Asianet Suvarna News Asianet Suvarna News

ಮದ್ವೆಗೂ ಮುನ್ನ ಕತ್ರಿನಾ ಬೆದರಿಕೆ ಹಾಕಿದ್ಲು, ಆ ಭಯದಿಂದ ಶೂಟಿಂಗ್​ ನಿಲ್ಲಿಸಿದೆ ಎಂದ ಪತಿ ವಿಕ್ಕಿ ಕೌಶಲ್​!

ಮದ್ವೆಗೂ ಮುನ್ನ ಕತ್ರಿನಾ ಬೆದರಿಕೆ ಹಾಕಿದ್ಲು, ಆ ಭಯದಿಂದ ಶೂಟಿಂಗ್​ ನಿಲ್ಲಿಸಿದೆ ಎಂದ ಪತಿ ವಿಕ್ಕಿ ಕೌಶಲ್​ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
 

Vicky Kaushal remembers being threatened by Katrina Kaif before marriage suc
Author
First Published Nov 24, 2023, 5:38 PM IST

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ 'ಟೈಗರ್ 3' ಸಕತ್​ ಸದ್ದು ಮಾಡುತ್ತಿರುವ ಖುಷಿಯಲ್ಲಿದೆ,  ಕತ್ರಿನಾ ಪತಿ  ವಿಕ್ಕಿ ಕೌಶಲ್ ತಮ್ಮ ಮುಂಬರುವ 'ಸಾಮ್ ಬಹಾದೂರ್' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. 2021ರ ಡಿಸೆಂಬರ್​ 9ರಂದು ಮದುವೆಯಾಗಿದ್ದ ಈ ಜೋಡಿ ಇದೀಗ ಮೂರು ವರ್ಷದ ಖುಷಿ ದಾಂಪತ್ಯ ಜೀವನ ನಡೆಸುತ್ತಿದೆ. ಇಬ್ಬರೂ ಸಿನಿ ತಾರೆಯರು. ಕೇಳಬೇಕೆ? ಜೊತೆಯಲ್ಲಿ ಇರುವುದೇ ಕಮ್ಮಿ.  ಶೂಟಿಂಗ್​ ಎಂದು ಆಗಾಗ್ಗೆ ಹೊರಗಡೆ ಹೋಗುತ್ತಲೇ ಇರಬೇಕು.  ಇದರಿಂದಾಗಿ ಎಷ್ಟೋ ಸಮಯ ದಂಪತಿ ಒಟ್ಟಿಗೆ ಕಳೆಯಲು ಸಾಧ್ಯವೇ ಆಗುವುದಿಲ್ಲ. ಇದೇ ರೀತಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಅವರ ವಿಷಯದಲ್ಲಿಯೂ ಆಗಿದೆ, ಅದೂ ಮದುವೆಯ ಸಂದರ್ಭದಲ್ಲಿ ಶೂಟಿಂಗ್​ನಿಂದಾಗಿ ಅಲ್ಲೋಲ ಕಲ್ಲೋಲವಾಗಿತ್ತಂತೆ. ಆ ಇಂಟರೆಸ್ಟಿಂಗ್​ ವಿಷಯವನ್ನು ವಿಕ್ಕಿ ಈಗ ಶೇರ್​ ಮಾಡಿಕೊಂಡಿದ್ದಾರೆ. 

 ಸದಾ ಬಿಜಿ ಇರುವ ಈ ಜೋಡಿ ಲೈಫ್ ಎಂಜಾಯ್​ ಮಾಡುತ್ತಿದ್ದಾರೆ. ಇದೀಗ ಮದುವೆಗೂ ಮುನ್ನ ಕತ್ರಿನಾ ತಮಗೆ ಬೆದರಿಕೆ ಹಾಕಿದ ಇಂಟರೆಸ್ಟಿಂಗ್​ ವಿಷಯವನ್ನು ವಿಕ್ಕಿ ಕೌಶಲ್​ ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇವರ ಮದ್ವೆ ಸಂದರ್ಭದಲ್ಲಿ ವಿಕ್ಕಿ ಅವರ ಜರಾ ಹಟ್ಕೆ, ಜರಾ ಬಚ್ಕೆ (Zara Hatke Zara Bachke) ಶೂಟಿಂಗ್​ನಲ್ಲಿದ್ದರು. ಮದುವೆಯ ಸಂದರ್ಭದಲ್ಲಿ   ಅರ್ಧ ಸಿನಿಮಾ ಶೂಟಿಂಗ್ ಮಾತ್ರ ಆಗಿತ್ತು. ಮದುವೆಗೆಂದು ವಿಕ್ಕಿ ಅವರು ಎರಡು ದಿನ ಮಾತ್ರ ರಜೆ ತೆಗೆದುಕೊಂಡಿದ್ದರಂತೆ! ಮದುವೆಗೆ ಎರಡು ದಿನ ರಜೆ ಸಾಕಾಗತ್ತಾ? ಅದೂ ಹೇಳಿ ಕೇಳಿ ಸೆಲೆಬ್ರಿಟಿಗಳ ಮದುವೆ. ಮದುವೆ ಸಂಭ್ರಮವೇ ತಿಂಗಳಾನುಗಟ್ಟಲೆ ಇರುವಾಗ ಎರಡು ದಿನ ರಜೆ ಎಲ್ಲಿ ಸಾಕಾಗುತ್ತದೆ? ಈ ವಿಷಯ ಕೇಳುತ್ತಲೇ ಕತ್ರಿನಾ ಬೆದರಿಕೆ ಹಾಕಿದ್ದಳು ಎಂದು ವಿಕ್ಕಿ ನೆನಪಿಸಿಕೊಂಡಿದ್ದಾರೆ.

