ಸ್ಯಾಂಡಲ್​ವುಡ್​ಗೆ ಶಾಕ್​: 'ಲೀಡರ್'​ ಚಿತ್ರ ಖ್ಯಾತಿಯ ಯುವ ನಟ ಧನುಷ್​ ಇನ್ನಿಲ್ಲ!

ಕಳೆದ ವಾರ ಶೂಟಿಂಗ್​ನಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದ ಸ್ಯಾಂಡಲ್​ವುಡ್​ ನಟ ಧನುಷ್​ ಮೃತಪಟ್ಟಿದ್ದಾರೆ. 

 

Sandlewood actor Danush death

ಕೆಲ ವರ್ಷಗಳಿಂದ ಚಿತ್ರರಂಗಕ್ಕೆ ಶಾಕ್​ ಮೇಲೆ ಶಾಕ್​ (shock) ಎದುರಾಗುತ್ತಿದೆ. ಹಲವಾರು ಯುವ ನಟರು ಸಾವಿನ ಹಾದಿ ತುಳಿದಿದ್ದಾರೆ. ಹೃದಯಾಘಾತ, ಚಿತ್ರೀಕರಣದ ವೇಳೆ ಅನಾಹುತ, ವಾಹನ ಅಪಘಾತ... ಹೀಗೆ ಹಲವಾರು ಕಾರಣಗಳಿಂದ ಹಲವಾರು ನಟರು ಪ್ರಾಣ ಬಿಡುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಚಿತ್ರರಂಗದ ಶೂಟಿಂಗ್​ (shooting)ವೇಳೆ ಹಲವಾರು ಅಪಘಡಗಳು ಸಂಭವಿಸಿದ ನಟ, ನಟಿಯರು ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಅಥವಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಕೂಡ ಹೆಚ್ಚಾಗುತ್ತಲೇ ಸಾಗಿವೆ. 

ಅಂಥದ್ದೇ ಒಂದು ಆಘಾತಕಾರಿ ಸುದ್ದಿ ಈಗ ಮತ್ತೊಂದು ಸ್ಯಾಂಡಲ್​ವುಡ್​ಗೆ (Sandlewood) ಬರಸಿಡಿಲಿನಂತೆ ಬಂದೆರಗಿದೆ. ಯುವ ನಟ ಧನುಷ್  ಆಘಾತಕಾರಿ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ಇವರು ಅಲ್ಲಿನ ಹವಾಮಾನದಿಂದಾಗಿ  ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ದುರದೃಷ್ಟವಶಾತ್​ ಧನುಷ್​ (Dhanush) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ  ಫಲಿಸದೇ  ಮೃತಪಟ್ಟಿದ್ದಾರೆ (death)

ವಿಧಿ ಬರಹ ಎಂಥ ಘೋರ..ಸಾವಿನಲ್ಲೂ ಒಂದಾದ ಅವಳಿ ಅಣ್ತಮ್ಮ..!

