Asianet Suvarna News Asianet Suvarna News

ಏರ್ಪೋರ್ಟ್‌ನಲ್ಲಿ ಕದ್ದ ವಸ್ತುವನ್ನು 3 ರಾಜ್ಯಕ್ಕೆ ಸಾಗಿಸಿದ್ರು; ಸಾರಾ ಕದ್ದ ವಿಚಾರ ಬಹಿರಂಗ ಪಡಿಸಿದ ವಿಕ್ಕಿ ಕೌಶಲ್

ಏರ್ಪೋರ್ಟ್‌ನಲ್ಲಿ ಕದ್ದ ವಸ್ತುವನ್ನು 3 ರಾಜ್ಯಕ್ಕೆ ಸಾಗಿಸಿದ್ರು ಎಂದು ವಿಕ್ಕಿ ಕೌಶಲ್ ನಟಿ ಸಾರಾ ಅಲಿ ಖಾನ್ ಕದ್ದ ವಿಚಾರ ಬಹಿರಂಗ ಪಡಿಸಿದ್ದಾರೆ. 

Vicky Kaushal reveals Sara Ali Khan stole a pillow from airport lounge sgk
Author
First Published Jun 9, 2023, 12:04 PM IST

ಬಾಲಿವುಡ್ ಖ್ಯಾತ ನಟ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಸದ್ಯ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗಾಗಿ ಸಾರಾ ಮತ್ತು ವಿಕ್ಕಿ ಕೌಶಲ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಪ್ರವಾಸ ಮಾಡಿ ಇಬ್ಬರೂ ಪ್ರಚಾರ ಮಾಡಿದ್ದಾರೆ.  ಅಹಮದಾಬಾದ್‌ನಿಂದ ಇಂದೋರ್‌ಗೆ ಸೇರಿದಂತೆ ಅನೇಕ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಸಂವಹನ ನಡೆಸಿ ಉತ್ತಮ ಸಮಯ ಕಳೆಯುತ್ತಿದ್ದಾರೆ. ಸಿಕ್ಕಾಪಟ್ಟೆ ಪ್ರವಾಸ ಮಾಡುತ್ತಿರುವ ಸಾರಾ ಮತ್ತು ವಿಕ್ಕಿ ಇಬ್ಬರೂ ಮಾಧ್ಯಮ ಜೊತೆಯೂ ಮಾತನಾಡುತ್ತಿದ್ದಾರೆ. ಪ್ರಚಾರ ವೇಳೆ ವಿಕ್ಕಿ, ಸಾರಾ ಅಲಿ ಖಾನ್ ಬಗ್ಗೆ ಆಸಕ್ತಿರ ವಿಚಾರ ಬಹಿರಂಗ ಪಡಿಸಿದ್ದಾರೆ.  

ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ವೇಳೆ ಸಾರಾ ಅಲಿ ಖಾನ್ ಕದ್ದ ವಸ್ತುವಿನ ಬಗ್ಗೆ ವಿಕ್ಕಿ ಕೌಶಲ್ ಬಿಚ್ಚಿಟ್ಟಿದ್ದಾರೆ. ಎಡಬಿಡದೆ ಪ್ರಚಾರ ಮಾಡುತ್ತಿರುವ ಸಿನಿಮಾತಂಡ ವಿಮಾನ ನಿಲ್ದಾಣದ ಲಾಂಚ್‌ನಲ್ಲಿ ಸಾರಾ ಅಲಿ ಖಾನ್ ಮಲಗಿದ್ದರು. ಆಗ ಅಲ್ಲಿದ್ದ ದಿಂಬನ್ನು ಕದ್ದು ತೆಗೆದುಕೊಂಡು ಹೋಗಿದ್ದಾರೆ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ಸಂದರ್ಶನದಲ್ಲಿ ವಿಕ್ಕಿ ಮತ್ತು ಸಾರಾ ಅವರಿಗೆ ಹೋಟೆಲ್‌ನಿಂದ ಯಾವುದಾರೂ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದೀರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ವಿಕ್ಕಿ ಕೌಶಲ್ ಉತ್ತರ ನೀಡಿ ಸಾರಾ ಅಲಿ ಖಾನ್ ಬಿಂದು ಕದ್ದ ವಿಚಾರ ಬಿಚ್ಚಿಟ್ಟರು. 

ಹಿಂದು ದೇಗುಲದಲ್ಲಿ ನಟಿ ಸಾರಾ ಅಲಿ ಖಾನ್; ಶಕ್ತಿಗಳ ಮೇಲೆ ನಂಬಿಕೆ ಇದೆ, ಜನರ ಕಾಮೆಂಟ್‌ಗಳಿಗೆ ಡೋಂಟ್ ಕೇರ್!

 ಸಾರಾ ಅಲಿ ಖಾನ್ ಪ್ರತಿಕ್ರಿಯೆ ನೀಡಿ,  'ನಾವು ಒಂದು ತಿಂಗಳ ಪ್ರವಾಸದಲ್ಲಿದ್ದೆವು ಮತ್ತು ನಾನು ಶಾಂಪೂ, ಕಂಡಿಷನರ್, ಲೋಷನ್‌ಗಳು ಮತ್ತು ಟೂತ್‌ಪೇಸ್ಟ್ ಎಲ್ಲವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೆ. ಹಾಗೆ ಮಾಡದಬಾರದು ಎಂದು ನಾನು ಕಲಿತಿದ್ದೀನಿ' ಎಂದು ಹೇಳಿದರ. ಆಗ ವಿಕ್ಕಿ ಕೌಶಲ್ ಮಧ್ಯ ಪ್ರವೇಶಿಸಿ ಪ್ರಚಾರದ ವೇಳೆ ಅವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸುವಾಗ ನಿದ್ದೆಗೆಡಿಸಿದರು. ಸಾರಾ ವಿಮಾನ ನಿಲ್ದಾಣದ ಲಾಂಚ್‌ನಿಂದ 'ದಿಂಬನ್ನು ತೆಗೆದುಕೊಂಡು ಹೋಗಿದ್ದರು' ಎಂದು ಹೇಳಿದರು. 

Sara Ali Khan: ಬಾಯ್​ಫ್ರೆಂಡ್​ ಶುಭ್​ಮನ್​ ಗಿಲ್​ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ

ವಿಕ್ಕಿ ಹೇಳಿದರು, 'ವಿಮಾನ ನಿಲ್ದಾಣದಿಂದ ದಿಂಬನ್ನು ಯಾರು ತೆಗೆದುಕೊಳ್ಳುತ್ತಾರೆ? ಸಾರಾ ಅಲ್ಲಿ 10 ನಿಮಿಷಗಳ ಕಾಲ ಮಲಗಿದ್ದರು. ಒಂದು ದಿಂಬನ್ನು ಇಷ್ಟಪಟ್ಟ ಕಾರಣ ಅದನ್ನು ಕದ್ದು ಮುಂದಿನ ಮೂರು ರಾಜ್ಯಗಳಿಗೆ ಪಯಣ ಬೆಳೆಸಿದರು' ಎಂದು ಹೇಳಿದ್ದಾರೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ರಿಲೀಸ್ ಆಗಿ ಮೊದಲ ವಾರಕ್ಕೆ 37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸದ್ಯ ಸಿನಿಮಾತಂಡ ಸಕ್ಸಸ್‌ನ ಖುಷಿಯಲ್ಲಿದೆ. 

Follow Us:
Download App:
  • android
  • ios