ಪ್ರಭುದೇವ್ ಅವರ ತಂದೆ ನೀಡಿರುವ ಹೇಳಿಕೆಯನ್ನು ನಟಿ ಸುಧಾ ಈಗ ಹೇಳಿ, ಎಲ್ಲರಿಗೂ ದೊಡ್ಡ ಶಾಕ್ ಕೊಟ್ಟಿದ್ದಾರೆ.  

1970ರ ದಶಕದಿಂದ ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಡ್ಯಾನ್ಸ್ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ಮುರುಗಾ ಸುಂದರ್ (Muruga Sundar) ಅವರು ಬಹುತೇಕ ಸ್ಟಾರ್ ನಟರಿಗೆ ನೃತ್ಯ ಹೇಳಿ ಕೊಟ್ಟಿದ್ದಾರೆ. ಸುಂದರಂ ಮಾಸ್ಟರ್ (Sundaram Master) ನೃತ್ಯ ಸಂಯೋಜನೆ ಮಾಡಿದ್ದರೆ, ಆ ಹಾಡು ಪಕ್ಕಾ ಹಿಟ್ ಎಂಬುವುದು ರಿಲೀಸ್‌ ಮುನ್ನವೇ ಎಲ್ಲರಿಗೂ ತಿಳಿದಿರುತ್ತದೆ. ಸುಂದರಂ ಅವರ ಹಾದಿಯಲ್ಲಿ ಅವರ ಪುತ್ರ ಪ್ರಭುದೇವ (Prabhu deva), ರಾಜು ಸುಂದರಂ ಮತ್ತು ನಾಗೇಂದ್ರ ಪ್ರಸಾದ್‌ ಸಹ ನಡೆಯುತ್ತಿದ್ದಾರೆ. 

ತಂದೆಯಷ್ಟೇ ಚಿತ್ರರಂಗದಲ್ಲಿ ಹೆಸರು ಪಡೆದಿರುವ ವ್ಯಕ್ತಿ ಪ್ರಭುದೇವ. ತಂದೆ ನಡೆದ ಹಾದಿಯಲ್ಲಿಯೇ ಸಿಗ್ನೇಚರ್‌ ಸ್ಟೆಪ್‌ಗಳನ್ನು ಈಗಲೂ ಸಿನಿಮಾಗಳಲ್ಲಿ ಬಳಸುತ್ತಾರೆ. ಸುಂದರಂ ಅವರಿಗೆ ವಯಸ್ಸಾಗಿರುವ ಕಾರಣ ಈ ನೃತ್ಯ ಸಂಯೋಜನೆಯಿಂದ ದೂರ ಉಳಿದಿದ್ದಾರೆ. ಆದರೆ ನೂರಾರು ಡ್ಯಾನ್ಸ್‌ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ.

ತಮಿಳು ನಟಿ ಸುಧಾ (Sudha) ಅಭಿನಯಿಸಿರುವ ಸಿನಿಮಾದ ಹಾಡೊಂದನ್ನು ಸುಂದರಂ ಮಾಸ್ಟರ್ ಕೋರಿಯೋಗ್ರಾಫ್ ಮಾಡುತ್ತಿದ್ದರು. ಈ ವೇಳೆ ಸೆಟ್‌ನಲ್ಲಿದ್ದ ನೂರಾರು ಜನರ ಎದುರು ಸುಧಾಗೆ ಅವಮಾನ ಮಾಡಿದ ಘಟನೆ ಈಗ ಬೆಳಕಿಗೆ ಬಂದಿದೆ. ಖಾಸಗಿ ವೆಬ್‌ಸೈಟ್‌ಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ. 

1 ಲಕ್ಷದ ಬ್ಯಾಗ್, 2 ಲಕ್ಷದ ಶೋ; ನಟ SRK ಪುತ್ರಿ ಸುಹಾನಾ ಖಾನ್ ಐಷಾರಾಮಿ ಲುಕ್!

'ಸುಂದರಂ ಮಾಸ್ಟರ್ ಹೇಳಿಕೊಡುತ್ತಿದ್ದ ಡ್ಯಾನ್ಸ್‌ ನನಗೆ ಗೊತ್ತಾಗುತ್ತಿರಲಿಲ್ಲ. ನಾಲ್ಕು ಅಥವಾ ಐದು ಸಲ ನನಗೆ ಹೇಳಿಕೊಟ್ಟರೂ ನಾನು ಕಲಿಯಲು ವಿಫಲವಾಗುತ್ತಿದ್ದೆ. ತಕ್ಷಣವೇ ವೇಶ್ಯಾವಾಟಿಕೆ ಮಾಡಲೂ (Prostitute) ನಿನಗೆ ಯೋಗ್ಯತೆ, ಇಲ್ಲ ಎಂದು ಹೇಳಿಬಿಟ್ಟಿದ್ದರಂತೆ. ಪ್ರಭು ಗಾರು ವಾಸು ಗಾರು...ಎಲ್ಲಾ ದೊಡ್ಡ ವ್ಯಕ್ತಿಗಳು ಸೆಟ್‌ನಲ್ಲಿದ್ದರು. ಎಲ್ಲರ ಎದುರು ಬೈದಿದಕ್ಕೆ ನಾನು ಅಳುವುದಕ್ಕೆ ಶುರು ಮಾಡಿದೆ. ಅಷ್ಟು ದೊಡ್ಡ ಪದಗಳನ್ನು ನಾನು ಎಲ್ಲರ ಎದುರು ಕೇಳಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ನಾನು ಅಳುತ್ತಲೇ ಸೆಟ್‌ನಿಂದ ಹೊರಬಂದೆ. ದೊಡ್ಡ ಕಲಾವಿದರಾಗಲಿ, ಸಣ್ಣ ಕಲಾವಿದರಾಗಲಿ ಈ ರೀತಿ ಮಾತನಾಡುವುದು ದೊಡ್ಡ ತಪ್ಪು,' ಎಂದು ಸುಧಾ ಹೇಳಿದ್ದಾರೆ. 

