ಸಾಮಾನ್ಯವಾಗಿ ಸ್ಟಾರ್ ನಟ, ನಟಿಯರು ತಮ್ಮ ಜೊತೆ ಸಿನಿಮಾ ಮಾಡಿದ ಸಹ ಕಲಾವಿದರನ್ನು ನೆನಪಿಸಿಕೊಳ್ಳುವುದು ಅಪರೂಪ. ಅವರು ಎಲ್ಲೇ ಸಿಕ್ಕರೂ ಗುರುತಿಸಿ ಅವರೊಂದಿಗೆ ಆತ್ಮೀಯತೆಯಿಂದ ಮಾತನಾಡುವವರು ಇನ್ನೂ ಅಪರೂಪ. ಆ ಅಪರೂಪದ ಪಟ್ಟಿಗೆ ಸೇರುವ ಕರ್ನಾಟಕದ ನಟಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು.

ಬಾಹುಬಲಿ ನಟಿ ಬೇಡ ಎಂದಿದ್ದ ಸಿನಿಮಾಗಳಿವು..! ಸಿಕ್ಕಿದ್ದು ದೀಪಿಕಾಗೆ 

ಕೆಲ ದಿನಗಳ ಹಿಂದೆ ವಯೋಸಹಜ ಕಾಯಿಲೆಯಿಂದ ತಮ್ಮ ಸಹ ಕಲಾವಿದ ವೇದಂ ಬಾಲಯ್ಯ ನಿಧನ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಜೊತೆ ಫೋಟೋ ಹಂಚಿಕೊಂಡಿರುವ ಅನುಷ್ಕಾ ಕಂಬನಿ ಮಿಡಿದಿದ್ದಾರೆ.

'ವೇದಂ ನಾಗಯ್ಯ ಆತ್ಮ ಪರಿಶುದ್ಧವಾದದ್ದು ಇಂದು ಅವರು ಸ್ವರ್ಗಕ್ಕೆ ಸೇರಿದ್ದಾರೆ. ಅವರ ಕುಟುಂಬದವರಿಗೆ ನನ್ನ ಸಂತಾಪ.  ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ದೇವರು ನೀಡಲಿ' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.  ತೆಲುಗು ಚಿತ್ರರಂಗದಿಂದ ಹಲವರು ಸಂತಾಪ ಸೂಚಿಸಿಲ್ಲ ಆದರೆ ಅನುಷ್ಕಾ ಮಾಡಿರುವುದಕ್ಕೆ ನೀವು ನಿಜವಾದ ಕಲಾವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಕನ್ನಡಭಿಮಾನ ತೋರಿಸಿ ಕನ್ನಡಿಗರ ಮನ ಗೆದ್ದ ಚೆಲುವೆ ಅನುಷ್ಕಾ ಶೆಟ್ಟಿ! 

ವೇದಂ ಸಿನಿಮಾ ಸಿದ್ಧತೆ ವೇಳೆ ನಿರ್ದೇಶಕ ಕ್ರಿಶ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗಯ್ಯನವರನ್ನು ಸಂಪರ್ಕಿಸಿ ತಮ್ಮ ಕಛೇರಿಗೆ ಭೇಟಿ ನೀಡುವಂತೆ ಮನವಿ ಮಾಡಿಕೊಂಡರು, ಚಿತ್ರಕತೆ ಹೇಳಿ ನಾಗಯ್ಯನಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ನಾಗಯ್ಯ ಅವರ ಮೊದಲ ಸಿನಿಮಾ ವೇದಂ ಆಗಿದ್ದ ಕಾರಣ ಎಲ್ಲರೂ ಅವರನ್ನು ವೇದಂ ನಾಗಯ್ಯ ಎಂದೇ ಕರೆಯುತ್ತಿದ್ದರು.