Asianet Suvarna News Asianet Suvarna News

Vicky Kaushal: ಮದುವೆಗೆ ಒಂದು ವಾರ ಮುನ್ನ ಕತ್ರಿನಾ ಕುಟುಂಬದೆದುರು ಕುಡಿದು ಡ್ಯಾನ್ಸ್ ಮಾಡಿದ್ದೆ

ಮದುವೆಗೆ ಒಂದು ವಾರದ ಮುನ್ನ ಹೆಂಡತಿ ಕತ್ರಿನಾ ಕೈಫ್ ಕುಟುಂಬ ಎದುರು ಕುಡಿದು ನೃತ್ಯ ಮಾಡಿದ ವಿಕ್ಕಿ ಕೌಶಲ್ ನಂತರ ಏನಾಯಿತು ಇಲ್ಲಿದೆ ನೋಡಿ 

Vicky Kaushal danced drunkenly in front of his wife Katrina Kaif family Koffee With Karan
Author
First Published Dec 10, 2023, 3:19 PM IST

ಕಾಫಿ ವಿತ್ ಕರಣ್ ಸೀಸನ್ 8ರ (Koffee With Karan)  ಇತ್ತೀಚಿನ ಸಂಚಿಕೆಯ ಅಥಿತಿಗಳಾಗಿ  ನಟರಾದ ವಿಕ್ಕಿ ಕೌಶಲ್ (Vicky Kaushal) ಮತ್ತು ನಟಿ ಕಿಯಾರಾ ಅಡ್ವಾಣಿ  (Kiara Advani) ಭಾಗಿಯಾಗಿದ್ದರು. ಈ  ಜೋಡಿಯು ಗೋವಿಂದಾ ನಾಮ್ ಮೇರಾ ಚಿತ್ರದಲ್ಲಿ  ಒಟ್ಟಿಗೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ನಟ ವಿಕ್ಕಿ ಕೌಶಲ್ ಮದುವೆಗೆ ಒಂದು ವಾರದ ಮೊದಲು  ಪತ್ನಿ ಮನೆಯವರೆದುರು  ಕುಡಿದು 'ಟಿಪ್ ಟಿಪ್ ಬರ್ಸಾ ಪಾನಿ'ಗೆ ಡ್ಯಾನ್ಸ್ ಮಾಡಿದ್ದ ಕುರಿತು ಹಂಚಿಕೊಂಡರು.

ಕರಣ್ ಜೋಹರ್ (Karan Johar) ಚಾಟ್ ಶೋ ‘ಕಾಫಿ ವಿತ್ ಕರಣ್’ ತನ್ನ ಮನರಂಜನಾ ಸಂಭಾಷಣೆಯಿಂದ ವೀಕ್ಷಕರನ್ನು ಅಚ್ಚರಿಗೊಳಿಸುವುದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನಿರೂಪಕ ಕರಣ್ ಜೋಹರ್ ಸೆಲೆಬ್ರಿಟಿಗಳ ಜೀವನದ ಕೌತುಕ ವಿಷಯಗಳನ್ನು ಬಹಿರಂಗಪಡಿಸುವುದು ಮಾತ್ರವಲ್ಲದೆ, ನಟ-ನಟಿಯರ ವೈಯಕ್ತಿಕ ಜೀವನದ ಕುರಿತು ಈ ಕಾರ್ಯಕ್ರಮದಲ್ಲಿ ಚೆರ್ಚೆಯಾಗುತ್ತದೆ.  

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ವಿಕ್ಕಿ ಮತ್ತು ಕಿಯಾರಾ ಅಡ್ವಾಣಿ ಇಬ್ಬರು ತಮ್ಮ ರಿಯಲ್ ಲೈಫ್ ಜೊತೆಗಾರರಾದ ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಗ್ಗೆ ಹೆಚ್ಚು ಪ್ರೀತಿಯಿಂದ ಮಾತನಾಡಿದರು. ಈ ಸಂಚಿಕೆಯಲ್ಲಿ  ವಿಕ್ಕಿ ಮತ್ತು ಕಿಯಾರಾ ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚು ಪ್ರತಿಕ್ರಿಯೆಯನ್ನು ಕರಣ್ ಪಡೆದರು.

