ದೇವರಕೊಂಡ ಲೈಗರ್‌ ಫಸ್ಟ್ ಪೋಸ್ಟ್ ರಿವೀಲ್: ರಶ್ಮಿಕಾ ಆದ್ರು ಫುಲ್ ಥ್ರಿಲ್ !

ಟಾಲಿವುಡ್‌ ನಡ ವಿಜಯ್‌ ದೇವರಕೊಂಡ ಅವರ ಹೊಸ ಚಿತ್ರ ಲೈಗರ್‌ ಪೋಸ್ಟರ್ ಬಿಡುಗಡೆಯಾಗಿದೆ. ಸಂಪೂರ್ಣ ಬೆತ್ತಲೆಯಾಗಿ, ಗುಲಾಬಿ ಹೂವಿನ ಗುಚ್ಛ ಹಿಡಿದು ನಿಂತಿರುವ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅವರ ಆಪ್ತ ಸ್ನೇಹಿತೆ ರಶ್ಮಿಕಾ ಮಂದಣ್ಣ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟರ್ ನೋಡಿ ನಾನು ವಿಸ್ಮಿತಳಾಗಿದ್ದೇನೆ ಎಂದಿರುವ ರಶ್ಮಿಕಾ, ಲೈಗರ್‌ಅನ್ನು ಹೊಗಳಿದ್ದಾರೆ.
 

Vijay Deverakonda new look from Liger Rashmika Mandanna awestruck says he is inspiration san

ಬೆಂಗಳೂರು (ಜುಲೈ 2): ದಕ್ಷಿಣ ಭಾರತ ಚಿತ್ರರಂಗದ (South India Film ) ಪ್ರಸಿದ್ಧ ನಟ ವಿಜಯ್‌ ದೇವರಕೊಂಡ (Vijay Deverakonda) ಲೈಗರ್‌ (iger) ಚಿತ್ರದ ಮೂಲಕ ಬಾಲಿವುಡ್‌ಗೆ (Bollywood) ಕಾಲಿಡುತ್ತಿದ್ದಾರೆ. ಶನಿವಾರ ಈ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದು, ಅವರ ಬೋಲ್ಡ್‌ ಲುಕ್‌ ಟಾಕ್‌ ಆಫ್‌ ದಿ ಟೌನ್‌ ಆಗಿದೆ.  ಜಾನ್ವಿ ಕಪೂರ್ (Janhvi Kapoor), ಸಾರಾ ಅಲಿ ಖಾನ್‌ನಿಂದ (Sara Ali Khan) ಹಿಡಿದು ಸಮಂತಾವರೆಗೆ, ಇದು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ವಿಜಯ್‌ ದೇವರಕೊಂಡ ಅವರನ್ನು ಹೊಗಳಲು ಮುಂದಾಗಿದ್ದಾರೆ.

ಇದರ ನಡುವೆ ವಿಜಯ್‌ ದೇವರಕೊಂಡ ಬೋಲ್ಡ್‌ ಅವತಾರಕ್ಕೆ ಅವರ ಆಪ್ತ ಸ್ನೇಹಿತೆ ರಶ್ಮಿಕಾ ಮಂದಣ್ಣ(Rashmika Mandanna )  ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ವಿಜಯ್‌ ದೇವರಕೊಂಡ ಅವರ ಬೋಲ್ಡ್‌ ಲುಕ್‌ಗೆ (Bold Look) ಫುಲ್‌ ಥ್ರಿಲ್‌ ಆಗಿರುವ ಪುಷ್ಪಾ ಚಿತ್ರದ ನಾಯಕಿ, ಅವರನ್ನು ಆತ್ಮೀಯವಾಗಿ ಹೊಗಳಿದ್ದಾರೆ. ಇದು ಇಬ್ಬರ ನಡುವಿನ ಆತ್ಮೀಯ ಬಂಧವನ್ನು ಸೂಚಿಸಿದೆ.

ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಮ್ (Instagram) ಹ್ಯಾಂಡಲ್‌ನಲ್ಲಿ ಲೈಗರ್‌ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಹೊಸ ಪೋಸ್ಟರ್ ಅನ್ನು(Poster) ಮರುಹಂಚಿಕೊಂಡಿದ್ದಲ್ಲದೆ,  ಅವರನ್ನು "ಸ್ಫೂರ್ತಿ" ಎಂದು ಕರೆದಿದ್ದಾರೆ. "ನನಗೆ ಸ್ಫೂರ್ತಿ ಯಾರು ಎಂದು ಕೇಳಿದಾಗ.. ನಾನು ಎಂದುಗೂ ಯಾರ ಹೆಸರನ್ನು ಆಯ್ಕೆ ಮಾಡಿರಲಿಲ್ಲ. ಮತ್ತು ಇಂದು ನಾನು ವಿಜಯ್‌ ದೇವರಕೊಂಡ ಅವರನ್ನು ಆಯ್ಕೆ ಮಾಡಿದ್ದೇನೆ (ಬೆಂಕಿ ಇಮೋಜಿಗಳು) ಲೈಗರ್‌ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎನ್ನುವುದನ್ನು ಇಡೀ ದೇಶಕ್ಕೆ.. ಅಲ್ಲಲ್ಲ.. ಇಡೀ ಜಗತ್ತಿಗೆ ತೋರಿಸಿ.. ಆಲ್ ದಿ ಬೆಸ್ಟ್." ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಯಾವಾಗಲೂ ವಿಜಯ್ ದೇವರಕೊಂಡ ಅವರ ದೊಡ್ಡ ಸಪೋರ್ಟರ್‌ ಆಗಿದ್ದಾರೆ. ಅವರು ಯಾವಾಗಲೂ ವಿಜಯ್‌ ದೇವರಕೊಂಡ ಹಾಗೂ ಅವರ ಸಹೋದರ ಆನಂದ್‌ನ ಚಲನಚಿತ್ರಗಳಿಗೆ ಒಳ್ಳೆಯ ಮಾತುಗಳಿಂದ ಪ್ರಶಂಸೆ ಮಾಡುತ್ತಿದ್ದರು. ರಶ್ಮಿಕಾಗೂ ಮುನ್ನ ಸಮಂತಾ, ಅನುಷ್ಕಾ ಶೆಟ್ಟಿ, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ಜಾನ್ವಿ ಕಪೂರ್ ಮತ್ತು ಇತರರು ವಿಜಯ್ ಅವರ ಹೊಸ ಪೋಸ್ಟರ್‌ಗೆ ಪ್ರತಿಕ್ರಿಯಿಸಿದ್ದಲ್ಲದೆ, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಲೈಗರ್ ಮೂಲಕ ವಿಜಯ್‌ ದೇವರಕೊಂಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರವನ್ನು ಪೂರಿ ಜಗನ್ನಾಥ್ (Poori Jagannath) ನಿರ್ದೇಶನ ಮಾಡಲಿದ್ದು, ದಿಗ್ಗಜ ಬಾಕ್ಸರ್‌, ವಿವಾದಗಳಿಂದಲೇ ಸುದ್ದಿಯಾಗಿದ್ದ ಮೈಕ್‌ ಟೈಸನ್‌ (Mike Tyson) ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತದ್ದಾರೆ. ಸಂಪೂರ್ಣ ನಗ್ನವಾಗಿ ನಿಂತು, ಗುಲಾಬಿ ಗುಚ್ಛವನ್ನು ಹಿಡಿದುಕೊಂಡಿರುವ ಪೋಸ್ಟ್‌ ಇದಾಗಿದ್ದು, ಪೋಸ್ಟರ್‌ ಬಿಡುಗಡೆಯಾದ ಬೆನ್ನಲ್ಲಿಯೇ ಇಡೀ ಚಿತ್ರದ ಕ್ರೇಜ್‌ ಇನ್ನೊಂದು ಸ್ತರಕ್ಕೇರಿದೆ. ಆಗಸ್ಟ್‌ 25 ರಂದು ಲೈಗರ್‌ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಲೈಗರ್‌ಗಾಗಿ ಬೆತ್ತಲಾದ ನಟ ವಿಜಯ್ ದೇವರಕೊಂಡ; ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್ ಅವರ ಮುಂದಿನ ದ್ವಿಭಾಷಾ ಚಿತ್ರ ವರಿಸು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರ ಪೊಂಗಲ್‌ಗೆ ಬಿಡುಗಡೆಯಾಗಲಿದೆ.

ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ, ಗರ್ಭಿಣಿಯಾದ್ರೆ ತಪ್ಪೇನು? : ದಿಯಾ ಮಿರ್ಜಾ

ಇತ್ತೀಚೆಗೆ ಮೈಕ್‌ ಟೈಸನ್‌ ಅವರ ಜನ್ಮದಿನದಂದು ವಿಜಯ್‌ ದೇವರಕೊಂಡ ಅವರಿಗೆ ಟ್ವಿಟರ್‌ನಲ್ಲಿ ವಿಶ್‌ ಕೂಡ ಮಾಡಿದ್ದರು. ಲೈಗರ್‌ ಚಿತ್ರದಲ್ಲಿ ವಿಜಯ್‌ ದೇವರಕೊಂಡಗೆ ನಾಯಕಿಯಾಗಿ ಅನನ್ಯ ಪಾಂಡೆ ನಟಿಸುತ್ತಿದ್ದಾರೆ. ಈ ಮೊದಲು ಚಿತ್ರ ಜುಲೈ 10ರಂದು ಬಿಡುಗಡೆಯಾಗುವುದಾಗಿ ನಿಶ್ಚಯವಾಗಿತ್ತು.

Latest Videos
Follow Us:
Download App:
  • android
  • ios