31 ವರ್ಷಕ್ಕೆ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ ಯುವ ಹಾಸ್ಯ ನಟ!

'ನಾನು ಅಳುತ್ತಲೇ ಮನೆಗೆ ಹೋದೆ ನನ್ನ ತಾಯಿಗೆ ಹೇಳಿದ್ದೇ, ಈ ಸಿನಿಮಾದಲ್ಲಿ ಅವರಿದ್ದರೆ ನಾನು ಸಿನಿಮಾ ಮಾಡುವುದಿಲ್ಲ ಎಂದು. ಆದರೆ ಈ ಸಿನಿಮಾ ಮಾಡಲೇ ಬೇಕು ಎಂದು ನನ್ನ ತಾಯಿ ಹೇಳಿದ್ದರು. ಅವರೇ ಒಂದು ದಿನ ನಿರ್ದೇಶಕರಾದರೆ ನಿನ್ನನ್ನು ಸಿನಿಮಾ ಕೇಳಿಕೊಂಡು ಬರುತ್ತಾರೆ. ಆಗ ನೀನು ನಿನ್ನ ಆ್ಯಕ್ಟಿಂಗ್ ಮೂಲಕವೇ ಉತ್ತರ ಕೊಡಬೇಕು ಎಂದಿದ್ದರು. 6 ವರ್ಷಗಳ ನಂತರ ನನ್ನ ತಾಯಿ ಹೇಳಿದ ಹಾಗೆಯೇ ಅವರು ನಿರ್ದೇಶನ ಮಾಡುವ ಸಿನಿಮಾದಲ್ಲಿ ತಾಯಿ ಪಾತ್ರ ಕೊಟ್ಟರು. ಆಗ ನಾನು ಅವರ ಸುಂದರಂ ಮುಖ ನೋಡಿ ನನ್ನ ತಾಯಿಗೆ ಹೇಳಿದೆ, ಸಿನಿಮಾ ಒಪ್ಪಿಕೊಳ್ಳುವುದಿಲ್ಲ' ಎಂದು ಸುಧಾ ಮಾತನಾಡಿದ್ದಾರೆ. 

'ನಾನು ಸಿನಿಮಾ ಮಾಡುವುದಿಲ್ಲ ಎಂದು ಹೇಳಿದಾಗ, ನನ್ನ ತಾಯಿ ಅವರಿಗೆ ಬೇಸರವಾಗಿರುವುದಕ್ಕೇ ಈ ಸಿನಿಮಾವನ್ನು ನಿನಗೆ ನೀಡುತ್ತಿರುವುದು ಎಂದು. ಆಗ ಸಿನಿಮಾ ಒಪ್ಪಿಕೊಂಡು ಸಹಿ ಮಾಡಿದೆ. ಮೊದಲ ಶಾಟ್ ಅದ್ಭುತವಾಗಿ ಬಂದು, ಆನಂತರ ಎರಡನೇ ಶಾಟ್ ತೆಗೆದುಕೊಂಡೆ. ಅದು ದೊಡ್ಡ ದೊಡ್ಡ ಸಾಲುಗಳಿತ್ತು. ಅದು ಕೂಡ ಚೆನ್ನಾಗಿ ಬಂತು, ಎಂದು ಅಲ್ಲಿದ್ದವರು ಜೋರಾಗಿ ಚಪ್ಪಾಳೆ ತಟ್ಟಿದ್ದರು. ಇದೆಲ್ಲಾ ಆದ ಮೇಲೆ ಸುಂದರಂ ಮಾಸ್ಟರ್ ಬಂದು ನನಗೆ ಸಾರಿ ಕೇಳಿದ್ದರು. ಈ ಸಿನಿಮಾ ನನಗೆ ಒಳ್ಳೆ ಹೆಸರು ಕೂಡ ತಂದು ಕೊಟ್ಟಿತ್ತು,' ಎಂದಿದ್ದಾರೆ ಸುಧಾ.