ಇದನ್ನೂ ಓದಿ: ಪಾತ್ರೆ ತೊಳಿತಿರೋ ಕತ್ರಿನಾ ವಿಡಿಯೋ ವೈರಲ್​: ಕೋಮಲ ಕೈ ಸವೆದು ಹೋಗತ್ತೆ ಮೇಡಂ ಅಂತಿದ್ದಾರೆ ಫ್ಯಾನ್ಸ್​

ಕಾರ್ಯಕ್ರಮ ಫನ್  ಸೆಗ್ಮೆಂಟ್ ನಲ್ಲಿ ಕರಣ್ ವಿಕ್ಕಿ ಮತ್ತು ಕಿಯಾರಾಗೆ  ತಮ್ಮ ಮೋಜಿನ  ಕಥೆಯನ್ನು  ಹಂಚಿಕೊಳ್ಳಲು ಕೇಳಿದರು. ಆಗ ಮೊದಲು ಮಾತನಾಡಿದ ವಿಕ್ಕಿ ಇದು ಮೋಜಿನ ಅರ್ಥದಲ್ಲಿ  ಕಾಮಿಕ್ ಅಲ್ಲ ಆದರೆ ಇದು ನಿಜವಾಗಿಯೂ ಬಹಳಷ್ಟು ವಿನೋದವಾಗಿತ್ತು ಎಂದು ತಮ್ಮ ಕಥೆಯನ್ನು ಹಂಚಿಕೊಂಡರು. ಕೋವಿಡ್ ನಿಂದಾಗಿ ವಿಕ್ಕಿ ಕತ್ರಿನಾ ಕೈಫ್ ನ ಕುಟುಂಬವನ್ನು ಮದುವೆಗೆ ಒಂದು ವಾರ ಮೊದಲು ಭೇಟಿಯಾಗಿದ್ದು, ಆ ಸಮಯದಲ್ಲಿ ದೊಡ್ಡ ಪಾರ್ಟಿ ಮಾಡಿ ಎಲ್ಲರೂ ಕುಡಿದು ತಾನು  ಟಿಪ್ ಟಿಪ್ ಬರ್ಸಾ ಪಾನಿ ಹಾಡಿಗೆ  ನೃತ್ಯ ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ ವಿಕ್ಕಿ ತಮ್ಮ ಮದುವೆಗೆ ಒಂದು ದಿನ ಮೊದಲು ಕತ್ರಿನಾಗೆ ಪ್ರಪೋಸ್ ಮಾಡಿದ್ದೆ ಎಂದು ಬಹಿರಂಗಪಡಿಸಿದರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 9, 2021 ರಂದು ರಾಜಸ್ಥಾನದ ರಣಥಂಬೋರ್‌ನಲ್ಲಿ ವಿವಾಹವಾಗಿದ್ದರು.

ರಾಜ್‌ಕುಮಾರ್ ಹಿರಾನಿ (Rajkumar Hirani) ಅವರ ಮುಂಬರುವ ಚಿತ್ರ ಡುಂಕಿ (Dunki)  ಚಲನಚಿತ್ರದಲ್ಲಿ ಶಾರುಖ್ ಖಾನ್  (Shah Rukh Khan) ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿರುವ ವಿಕ್ಕಿ ಕೌಶಲ್ ಚಿತ್ರೀಕರಣದ ಸಮಯದಲ್ಲಿ ಸೆಟ್‌ನಲ್ಲಿ ನಡೆದ ಕೆಲ ಘಟನೆಯನ್ನು ವಿವರಿಸಿದರು.

ಇದನ್ನೂ ಓದಿ: 2ನೇ ವಿವಾಹ ವಾರ್ಷಿಕೋತ್ಸವ ಆಚರಿಸ್ತಿರುವ ಬಾಲಿವುಡ್ ಜೋಡಿಗೆ ಡಬ್ಬಲ್ ಖುಷಿ 

ಒಟ್ಟಿನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪ್ರೇಮಕಥೆಯನ್ನು  ಹಂಚಿಕೊಳ್ಳುವ ಜೊತೆಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು. ಕಾಫಿ ವಿತ್ ಕರಣ್ ಶೋನಲ್ಲಿ ನಟ ವಿಕ್ಕಿ ಕೌಶಲ್ ಮತ್ತು ನಟಿ ಕಿಯಾರಾ ಅಡ್ವಾಣಿ ಕರಣ್ ರ ಪ್ರಶ್ನೆಗಳಿಗೆ ಉತ್ತರ ನೀಡುತ್ತ  ಸಖತ್ ಎಂಜಾಯ್ ಮಾಡಿದ್ರು.

ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

Follow Us:
Download App:
  • android
  • ios