ಕತ್ರಿನಾ ಕೈಫ್​ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದರೆ, ವಿಕ್ಕಿ ಮನೆಗೆಲಸ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಫ್ಯಾನ್ಸ್​ ಹೇಳ್ತಿರೋದೇನು? 

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಬಾಲಿವುಡ್‌ನ ಬ್ಯೂಟಿಫುಲ್ ಜೋಡಿ. ಡಿಸೆಂಬರ್ 9ರಂದು ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಕತ್ರಿನಾ ಕೈಫ್ ಅವರು ತಮ್ಮ 'ಟೈಗರ್ 3' ಸಕತ್​ ಸದ್ದು ಮಾಡುತ್ತಿರುವ ಖುಷಿಯಲ್ಲಿದ್ದರೆ, ಕತ್ರಿನಾ ಪತಿ ವಿಕ್ಕಿ ಕೌಶಲ್ ತಮ್ಮ ಮುಂಬರುವ 'ಸಾಮ್ ಬಹಾದೂರ್' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. 2021ರ ಡಿಸೆಂಬರ್​ 9ರಂದು ಮದುವೆಯಾಗಿದ್ದ ಈ ಜೋಡಿ ಇದೀಗ ಮೂರು ವರ್ಷದ ಖುಷಿ ದಾಂಪತ್ಯ ಜೀವನ ನಡೆಸುತ್ತಿದೆ. ಇಬ್ಬರೂ ಸಿನಿ ತಾರೆಯರು. ಕೇಳಬೇಕೆ? ಜೊತೆಯಲ್ಲಿ ಇರುವುದೇ ಕಮ್ಮಿ. ಶೂಟಿಂಗ್​ ಎಂದು ಆಗಾಗ್ಗೆ ಹೊರಗಡೆ ಹೋಗುತ್ತಲೇ ಇರಬೇಕು. ಇದರಿಂದಾಗಿ ಎಷ್ಟೋ ಸಮಯ ದಂಪತಿ ಒಟ್ಟಿಗೆ ಕಳೆಯಲು ಸಾಧ್ಯವೇ ಆಗುವುದಿಲ್ಲ. ಇದೇ ರೀತಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಅವರ ವಿಷಯದಲ್ಲಿಯೂ ಆಗಿದೆ, ಅದೂ ಮದುವೆಯ ಸಂದರ್ಭದಲ್ಲಿ ಶೂಟಿಂಗ್​ನಿಂದಾಗಿ ಅಲ್ಲೋಲ ಕಲ್ಲೋಲವಾಗಿತ್ತಂತೆ. ಆ ಇಂಟರೆಸ್ಟಿಂಗ್​ ವಿಷಯವನ್ನು ವಿಕ್ಕಿ ಇತ್ತೀಚಿಗೆ ಶೇರ್​ ಮಾಡಿಕೊಂಡಿದ್ದರು. 

ಇದೀಗ ಈ ಜೋಡಿ ಮನೆಯಲ್ಲಿ ಕೆಲಸ ಮಾಡುವ ವಿಡಿಯೋ ಒಂದು ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಕತ್​ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಕತ್ರಿನಾ ಅವರು ಪಾತ್ರೆ ತೊಳೆಯುತ್ತಿದ್ದರೆ, ವಿಕ್ಕಿ ಅವರು ಫ್ಯಾನ್​ ಒರೆಸುತ್ತಿರುವುದನ್ನು ನೋಡಬಹುದು. ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇವರಿಬ್ಬರೂ ವಿಡಿಯೋ ಮಾಡುವುದಕ್ಕಾದರೂ ಸೈ, ಪ್ರಚಾರಕ್ಕಾದರೂ ಸೈ ಮನೆಗೆಲಸ ಮಾಡಿದ್ರಲ್ಲಾ ಎನ್ನುತ್ತಿದ್ದಾರೆ ಫ್ಯಾನ್ಸ್​. ಇನ್ನು ಹಲವರು ಇದು ಕೋವಿಡ್​ ಸಂದರ್ಭದಲ್ಲಿ ತೆಗೆದಿರುವ ವಿಡಿಯೋ, ಇದೀಗ ಪುನಃ ವೈರಲ್​ ಆಗುತ್ತಿದೆ ಎನ್ನುತ್ತಾರೆ. ಕತ್ರಿನಾ ಕೈಫ್​ ಕೂಡ ಕೊರೋನಾ ವೈರಸ್​ಗೆ ತುತ್ತಾಗಿದ್ದರು. ಯಾವ ಸಮಯದಲ್ಲಾದರೂ ತೆಗೆದಿರಲಿ, ತಮ್ಮ ಮನೆಯ ಕೆಲಸ ಖುದ್ದು ಮಾಡುವುದನ್ನು ನೋಡುವುದೇ ಚೆಂದ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಮೇಡಂ ಕೈ ಸವೆದು ಹೋಗುತ್ತೆ, ನೀವು ಪಾತ್ರೆ ತೊಳೆಯೋದು ನೋಡೋಕಾಗ್ತಿಲ್ಲ ಎಂದಿದ್ದಾರೆ. 