ಪ್ಯಾರ್ ಕಾ ಗೋಲ್ ಗುಂಬಜ್, (Pyar ka gol gumbaj) ಕೊಟ್ಲಲ್ಲಪ್ಪೋ ಕೈ, (Kotrallppo kai) ಸಂಪಿಗೆ ಹಳ್ಳಿ (Sampige halli), ಲೀಡರ್ (Leader), ಸ್ನೇಹಿತ (Snehita) ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ  ನಟ ಧನುಷ್ ಅಭಿನಯಿಸಿದ್ದಾರೆ.  ಕಳೆದ ವಾದ ಲಡಾಕ್​ಗೆ  ಶೂಟಿಂಗ್​ಗೆ ಹೋಗಿದ್ದ ವೇಳೆ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ನ್ಯೂಮೋನಿಯಾದಿಂದ ಅವರು ಬಳಲುತ್ತಿದ್ದರು. ಲಡಾಕ್ (Ladakh) ವಾತಾವರಣದಿಂದ  ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಿನ್ನೆ  ರಾತ್ರಿ 10:45ಕ್ಕೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಧನುಷ್​ ಅವರು ಬಾಗಲಕೋಟೆ  ಜಿಲ್ಲೆಯ ಕೋಡಿಹಾಳ ಗ್ರಾಮದವರು. ಇವರ ಮೂಲ ಹೆಸರು   ಮುತ್ತುರಾಜ್. ಆದರೆ ಸಿನಿಮಾ ರಂಗಕ್ಕೆ ಪದಾರ್ಪಣೆ  ಮಾಡಿದ ಮೇಲೆ ಅವರು  ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ನಂತರ ಅವರು ಶಿವರಾಜ್ ಕುಮಾರ್ (Shivarajkumar) ನಟನೆಯ ಲೀಡರ್ ಸೇರಿದಂತೆ ಪ್ಯಾರ್ ಕಾ ಗೋಲ್​ಗುಂಬಜ್​,  ಸ್ನೇಹಿತ.. ಹೀಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಕೆಲವು ಚಿತ್ರಗಳಲ್ಲಿ ಸೈಡ್​  ಆ್ಯಕ್ಟರ್​ (Actor) ಆಗಿ ಕೆಲಸ ನಿರ್ವಹಿಸಿದ್ದಾರೆ.

ಲವ್​ ಜಿಹಾದ್​ಗೆ ನಟಿ ಬಲಿ? ನಟ ಶೀಜಾನ್​ ಖಾನ್​ಗೆ ಸಿಗಲಿಲ್ಲ ಬೇಲ್​, ಕೋರ್ಟ್​ ಹೇಳಿದ್ದೇನು?

ನಿನ್ನೆಯಷ್ಟೇ ಮಲೇಷ್ಯಾದಲ್ಲಿ  ಸಿನಿಮಾ ಶೂಟಿಂಗ್‌ ವೇಳೆ ಸಂಭವಿಸಿದ ಭಾರಿ ಅವಘಡದಲ್ಲಿ  ತಮಿಳು ನಟ ವಿಜಯ್ ಆಂಟನಿ (Vijay Antony) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಮಲೇಷ್ಯಾದಲ್ಲಿ ವಿಜಯ್ ಅವರು ‘ಪಿಚ್ಚೈಕಾರನ್ 2’ (ಭಿಕ್ಷುಕ) ಸಿನಿಮಾ ಶೂಟಿಂಗ್​ (Shooting)ನಲ್ಲಿದ್ದರು. ಈ ವೇಳೆ ಅನಾಹುತ ಸಂಭವಿಸಿದೆ. ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿ ವಿಜಯ್​ ಅವರಿಗೆ ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ  ವಿಜಯ್ (Vijay Antony) ಅವರ ಹಲ್ಲು ಮತ್ತು ದವಡೆಗೆ ತೀವ್ರತರಹದ ಪೆಟ್ಟು ಬಿದ್ದಿದ್ದು. ಮೂಳೆಗಳು ಮುರಿದಿವೆ.  ಪ್ರಜ್ಞಾಹೀನರಾಗಿರುವ ವಿಜಯ್​ ಅವರು ಇದುವರೆಗೂ ಚೇತರಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.  ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿರುವುದಾಗಿ ಚಿತ್ರತಂಡ ಹೇಳಿದೆ. ಈಗ ಅದರ ಬೆನ್ನಲ್ಲೇ ಧನುಷ್​ ಅವರ ಸುದ್ದಿ ಬಂದಿದೆ. 

ಅಗಲಿದ ಧನುಷ್ ಅವರ ಮೃತದೇಹವನ್ನು ಹುಟ್ಟೂರು ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿಯೇ ಅವರ ಅಂತ್ಯಸಂಸ್ಕಾರ ನಡೆದಿದೆ. ಅಗಲಿದ ನಟನಿಗೆ ಸಿನಿಮಾ ತಂಡ  ಕಂಬನಿ ಮಿಡಿದಿದೆ.

Latest Videos
Follow Us:
Download App:
  • android
  • ios