ಗಂಡ ಹೊರಗಿದ್ದಾನೆ, ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ! ಕತ್ರಿನಾ ಕೈಫ್​ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...

ಅವರು ಹೇಳಿದ್ದೇನೆಂದರೆ, 'ನಾನು ಮದುವೆಗೆ ರಜೆ ತೆಗೆದುಕೊಂಡಿದ್ದೆ. ಮದುವೆ ಕಳೆದು ಎರಡು ದಿನದಲ್ಲಿ ನಾನು ಮತ್ತೆ ಸೆಟ್​ನಲ್ಲಿರಬೇಕಾಗಿತ್ತು. ಶೂಟಿಂಗ್​ ಅರ್ಧಕ್ಕೆ ನಿಂತಿದ್ದರಿಂದ ನಿರ್ದೇಶಕರು  ನನ್ನನ್ನು  ಕರೆಯುತ್ತಿದ್ದ ಬಗ್ಗೆ ಕತ್ರಿನಾಗೆ ಮೊದಲೇ ತಿಳಿಸಿದ್ದೆ. ಇದರಿಂದ ಆಕೆಗೆ ವಿಪರೀತ ಸಿಟ್ಟು ಬಂತು.  ನನಗೆ ಅಕ್ಷರಶಃ ಬೆದರಿಕೆ ಹಾಕಿದ್ದಳು. ಎರಡು ದಿನದಲ್ಲಿ ಸೆಟ್​ಗೆ ಹೋಗಬೇಕೆಂದರೆ ನೀನು ಮದುವೆಯಾಗಲೇ ಬೇಡ ಎಂದಳು. ಅವಳ ಕೋಪ ನೋಡಿ ನನಗೂ ಭಯ ಆಯಿತು' ಎಂದು ವಿಕ್ಕಿ ನೆನಪಿಸಿಕೊಂಡಿದ್ದಾರೆ. ಕತ್ರಿನಾ ಇಷ್ಟು ಹೇಳಿದ ಕಾರಣ, ಹಾಗೂ ಹೀಗೂ ಎರಡು ದಿನ ಇದ್ದ ರಜೆಯನ್ನು ಐದು ದಿನ ವಿಸ್ತರಣೆ ಮಾಡಿ ಆರನೆಯ ದಿನಕ್ಕೆ ಶೂಟಿಂಗ್​ಗೆ ಹೋದ್ರಂತೆ ವಿಕ್ಕಿ!  

