಮಾತ್ರ ಇನ್ನಷ್ಟು ಸದ್ದು ಮಾಡಿದೆ. 

ಪ್ರೀ ರಿಲಿಸ್‌ ಈವೆಂಟ್‌ನಲ್ಲಿ ಹಾಯ್ ನಾನ್ನ ಬಗ್ಗೆ ತಿಳಿಸುವ ಬದಲು,  ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ರಜೆಯ ಫೋಟೋಗಳನ್ನು  ಪ್ರದರ್ಶಿಸಲಾಯಿತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಬಾಲಿಯಲ್ಲಿನ ಥ್ರೋಬ್ಯಾಕ್ ಚಿತ್ರಗಳನ್ನು ನೋಡಿ ಫ್ಯಾನ್ಸ್‌ ಏನೋ ಶಾಕ್‌ ಆದರು. ಆದರೆ ಇದನ್ನು ನೋಡಿದ ನಟಿ ಮೃಣಾಲ್‌ ಕಿಡಿ ಕಾರಿದ್ದಾರೆ. ತಮ್ಮ ಚಿತ್ರದ ಪ್ರಮೋಷನ್‌ಗೆ ಇವರ ಫೋಟೋ ಬಳಸಿಕೊಂಡಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಅರೆ ಬಾಪ್ರೆ.. ಎಂಥವ್ರ ಜೊತೆ ಸಿಕ್ಕಿಬಿದ್ನಪ್ಪಾ... ಕೆಬಿಸಿ ಹಾಟ್‌ಸೀಟ್‌ ಮಹಿಳೆಯ ನೋಡಿ ಸುಸ್ತಾದ ಅಮಿತಾಭ್‌!
 
ಕಾರ್ಯಕ್ರಮದ ಸಂದರ್ಭದಲ್ಲಿ, ನಿರೂಪಕಿ ಸುಮಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಥ್ರೋಬ್ಯಾಕ್ ಚಿತ್ರಗಳನ್ನು ಪರದೆಯ ಮೇಲೆ ತೋರಿಸಿದ್ದರಿಂದ ಮೃಣಾಲ್‌ ಅಚ್ಚರಿಗೊಂಡು ನಂತರ ಆಕ್ರೊಶ ಹೊರಹಾಕಿದರು. ಆದರೆ ಸಮಾಧಾನ ತಂದುಕೊಂಡು, ಹತ್ತಿರದಲ್ಲಿದ್ದ ಛಾಯಾಗ್ರಾಹಕನನ್ನು ಕರೆದು,  ಸುಮಾ ಅವರು  ಬಾಲಿ ಚಿತ್ರಗಳನ್ನು ಸೆರೆಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದರು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೃಣಾಲ್‌ ಮತ್ತು ನಾನಿ ಅವರ ಫ್ಯಾನ್ಸ್‌ ಕೂಡ ಗರಂ ಆಗಿದ್ದು, ದಯವಿಟ್ಟು ಆಂಕರ್ ಸುಮಾ ಅವರನ್ನು ಆಹ್ವಾನಿಸುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ. 

ಸದ್ಯಕ್ಕೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಕ್ಲಿಪ್ ಬಗ್ಗೆ ನಾನಿ, ಮೃಣಾಲ್, ವಿಜಯ್ ಅಥವಾ ರಶ್ಮಿಕಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈವೆಂಟ್ ಆಯೋಜಕರು ಅಥವಾ ಚಿತ್ರದ ತಂಡವು ವಿಜಯ್ ಮತ್ತು ರಶ್ಮಿಕಾ ಅವರ ಚಿತ್ರಗಳನ್ನು ಬಳಸುವ ಮೊದಲು ಅವರ ಅನುಮತಿಯನ್ನು ಪಡೆದಿದೆಯೇ ಎಂಬುದು ಅನಿಶ್ಚಿತವಾಗಿ ಉಳಿದಿದೆ.ರಣಬೀರ್‌ ಕಪೂರ್‌ ಅಪ್ಪ ರಿಷಿ ಕಪೂರ್‌ಗಿತ್ತು ಹಲವು ಸಂಬಂಧ! 'ರಾತ್ರಿ ಸುಖ'ದ ಗುಟ್ಟು ಬಿಚ್ಚಿಟ್ಟ ಪತ್ನಿ ನೀತು ಸಿಂಗ್!
 

Follow Us:
Download App:
  • android
  • ios