Varisu; ದಳಪತಿ ವಿಜಯ್ ಜೊತೆ ಸಖತ್ತಾಗಿ ಕುಣಿದ ಸೈಡ್ ಡಾನ್ಸರ್; ರಶ್ಮಿಕಾಗಿಂತ ಸೂಪರ್ ಎಂದ ಫ್ಯಾನ್ಸ್
ವಾರಿಸು ಸಿನಿಮಾದ ರಂಜಿತಾಮಿ ಹಾಡಿನಲ್ಲಿ ವಿಜಯ್ ಜೊತೆ ಕುಣಿದ ಸೈಡ್ ಡಾನ್ಸರ್ ವಿಡಿಯೋ ವೈರಲ್ ಆಗಿದೆ. ಹಾಡಿನಲ್ಲಿ ರಶ್ಮಿಕಾಗಿಂತ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ವಾರಿಸು ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಕೂಡ ಆಯಿತು. ವಾರಿಸು ಭಾರಿ ನೋರಿಕ್ಷೆಯೊಂದಿಗೆ ತೆರೆಗೆ ಬಂದ ಸಿನಿಮಾ. ರಶ್ಮಿಕಾ ಮೊದಲ ಬಾರಿಗೆ ದಳಪತಿ ವಿಜಯ್ ಜೊತೆ ನಟಿಸಿದ್ದ ಸಿನಿಮಾ. ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಹೆಚ್ಚು ಮಹತ್ವಲಿಲ್ಲ. ಆದರೆ ವಿಜಯ್ ಜೊತೆ ಎರಡು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ವಾರಿಸು ಸಿನಿಮಾದಲ್ಲಿ ತನ್ನ ಪಾತ್ರ ಏನು ಇಲ್ಲ ಎಂದು ಒಪ್ಪಿಕೊಂಡಿದ್ದರು. ವಿಜಯ್‌ಗಾಗಿ ಸಿನಿಮಾ ಮಾಡಿರುವುದಾಗಿಯೂ ಹೇಳಿದ್ದರು.
ವಾರಿಸು ಸಿನಿಮಾದಿಂದ ಮೊದಲು ರಂಜಿತಾಮೆ ಲಿರಿಕಲ್ ಹಾಡನ್ನು ರಿಲೀಸ್ ಮಾಡಲಾಯಿತು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಯಿತು. ಬಳಿಕ ವಿಡಿಯೋ ಸಾಂಗ್ ರಿಲೀಸ್ ಮಾಡಲಾಯಿತು. ವಿಡಿಯೋ ಹಾಡು ಬಿಡುಗಡೆ ಮಾಡುತ್ತಿದ್ದಂತೆ ನಾಯಕಿ ರಶ್ಮಿಕಾಗಿಂತ ಪಕ್ಕದಲ್ಲಿ ಡಾನ್ಸ್ ಮಾಡಿದ ಹುಡುಗಿಯರು ಹೆಚ್ಚು ವೈರಲ್ ಆಗಿದ್ದಾರೆ. ದಳಪತಿ ವಿಜಯ್ ಪಕ್ಕದಲ್ಲಿ ಕುಣಿದ ಸೈಡ್ ಡಾನ್ಸರ್ ಈಗ ಅಭಿಮಾನಿಗಳ ಗಮನ ಸಳೆಯುತ್ತಿದ್ದಾರೆ. ಅಷ್ಟೆಯಲ್ಲ ಅವರನ್ನು ಹೊಗಳಿ ಮೀಮ್ ಗಳನ್ನು ಮಾಡಲಾಗುತ್ತಿದೆ. ವಿಜಯ್ ಪಕ್ಕದಲ್ಲಿ ಹೆಜ್ಜೆ ಹಾಕಿದ ಸೈಡ್ ಡಾನ್ಸರ್ ಹೆಸರು ಅಂಬಿಕಾ ಖೋಲಿ. ಹಿಂದಿ ಮೂಲದ ಡಾನ್ಸರ್.