ಇದೇ ಸಂದರ್ಭದಲ್ಲಿ ಕತ್ರಿನಾ ಕೈಫ್​ ಅವರು ತಮ್ಮ ಅಭಿಮಾನಿಗಳ ಜೊತೆ ಆಸ್ಕ್​ ಎನಿಥಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಭಿಮಾನಿಗಳು ಏನಾದರೂ ಪ್ರಶ್ನೆ ಕೇಳಬಹುದು ಎಂದು ಅವರು ಆಫರ್​ ಕೊಟ್ಟಿದ್ದಾರೆ. ಕಳೆದ ಅನೇಕ ತಿಂಗಳುಗಳಿಂದ ನಟ ಶಾರುಖ್​ ಖಾನ್​ ಅವರೂ ಇಂಥದ್ದೊಂದು ಸೆಷನ್​ ನಡೆಸುತ್ತಿದ್ದು, ಇದೀಗ ಕತ್ರಿನಾ ಕೂಡ ಶುರು ಮಾಡಿದ್ದಾರೆ. ಇಷ್ಟು ಆಫರ್​ ಕೊಟ್ರೆ ಅಭಿಮಾನಿಗಳು ಕೇಳಬೇಕೆ? ಒಂದಕ್ಕಿಂತ ಒಂದು ಪ್ರಶ್ನೆ ಕೇಳುತ್ತಿದ್ದಾರೆ. ಕೆಲವು ತಮಾಷೆಯ ಪ್ರಶ್ನೆಗಳೂ ಇದ್ದು, ನಟಿ ಅದಕ್ಕೆ ತಮಾಷೆಯ ಉತ್ತರವನ್ನೇ ನೀಡುತ್ತಿದ್ದಾರೆ.  ಕತ್ರಿನಾ ಅವರು, 'ನಾವಿಬ್ಬರೂ ರಾತ್ರಿಯಲ್ಲಿ ಎರಡು ಹಡಗುಗಳಂತೆ ಆಗಿದ್ದೇವೆ. ನಾನು ಟೈಗರ್ 3 ಚಿತ್ರದ ಬಿಡುಗಡೆ ಬಳಿಕ ಸಂದರ್ಶನಗಳನ್ನು ಮುಗಿಸಿ ಮನೆಗೆ ವಾಪಸ್ಸಾದರೆ, ನನ್ನ ಗಂಡ ವಿಕ್ಕಿ ಬಿಡುಗಡೆಗೆ  ಸಿದ್ಧವಾಗಿರುವ ತಮ್ಮ ಮುಂಬರುವ ಸಾಮ್ ಬಹಾದೂರ್ ಚಿತ್ರದ ಪ್ರಮೋಶನ್‌ಗೆಂದು ಕೋಲ್ಕತಾಗೆ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ನಾವು ಇಬ್ಬರೂ ರಾತ್ರಿ ಒಟ್ಟಿಗೇ ಮನೆಯಲ್ಲಿ ಇರುವುದೇ ಅಪರೂಪ ಎಂಬಂತಾಗಿದೆ' ಎಂದಿದ್ದರು. ಇದಕ್ಕೆ ಫ್ಯಾನ್ಸ್​ ಸಕತ್​ ತಮಾಷೆಯ ಉತ್ತರ ನೀಡಿ, ಹೀಗಾದ್ರೆ ಮಕ್ಕಳಾಗೋದು ಹೇಗೆ ಎಂದು ಪ್ರಶ್ನಿಸಿದ್ದರು.

ನಂತರ ಆಕೆಯ  ತರ್ಲೆ ಫ್ಯಾನ್ಸ್​, ನಿಮ್ಮ ಪತಿ ಹಾಗೂ ಸಲ್ಮಾನ್​ ಖಾನ್​ ಎಲ್ಲಿ ಎಂದು ಪ್ರಶ್ನಿಸಿದ್ದರು. ಮದುವೆಗೂ ಮುನ್ನ ಕತ್ರಿನಾ ಮತ್ತು ಸಲ್ಮಾನ್​ ಅವರ ಜೋಡಿ ಸಕತ್​ ಸದ್ದು ಮಾಡಿದ್ದರಿಂದ ಈ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಕತ್ರಿನಾ, ವಿಕ್ಕಿ  'ಸ್ಯಾಮ್ ಬಹಾದ್ದೂರ್​' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ ಎಂದಿದ್ದರು.   ಸಲ್ಮಾನ್​ ಖಾನ್​ ಅವರ ಕುರಿತು ಕೇಳಿದ ಪ್ರಶ್ನೆಗೆ ಕತ್ರಿನಾ, ಮನೆಯಲ್ಲಿ ಇದ್ದಾರೆ. ಅವರ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ಇದೆ. ಊಟ ಮಾಡಿ ಕಾಫಿ ಕುಡಿಯುತ್ತಿದ್ದಾರೆ. ನಿಮಗಾಗಿ ಸೆಲ್ಫೀ ತೆಗೆದು ಕೊಟ್ಟಿದ್ದಾರೆ ನೋಡಿ ಎಂದು  ಫೋಟೋ ಒಂದನ್ನು ಶೇರ್​ ಮಾಡಿದ್ದರು. 

ನಾನು ಮನೆಗೆ ಬಂದಾಗ ವಿಕ್ಕಿ ಹೊರ ಹೋಗ್ತಾನೆ, ಒಟ್ಟಿಗೆ ರಾತ್ರಿ ಕಳೆಯೋಲ್ಲ: ಕತ್ರೀನಾ ಹಿಂಗಾದ್ರೆ ಮಗು ಆಗೋದ್ಹೇಗೆ ಕೇಳಿದ ಫ್ಯಾನ್ಸ್

Follow Us:
Download App:
  • android
  • ios