Asianet Suvarna News Asianet Suvarna News

ಅಮ್ಮ ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ; ಪುತ್ರ ವಿನೋದ್ ರಾಜ್ ಕಣ್ಣೀರು

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅಮ್ಮನ ಸಾವಿನಿಂದ ವಿನೋದ್ ರಾಜ್ ಶಾಕ್ ಅಗಿದ್ದಾರೆ. ತಾಯಿಯ ಸಾವು ಅರಗಿಸಿಕೊಳ್ಳಲಾಗದೆ ತೀವ್ರ ಭಾವುಕರಾಗಿರುವ ಮಗ ವಿನೋದ್  ರಾಜ್.

Veteran actress Leelavati passes away: Son Vinod Raj shocked bengaluru rav
Author
First Published Dec 8, 2023, 11:50 PM IST

ಬೆಂಗಳೂರು (ಡಿ.8) : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅಮ್ಮನ ಸಾವಿನಿಂದ ವಿನೋದ್ ರಾಜ್ ಶಾಕ್ ಅಗಿದ್ದಾರೆ. ತಾಯಿಯ ಸಾವು ಅರಗಿಸಿಕೊಳ್ಳಲಾಗದೆ ತೀವ್ರ ಭಾವುಕರಾಗಿರುವ ಮಗ ವಿನೋದ್  ರಾಜ್.

ತಾಯಿಯ ಸಾವಿನ ಬಗ್ಗೆ ಪುತ್ರ ವಿನೋದ್ ರಾಜ್ ಭಾವುಕರಾಗಿ ಮಾತನಾಡಿದ್ದಾರೆ. ನನ್ನ ಪ್ರಾಣನೇ ಹೋಗಬೇಕಿತ್ತು. ಅರ್ಧ ಜೀವ ಹೋಗಿದೆ. 56 ವರ್ಷ ಜೊತೆ ತಾಯಿ ಜೊತೆಗೆ ಕಾಲ ಕಳೆದೆ. ಇಷ್ಟು ವರ್ಷದಲ್ಲಿ ಒಂದೇ ಚೂರು ಪ್ರೀತಿ ಕೊರತೆ ಮಾಡಲಿಲ್ಲ. ಕೊನೆಯದಾಗಿ ನನ್ನ ಕೈಹಿಡಿದುಕೊಂಡೇ ಕಳೆದು ಹೋದ್ರು. ನೀರು ಕುಡಿಸುತ್ತಲೇ ಪ್ರಾಣ ಕಳೆದುಕೊಂಡ್ರು. ಕೊನೆದಾಗಿ ನಾಲ್ಕ ಸಲ ನನ್ನ ಹೆಸರನ್ನೇ ಕರೆದು ಪ್ರಾಣಬಿಟ್ರು ಎಂದು ತಾಯಿಯ ನಿಧನದ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡು ಪುತ್ರ ವಿನೋದ್ ರಾಜ್ ಗದ್ಗದಿತರಾದರು.

ಬೆಳ್ತಂಗಡಿ ಬೆಡಗಿಗೆ ಡಾ.ರಾಜ್ ಅಂದ್ರೆ ಬೆಟ್ಟದಷ್ಟು ಪ್ರೀತಿ ಅಭಿಮಾನ!

