ನಯನತಾರಾಳನ್ನು ಮದುವೆಯಾಗಲು ಹಣ ಸೇವ್ ಮಾಡುತ್ತಿರುವ ನಿರ್ದೇಶಕ ವಿಘ್ನೇಶ್. ಅಭಿಮಾನಿಗಳ ಪ್ರಶ್ನೆಗೆ ಉತ್ತರ....

ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಅದರಲ್ಲೂ ನಿರ್ದೇಶಕ ವಿಘ್ನೇಶ್ ಜೊತೆ ಓಡಾಡುತ್ತಿರುವುದು, ಪ್ರೀತಿಸುತ್ತಿರುವ ವಿಚಾರ ತಿಳಿದ ಮೇಲಂತೂ ಎಲ್ಲಿ ನೋಡಿದರೂ ಅವರಿಬ್ಬರದ್ದೇ ಹವಾ! ಇಂತಹ ಸುಂದರವಾದ ಹೆಂಡತಿ ಮೇಂಟೈನ್ ಮಾಡಲು ಕಷ್ಟ ಆಗುವುದಿಲ್ವಾ? ಎಂದೂ ಕೆಲವೊಮ್ಮೆ ನೆಟ್ಟಿಗರು ಪ್ರಶ್ನೆ ಮಾಡಿದ್ದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಇನ್‌ಸ್ಟಾಗ್ರಾಂನಲ್ಲಿ ನಿರ್ದೇಶಕ ವಿಘ್ನೇಶ್ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿ ' ನೀವು ನಯನತಾರಾ ಅವರನ್ನು ಯಾವಾಗ ಮದ್ವೇ ಆಗ್ತೀರಾ, ಇದಕ್ಕಾಗಿ ನಾನು ಬಹಳ ಕಾತುರದಿಂದ ಕಾಯುತ್ತಿದ್ದೇನೆ,' ಎಂದು ಪ್ರಶ್ನೆ ಮಾಡಿದ್ದಾರೆ. ಮದುವೆ ಬಗ್ಗೆ ಪದೆ ಪದೇ ಪ್ರಶ್ನೆ ಬರುತ್ತಿರುವ ಕಾರಣ ವಿಘ್ನೇಶ್ ಹಾಸ್ಯಸ್ಪದವಾಗಿಯೇ ಉತ್ತರ ನೀಡಿದ್ದಾರೆ.

'ಮದುವೆ ಆಗುವುದಕ್ಕೆ ಮತ್ತು ಎಲ್ಲದಕ್ಕೂ ಬಹಳ ಖರ್ಚು ಆಗುತ್ತದೆ. ಅದಕ್ಕಾಗಿ ಹಣ ಸಂಗ್ರಹಿಸಿ ಇಡ್ತಿದ್ದೇವೆ. ಈ ಕೊರೋನಾ ಹೋದ್ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಡೋಣ ಅಂದುಕೊಂಡಿದ್ದೀವಿ,' ಎಂದು ವಿಘ್ನೇಶ್ ಉತ್ತರ ನೀಡಿದ್ದಾರೆ. ನಟನೆಗಾಗಿ ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ, ವಿಘ್ನೇಶ್ ನಿರ್ದೆಶನ ಹೊರತು ಪಡಿಸಿ ಆನೇಕ ಇತರೆ ವ್ಯವಹಾರಗಳನ್ನು ಮಾಡುತ್ತಾರೆ. ಇಬ್ಬರೂ ಕೋಟಿಯಲ್ಲಿ ದುಡಿಮೆ ಮಾಡಿದರೂ ಹಣ ಬೇಡಕು ಎನ್ನುತ್ತೀರಲ್ಲ ಯಾಕೆ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

ಒಂದು ಸಿನಿಮಾಗೆ 3 ಕೋಟಿ ಪಡೆಯುವ ನಟಿ ನಯನತಾರಾ ಆಸ್ತಿ ಎಷ್ಟಿದೆ ಗೊತ್ತಾ? 

'ನಾನುಮ್ ರೌಡಿ ಧಾನ್' ಸಿನಿಮಾ ಚಿತ್ರೀಕರಣದ ವೇಳೆ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿ ಬಿದ್ದರು. ಅಲ್ಲಿಂದ ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಸುತ್ತಿದ್ದಾರೆ. ಉಂಗುರ ಬದಲಿಸಿಕೊಂಡು ಸರಳವಾಗಿ ನಿಶ್ವಿತಾರ್ಥವನ್ನು ಕೂಡ ಮಾಡಿಕೊಂಡಿದ್ದಾರೆ.