ಮೀಮ್ ಗಳನ್ನು ನೋಡಿದ ಅಂಬಿಕಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿನಲ್ಲಿ ತನ್ನನ್ನು ಗುರುತಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಂಬಿಕಾ ಪ್ರತಿಕ್ರಿಯೆ ನೀಡುತ್ತಿದ್ದಂತೆ ಮತ್ತಷ್ಟು ವೈರಲ್ ಆಗಿದೆ. ಎಲ್ಲರೂ ಅಂಬಿಕಾರನ್ನು ಹೊಗಳುತ್ತಿದ್ದಾರೆ. ಅಂಬಿಕಾ ಡಾನ್ಸ್ ವಿಡಿಯೋ ಮತ್ತು ಫೋಟೋ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
'ವಾರಿಸು' ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮಹತ್ವವಿಲ್ಲ; ದಳಪತಿ ಸಿನಿಮಾಗೆ ಸಹಿ ಮಾಡಿದ ಕಾರಣ ಬಿಚ್ಚಿಟ್ಟ ರಶ್ಮಿಕಾ
ಡಾನ್ಸರ್ ಅಂಬಿಕಾ ಖೋಲಿ ಹಾಡಿನಲ್ಲಿ ಕೆಂಪು ಬಣ್ಣದ ಸೀರೆ ಧರಿಸಿದ್ದಾರೆ. ಕೆಂಪು ಬಣ್ಣದ ಸೀರೆ ಧರಿಸಿರುನ ಯುವತಿ ಯಾರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಎಂತ ಎನರ್ಜಿ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ಕೆಂಪು ಬಣ್ಣದ ಸೀರೆ ಧರಿಸಿದ್ದ ಯುವತಿಯೇ ನಾಯಕಿ ಅಂತ ಮಾಡಿದ್ದೆ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ 'ಹೆಚ್ ಡಿ ಪ್ರಿಂಟ್ ನೋಡಿದ ಮೇಲೆ ಗೊತ್ತಾಯಿತು ರಶ್ಮಿಕಾ ಅಲ್ಲ ಎಂದು' ರಶ್ಮಿಕಾ ಕಾಲೆಳೆದಿದ್ದಾರೆ.
ವಾರಿಸು ಸಿನಿಮಾ ಜನವರಿ 11ರಂದು ರಿಲೀಸ್ ಆಗಿದೆ. ಸಂಕ್ರಾಂತಿ ಸಮಯದಲ್ಲಿ ಬಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರಿಸು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 300ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ನಾನು ಕರ್ನಾಟಕದವಳು, ಹೈದರಾಬಾದ್‌ನಲ್ಲಿದ್ದೀನಿ ಮುಂದೆ ಕೇರಳಾಗೆ ಹೋಗಬೇಕು: ರಶ್ಮಿಕಾ ಮಂದಣ್ಣ
ವಾರಿಸು ಬಗ್ಗೆ ರಶ್ಮಿಕಾ ಮಾತು
ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾಗೆ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ಮಹತ್ವವಿಲ್ಲ ಆದರೂ ಯಾಕೆ ಮಾಡಿದ್ದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ರಶ್ಮಿಕಾ, 'ಈ ಚಿತ್ರ ಆಯ್ಕೆ ಮಾಡುವುದು ನನ್ನ ಆಯ್ಕೆ. ಈ ಸಿನಿಮಾದಲ್ಲಿ ಎರಡು ಹಾಡುಗಳಿವೆ ಅಷ್ಟೆ. ಇದು ನನಗೆ ಗೊತ್ತಿತ್ತು. ಇದು ನಿಜಕ್ಕೂ ಜೋಕ್ ಆನಿಸುತ್ತದೆ. ಎರಡು ಹಾಡುಗಳು ಬಿಟ್ಟು ಬೇರೇನು ಮಾಡಬೇಕಾಲಿಲ್ಲ ಎಂದು ನಾನು ವಿಜಯ್ ಸರ್‌ಗೆ ಹೇಳಿದ್ದೆ. ಇದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ನಾನು ವಿಜಯ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದರಿಂದ ಈ ಚಿತ್ರದ ಭಾಗವಾದೆ. ನನಗೆ ವಿಜಯ್ ಸರ್ ತುಂಬಾ ಇಷ್ಟ. ನನಗೆ ನಟಿಯಾಗಿ ನಾನು ಶೂಟಿಂಗ್ ಹೋಗಿ ಅವರಿಂದ ಸಣ್ಣ ವಿಷಯಗಳನ್ನು ಕಲಿಯುವುದು ತುಂಬಾ ಮುಖ್ಯ' ಎಂದು ಹೇಳಿದ್ದರು. ಇದೀಗ ಹಾಡಿನ ವಿಚಾರದಲ್ಲೂ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ.