ಹಿರಿಯ ನಟ ಚಂದ್ರ ಮೋಹನ್ ಹೃದಯಾಘಾತದಿಂದ ಸಾವು; ಕಂಬನಿ ಮಿಡಿದ ಚಿತ್ರರಂಗ
ಪದಹರೆಲ್ಲಾ ವಯಸು, ಕೃಷ್ಣ, ಶಂಕರಾಭರಣ, ಶ್ರೀ ಶ್ರೀ ಮುವ್ವ, ಶ್ರೀ ಶಿರಡಿ ಸಾಯಿಬಾಬಾ, ರಾಧಾ, ಕಾಲಿಕಾಲಂ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದಿಂದ ತೆಲುಗು ಚಿತ್ರರಸಿಕರನ್ನು ರಂಜಿಸಿದ್ದರು ನಟ ಚಂದ್ರ ಮೋಹನ್. ಆದರೆ, ವಯೋಸಹಜ ಎನ್ನುವಂತೆ ಖಾಯಿಲೆಗೆ ತುತ್ತಾಗಿದ್ದ ನಟ, ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ.
ತೆಲುಗು ಚಿತ್ರರಂಗದ ಮನೋಜ್ಞ ಕಲಾವಿದ ಚಂದ್ರ ಮೋಹನ್ ಅವರು ನಿಧನ ಹೊಂದಿದ್ದಾರೆ. ಹೈದ್ರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಸ್ಥಂಭನದಿಂದ ನಿಧನರಾಗಿರುವ ಚಂದ್ರ ಮೋಹನ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಹಲವಾರು ತೆಲುಗು ಚಿತ್ರಗಳಲ್ಲಿ ನಟಿಸಿದ್ದ ನಟ ಚಂದ್ರ ಮೋಹನ್ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಬೆಳಿಗ್ಗೆ ಕಾರ್ಡಿಯಾಕ್ ಅರೆಸ್ಟ್‌ನಿಂದ ನಟ ಚಂದ್ರ ಮೋಹನ್ ಕೊನೆಯುಸಿರೆಳೆದಿದ್ದಾರೆ.
ನಟ ಚಂದ್ರ ಮೋಹನ್, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅವರು ಹೃದಯ ಸಂಬಂಧಿ ಖಾಯಿಲಿಗೆ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಮ್ಮನ್ನಗಲಿದ್ದಾರೆ. ಅವರ ನಿಧನದಿಂದ ತೆಲುಗು ಚಿತ್ರಂಗ ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಾಗಿದೆ.
ಇಲ್ಲೇನೋ ನಡೀತಿದೆ, ಹಬ್ಬಕ್ಕೆ ಮತ್ತಷ್ಟು ಸೌಂಡ್ ಮಾಡೋಣ; ವೀಕ್ಷಕರ ತಲೆಗೆ ಹುಳ ಬಿಟ್ಟ ಕಲರ್ಸ್ ಕನ್ನಡ!
ಪದಹರೆಲ್ಲಾ ವಯಸು, ಕೃಷ್ಣ, ಶಂಕರಾಭರಣ, ಶ್ರೀ ಶ್ರೀ ಮುವ್ವ, ಶ್ರೀ ಶಿರಡಿ ಸಾಯಿಬಾಬಾ, ರಾಧಾ, ಕಾಲಿಕಾಲಂ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದಿಂದ ತೆಲುಗು ಚಿತ್ರರಸಿಕರನ್ನು ರಂಜಿಸಿದ್ದರು ನಟ ಚಂದ್ರ ಮೋಹನ್. ಆದರೆ, ವಯೋಸಹಜ ಎನ್ನುವಂತೆ ಖಾಯಿಲೆಗೆ ತುತ್ತಾಗಿದ್ದ ನಟ, ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಶ್ರೇಷ್ಠಾ ಕೆಳಗೆ ಕೆಲಸ ಮಾಡಬೇಕಾಗಿದೆ ತಾಂಡವ್, ಮುಗೀತು ಅವನ ಕಥೆ ಎಂದ ನೆಟ್ಟಿಗರು!
ತೆಲುಗು ಚಿತ್ರದ ಶ್ರೇಷ್ಠ ನಟನೆಗೆ ಬೆಸ್ಟ್ ಆಕ್ಟರ್, ಬೆಸ್ಟ್ ಮೇಲ್ ಕಾಮಿಡಿಯನ್ ಎಂದು ನಂದಿ ಪ್ರಶಸ್ತಿ ಹಾಗೂ ಬೆಸ್ಟ್ ಕ್ಯಾರೆಕ್ಟರ್ ನಟ ಎಂದು ನಂದಿ ಅವಾರ್ಡ್‌ಗಳನ್ನು ನಟ ಚಂದ್ರ ಮೋಹನ್ ಪಡೆದಿದ್ದಾರೆ. ಅವರ ನಿಧನಕ್ಕೆ ಸ್ಟಾರ್ ನಟ ಜೂನಿಯರ್ ಎಂಟಿಆರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಇದೀಗ ಈ ನಟ ನಮ್ಮನ್ನಗಲಿ ತಾವು ನಟಿಸಿದ ಸಿನಿಮಾ ಪಾತ್ರಗಳ ಮೂಲಕ ಸದಾ ನಮ್ಮ ನೆನಪಿನಲ್ಲಿ ಉಳಿಯುವಂತಾಗಿದೆ.