Asianet Suvarna News Asianet Suvarna News

ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ

ಮಾಂಗಲ್ಯ ಯೋಗ ಕನ್ನಡ ಚಿತ್ರದ ಮೂಲಕ ತಮ್ಮ ನಟನೆಯ ಪಯಣವನ್ನು ಪ್ರಾರಂಭಿಸಿದ್ದ ನಟಿ ಲೀಲಾವತಿ ಅವರು ತಮ್ಮ ಕಾಲದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ಅಂದಿನ ಕಾಲದ ದಿಗ್ಗಜ ನಾಯಕನಟರುಗಳ ಜತೆ ನಟಿಸಿ, ಅಂದಿನ ಮಹಾನ್ ನಾಯಕಿ ಎನಿಸಿಕೊಂಡಿದ್ದರು ನಟಿ ಲೀಲಾವತಿ.

Actress Leelavathi passes away on 08 December 2023 at Bangalore srb
Author
First Published Dec 8, 2023, 7:31 PM IST

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಇಂದು, 08 ಡಿಸೆಂಬರ್ 2023ರಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು. ಇಂದು ತೀವ್ರ ಉಸಿರಾಟದಿಂದ ಬಳಲುತ್ತಿದ್ದ ನಟಿ ಲೀಲಾವತಿ ಅವರನ್ನು ಕೊನೆಗೂ ಉಳಿಸಿಕೊಳ್ಳಲು ಸಾಧ್ಯವಾಗಿಲಿಲ್ಲ. ಇತ್ತೀಚೆಗಷ್ಟೇ ನಟಿ ಲೀಲಾವತಿಯವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ,ನಟ ಶಿವರಾಜ್‌ಕುಮಾರ್ ಮುಂತಾದವರು ಹೋಗಿ ವಿಚಾರಿಸಿಕೊಂಡು ಬಂದಿದ್ದರು. 

ನಟಿ ಲೀಲಾವತಿ ಅವರು ಕಪ್ಪು-ಬಿಳುಪು ಚಿತ್ರಗಳ ಕಾಲದಲ್ಲೇ ಚಿತ್ರರಂಗಕ್ಕೆ ಬಂದವರು. ಕಲ್ಯಾಣ್ ಕುಮಾರ್, ರಾಜ್ ಕುಮಾರ್ ಮುಂತಾದವರ ಜತೆ ನಾಯಕಿಯಾಗಿ ನಟಿಸಿದ್ದ ಲೀಲಾವತಿ ಅವರು ಬಳಿಕ ಸಾಕಷ್ಟು ಚಿತ್ರಗಳಲ್ಲಿ ತಾಯಿಯಾಗಿ ಸಹ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ನಟನೆಯಿಂದ ದೂರ ಸರಿದಿದ್ದ ನಟಿ ಲೀಲಾವತಿ ಅವರಿಗೆ ಈಗ 87 ವರ್ಷ ವಯಸ್ಸಾಗಿತ್ತು. 

ಚಂದನವನದ ಗೊಂಬೆ ಲೀಲಾವತಿ, ಮಂಗಳೂರು ಮೂಲದ ಬೆಡಗಿ; ಚಿತ್ರರಂಗಕ್ಕೆ ಬಂದ ಕಥೆಯೇ ರೋಚಕ

ಮಾಂಗಲ್ಯ ಯೋಗ ಕನ್ನಡ ಚಿತ್ರದ ಮೂಲಕ ತಮ್ಮ ನಟನೆಯ ಪಯಣವನ್ನು ಪ್ರಾರಂಭಿಸಿದ್ದ ನಟಿ ಲೀಲಾವತಿ ಅವರು ತಮ್ಮ ಕಾಲದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ಅಂದಿನ ಕಾಲದ ದಿಗ್ಗಜ ನಾಯಕನಟರುಗಳ ಜತೆ ನಟಿಸಿ, ಅಂದಿನ ಮಹಾನ್ ನಾಯಕಿ ಎನಿಸಿಕೊಂಡಿದ್ದರು ನಟಿ ಲೀಲಾವತಿ. ಕನ್ನಡ ಸೇರಿದಂತೆ, ತುಳು, ಮಲಯಾಳಂ, ತಮಿಳು ತೆಲುಗು ಚಿತ್ರರಂಗಗಳಲ್ಲಿ ನಟಿಸಿದ್ದರು ಲೀಲಾವತಿ. ಡಾ ರಾಜ್ ಕುಮಾರ್ ಜತೆ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಅಂದಿನ ಎಲ್ಲ ನಾಯಕರುಗಳ ಜತೆ ನಟಿಸಿದ್ದ ನಟಿ ಲೀಲಾವತಿ ಸಮಾಜಮುಖಿ ಸೇವೆಗೆ ಸಹಾ ಹೆಸರಾಗಿದ್ದವರು. 

ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿ ಹಳೆಯ ಫೋಟೋಸ್ ನೋಡಿ

ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿ ಹಲವರು ಟ್ವೀಟ್ ಮಾಡಿದ್ದಾರೆ, ಕನ್ನಡ ಚಿತ್ರರಂಗದ ಹಿರಿಕಿರಿಯ ನಟನಟಿಯರು ಸೇರಿದಂತೆ, ಪರಭಾಷೆಯ ಚಿತ್ರರಂಗದ ಹಲವಾರು ನಟನಟಿಯರು ಸಂತಾಪ ಸೂಚಿಸಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಮೆಸೇಜ್ ಮಾಡಿದ್ದಾರೆ. ನಟಿ ಲೀಲಾವತಿ ಅವರು 5 ಭಾಷೆಗಳಲ್ಲಿ ನಟಿಸಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿ ಲೀಲಾವತಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

Follow Us:
Download App:
  • android
  • ios