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಫ್ಯಾನ್ಸ್​ ಗರಂ- ಟಿಆರ್​ಪಿಗಾಗಿ ಪ್ಲೀಸ್​ ಹೀಗೆ ಮಾಡ್ಬೇಡಿ: ಅಭಿಮಾನಿಗಳ ಕಣ್ಣೀರು

ಇವೆಲ್ಲವುಗಳ ಹೊರತಾಗಿ ಮತ್ತಿಷ್ಟು ಮಂದಿ, ಏಕೆ ಮೇಡಂ ನಿಮ್ಗೆ ಕೆಲಸದವರು ಸಿಗುತ್ತಿಲ್ವಾ? ನಿಮ್ಮ ಮನೆಗೆ ನಾನು ಬರ್ಲಾ? ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಾ ದುಡ್ಡು ಎಣಿಸುವ ಖುಷಿಯೇ ಬೇರೆ ಎಂದರೆ, ಮತ್ತೆ ಕೆಲವರು ಸಂಬಳ ಕೊಡದಿದ್ರೂ ಪರವಾಗಿಲ್ಲ, ನಿಮ್ಮನ್ನು ದಿನವೂ ನೋಡ್ಬೋದಲ್ಲ, ನಾನು ಕೆಲಸಕ್ಕೆ ಬರ್ಲಾ ಅಂತಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಮನೆಗೆಲಸ ಮಾಡುವುದನ್ನು ವಿಭಿನ್ನ ರೀತಿಯಲ್ಲಿ ಫ್ಯಾನ್ಸ್​ ಇಷ್ಟಪಡುತ್ತಿದ್ದಾರೆ. 

ಇತ್ತೀಚೆಗಷ್ಟೇ ವಿಕ್ಕಿ ಅವರು, ಮದುವೆಗೂ ಮುನ್ನ ಕತ್ರಿನಾ ತಮಗೆ ಬೆದರಿಕೆ ಹಾಕಿದ ಇಂಟರೆಸ್ಟಿಂಗ್​ ವಿಷಯವನ್ನು ಹೇಳಿದ್ದರು. ಮದ್ವೆ ಸಂದರ್ಭದಲ್ಲಿ ವಿಕ್ಕಿ ಅವರ ಜರಾ ಹಟ್ಕೆ, ಜರಾ ಬಚ್ಕೆ (Zara Hatke Zara Bachke) ಶೂಟಿಂಗ್​ನಲ್ಲಿದ್ದರು. ಮದುವೆಯ ಸಂದರ್ಭದಲ್ಲಿ ಅರ್ಧ ಸಿನಿಮಾ ಶೂಟಿಂಗ್ ಮಾತ್ರ ಆಗಿತ್ತು. ಮದುವೆಗೆಂದು ವಿಕ್ಕಿ ಅವರು ಎರಡು ದಿನ ಮಾತ್ರ ರಜೆ ತೆಗೆದುಕೊಂಡಿದ್ದರಂತೆ! ಮದುವೆಗೆ ಎರಡು ದಿನ ರಜೆ ಸಾಕಾಗತ್ತಾ? ಅದೂ ಹೇಳಿ ಕೇಳಿ ಸೆಲೆಬ್ರಿಟಿಗಳ ಮದುವೆ. ಮದುವೆ ಸಂಭ್ರಮವೇ ತಿಂಗಳಾನುಗಟ್ಟಲೆ ಇರುವಾಗ ಎರಡು ದಿನ ರಜೆ ಎಲ್ಲಿ ಸಾಕಾಗುತ್ತದೆ? ಈ ವಿಷಯ ಕೇಳುತ್ತಲೇ ಕತ್ರಿನಾ ಬೆದರಿಕೆ ಹಾಕಿದ್ದಳು ಎಂದು ವಿಕ್ಕಿ ನೆನಪಿಸಿಕೊಂಡಿದ್ದರು. ಎರಡು ದಿನದಲ್ಲಿ ಸೆಟ್​ಗೆ ಹೋಗಬೇಕೆಂದರೆ ನೀನು ಮದುವೆಯಾಗಲೇ ಬೇಡ ಎಂದಳು. ಅವಳ ಕೋಪ ನೋಡಿ ನನಗೂ ಭಯ ಆಯಿತು. ಅದಕ್ಕಾಗಿ ರಜೆಯನ್ನು ಎರಡು ದಿನದಿಂದ ಐದು ದಿನಕ್ಕೆ ವಿಸ್ತರಣೆ ಮಾಡಿಕೊಂಡಿದ್ದೆ ಎಂದರು. 

ತಿನ್ನೋದು ಕನ್ನಡ ಅನ್ನ, ಇಷ್ಟಪಡೋದು ಇಂಗ್ಲಿಷ್​ ಹಾಡಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್​

View post on Instagram