Asianet Suvarna News Asianet Suvarna News

Kaikala Satyanarayana Death; ಖ್ಯಾತ ನಟ ಕೈಕಲಾ ಸತ್ಯನಾರಾಯಣ ನಿಧನ

ಟಾಲಿವುಡ್ ಖ್ಯಾತ ನಟ ಕೈಕಲಾ ಸತ್ಯನಾರಾಯಣ ಅವರು ಇಂದು (ಡಿಸೆಂಬರ್ 23) ಮುಂಜಾನೆ ಇಹಲೋಕ ತ್ಯಜಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸತ್ಯನಾರಾಯಣ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Veteran Telugu Actor Kaikala Satyanarayana Dies At 87 sgk
Author
First Published Dec 23, 2022, 12:37 PM IST

ಟಾಲಿವುಡ್ ಖ್ಯಾತ ನಟ ಕೈಕಲಾ ಸತ್ಯನಾರಾಯಣ ಅವರು ಇಂದು (ಡಿಸೆಂಬರ್ 23) ಮುಂಜಾನೆ ಇಹಲೋಕ ತ್ಯಜಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸತ್ಯನಾರಾಯಣ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 87 ವರ್ಷದ ಕೈಕಳ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಆದರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದ ಕೈಕಲಾ ಅವರು ನಿಧನ ಹೊಂದಿದರು. ಹಿರಿಯ  ನಟನ ಸಾವಿಗೆ ಟಾಲಿವುಡ್‌ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 

ಟಾಲಿವುಡ್ ಹಿರಿಯ ನಟ ಎನ್‌ಟಿಆರ್ ಅವರ ಕಾಲದಿಂದನೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಕೈಕಲಾ ಅವರು ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಶಕಗಳ ಕಾಲದಿಂದನೂ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಸತ್ಯನಾರಾಯಣ ಅವರು ಕೌಟುಂಬಿಕ ಮತ್ತು ಸಾಮಾಜಿಕ ಮತ್ತು ಪೌರಾಣಿಕ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಜೊತೆಗೆ ಸತ್ಯನಾರಾಯಣ ಅವರು ರಾಜಕೀಯದಲ್ಲೂ ಸಕ್ರೀಯರಾಗಿದ್ದರು. ತೆಲುಗು ದೇಶಂ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಸಂಸದರಾಗಿಯೂ ಕೆಲಸ ಮಾಡಿದ್ದಾರೆ. 

ಕೈಕಳ ಸತ್ಯನಾರಾಯಣ ಅವರು ಪತ್ನಿ ನಾಗೇಶ್ವರಮ್ಮ ಸತ್ಯನಾರಾಯಣ ಮತ್ತು ಇಬ್ಬರೂ ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.  ಕೈಕಲ ಅವರು ಮೊದಲ ಬಾರಿಗೆ ನಟನಾಗಿ  1959ರಲ್ಲಿ ಚಂಗಯ್ಯ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದರು. ಕೊನೆಯದಾಗಿ ಕೈಕಲಾ ಸತ್ಯನಾರಾಯಣ ಅವರು 2009ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಅರುಂಧತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Shivamogga: ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಕೇಶವಮೂರ್ತಿ ಇನ್ನಿಲ್ಲ

ನಟನೆಯ ಜೊತೆಗೆ ಕೈಕಾಲಾ ಸತ್ಯನಾರಾಯಣ ಅವರು ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದರು.  ರಾಮಾ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದ ಕೈಕಲಾ ಅವರು ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೊಡಮ ಸಿಂಹಂ, ಬಂಗಾರು ಕುಟುಂಬ, ಮುದ್ದುಲ ಮೊಗುಡು ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ.  ತೆಲುಗು ಚಿತ್ರರಂಗದ ಕೊಡುಗೆಗಾಗಿ 2017 ರ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಆಂಧ್ರ ಪ್ರದೇಶ ಸರ್ಕಾರದ ಪ್ರತಿಷ್ಠಿತ ನಂದಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಫಲಿಸದ ಚಿಕಿತ್ಸೆ; KGF ತಾತ ಕೃಷ್ಣ ಜಿ.ರಾವ್ ನಿಧನ

ತೆಲುಗು ನಟ ಕಲ್ಯಾಣರಾಮ್ ನಂದಮೂರಿ ಅವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. 'ಕೈಕಾಲ ಸತ್ಯನಾರಾಯಣ ಅವರ ನಿಧನದ ಬಗ್ಗೆ ತಿಳಿದು ದುಃಖವಾಯಿತು. ನಮ್ಮ ತೆಲುಗು ಬೆಳ್ಳಿತೆರೆಯಲ್ಲಿ ಅನೇಕ ಪಾತ್ರಗಳನ್ನು ಅಮರಗೊಳಿಸಿದ ದಂತಕಥೆ. ಓಂ ಶಾಂತಿ' ಎಂದು ಹೇಳಿದ್ದಾರೆ.

Follow Us:
Download App:
  • android
  • ios