ಶೂಟಿಂಗ್ ರೇಂಜ್‌ಗೆ ವಿದ್ಯಾಬಾಲನ್ ಹೆಸರಿಟ್ಟು ಭಾರತೀಯ ಸೇನೆ ಗೌರವ!
* ವಿದ್ಯಾ ಬಾಲನ್ ಭಾರತೀಯ ಸೇನೆ ಗೌರವ
* ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಫೈರಿಂಗ್ ರೇಂಜ್‌ಗೆ (ಗುಂಡಿನ ದಾಳಿ ತರಬೇತಿ ಸ್ಥಳ) ವಿದ್ಯಾಬಾಲನ್ ಹೆಸರು
* ಚಳಿಗಾಲದ ಉತ್ಸವದ ಹಿನ್ನೆಲೆಯಲ್ಲಿ ಗುಲ್ಮಾರ್ಗ್‌ಗೆ ಭೇಟಿ ನೀಡಿದ್ದ ವಿದ್ಯಾ ಬಾಲನ್
ಮುಂಬೈ(ಜು.07): ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಸೇನೆ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಫೈರಿಂಗ್ ರೇಂಜ್‌ಗೆ (ಗುಂಡಿನ ದಾಳಿ ತರಬೇತಿ ಸ್ಥಳ) ವಿದ್ಯಾಬಾಲನ್ ಹೆಸರಿಟ್ಟಿದೆ.
ಈ ವರ್ಷದ ಆರಂಭದಲ್ಲಿ ವಿದ್ಯಾ ಬಾಲನ್ ಮತ್ತು ಪತಿ ಸಿದ್ಧಾರ್ಥ್ ರಾಯ್ ಕಪೂರ್ ಸೇನೆ ಆಯೋಜಿಸಿದ್ದ ಚಳಿಗಾಲದ ಉತ್ಸವದ ಹಿನ್ನೆಲೆಯಲ್ಲಿ ಗುಲ್ಮಾರ್ಗ್‌ಗೆ ಭೇಟಿ ನೀಡಿದ್ದರು. ವಿದ್ಯಾ ಬಾಲನ್‌ಗೆ ಸೇನೆ ಈ ಅತ್ಯುನ್ನತ ಗೌರವ ನೀಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶ್ಲಾಘಿಸಿ ಪ್ರಶಂಸಿಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಇದು ಬಹಳ ಹೆಮ್ಮೆಯ ವಿಚಾರ ಎಂದು ಶ್ಲಾಘಿಸುತ್ತಿದ್ದಾರೆ.
ಆಸ್ಕರ್ ಅಕಾಡೆಮಿ ಸದಸ್ಯರಾಗಿ ವಿದ್ಯಾ ಬಾಲನ್, ಏಕ್ತಾ ಕಪೂರ್‌ಗೆ ಆಹ್ವಾನ
ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಆಯೋಜಿಸಿದ್ದ 'ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್'ನಲ್ಲಿ ವಿದ್ಯಾ ಬಾಲನ್, ಪತಿ ಸಿದ್ದಾರ್ಥ್ ರಾಯ್ ಕಪೂರ್ ಜೊತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆಸ್ಕರ್ ಪ್ರಶಸ್ತಿಗಳ ಹಿಂದಿರುವ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ಗೆ ಸೇರಲು ಇತ್ತೀಚೆಗಷ್ಟೇ ವಿದ್ಯಾ ಬಾಲನ್‌ಗೆ ಆಹ್ವಾನ ಬಂದಿತ್ತು. ಇದೀಗ ಮಿಲಿಟರಿ ಫೈರಿಂಗ್ ರೇಂಜ್‌ಗೆ 'ವಿದ್ಯಾ ಬಾಲನ್ ಫೈರಿಂಗ್ ರೇಂಜ್' ಎಂದು ನಾಮಕರಣ ಮಾಡಿರುವುದು ಅವರ ಮುಡಿಗೆ ಹೆಮ್ಮೆಯ ಗರಿ ಸೇರಿಕೊಂಡಂತಾಗಿದೆ.