ಅಮ್ಮ ಊಟ ಬಿಟ್ಟ ಎರಡ್ಮೂರು ತಿಂಗಳಿಂದ ನಾನೂ ಊಟ ಮಾಡೋದನ್ನ ಬಿಟ್ಬಿಟ್ಟೆ. ಶಿವಣ್ಣ ಅಪ್ಸೇಟ್ ಆಗಬೇಡಿ ಅಂತಾ ಹೇಳಿದ್ರು. ಆದರೆ ನಾನು ನನ್ನ ತಾಯಿ ಸ್ಥಿತಿ ಕಂಡು ಊಟನೂ ಮಾಡಲಾಗಿಲ್ಲ. ಕೊನೆವರೆಗೂ ನನ್ನ ತಾಯಿ ಜೊತೆ ಇದ್ದೆ, ಈಗ ಯಾರೂ ಇಲ್ಲ. ಎಷ್ಟು ಬೇಡಿಕೊಂಡ್ರೂ ತಾಯಿನ ಪಡೆದುಕೊಳ್ಳಲು ಆಗಲ್ಲ. ಅವರು ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ. ನನ್ನ ಅಮ್ಮನಿಗೆ ಸಾಕಷ್ಟು ಕನಸು ಗಳಿದ್ವು. ಅಮ್ಮ ತನ್ನ ಕನಸುಗಳನ್ನು ನನ್ನ ಮುಂದೆ ಹಂಚಿಕೊಳ್ತಿದ್ಳು. ಅಮ್ಮ ಹೇಳಿರೋ ಬಾಕಿ ಕೆಲಸ ನಾನು ಮಾಡಿ ಮುಗಿಸ್ತೀನಿ ಎಂದು ಕಣ್ಣೀರಾದರು.

ಮನೆಯಿಂದ ಹೊರಡುವಾಗಲೆಲ್ಲ ಅಮ್ಮ ಐವತ್ತು ನೂರು ನನ್ನ ಕೈಗೆ ಕೊಟ್ಟು ಹೋಗೋರು. ಕಂದಾ ನಾನು ಏನೂ ಇಲ್ಲದೆ ಬಂದವಳಪ್ಪ ಈಗ ದೇವರ ಧಯೆಯಿಂದ ಒಳ್ಳೆ ಸ್ಥಾನದಲ್ಲಿದ್ದೇನೆ. ನಮಗಿಂತ ಬಡತನದಲ್ಲಿರುವವರ ಬೆನ್ನಿಗೆ ನಿಲ್ಲಬೇಕು ಕಂದಾ ಅಂದಿದ್ದಳು. ಅಮ್ಮನಿಗೆ ಬಡವರಿಗೆ ಆಸ್ಪತ್ರೆ ಕಟ್ಟಬೇಕು ಎಂಬ ಕನಸಿತ್ತು. ಅದಕ್ಕಾಗಿ ಅಮ್ಮ ಆಸ್ಪತ್ರೆ ಕಟ್ಟುವವರೆಗೆ ಇದ್ದು ಈಗ ದೂರ ಹೋಗಿದ್ದಾಳೆ ಎಂದು ಭಾವುಕರಾದರು.

ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ

ಅಮ್ಮನ ಸುದ್ದಿ ತಿಳಿದು ಸಿಎಂ ಕರೆ ಮಾಡಿ ಮಾತನಾಡಿದ್ರು. ರವೀಂದ್ರ ಕಲಾಕ್ಷೇತ್ರಕ್ಕೆ ಬರ್ತಿನಿ ಎಂದು ಸಿಎಂ ಹೇಳಿದ್ರು. ನಮ್ಮ ತಾಯಿ ಮೇಲೆ ಮುಖ್ಯಮಂತ್ರಿಗೆ ಅಪಾರ ಗೌರವ ಇದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡೋದಾಗಿ ಹೇಳಿದರು. ವಾಣಿಜ್ಯ ಮಂಡಳಿಯವರೆಲ್ಲ ಬಂದು ನಮ್ಮ ತಾಯಿ ಆರೋಗ್ಯ ವಿಚಾರಿಸಿದ್ದಾರೆ. ಎಷ್ಟು ಜನ್ಮ ಬಂದ್ರೂ ಜನರ ಋಣ ತೀರಿಸಲು ಆಗಲ್ಲ. ಜನರ ಋಣದ ಸಾಲ ತೀರಿಸಲು ಆಗಲ್ಲ,ಸಾಲಗಾರನಾಗ್ಬಿಟ್ಟೆ ಎನ್ನುತ್ತಲೇ ಕಣ್ಣೀರಾದ ಪುತ್ರ ವಿನೋದ್ ರಾಜ್.

Follow Us:
Download App:
  • android
  • ios