ಬಾಲಿವುಡ್ (Bollywood) ನಟ, ನಟಿಯರು ಆನ್ ಸ್ಕ್ರೀನ್‌ನಲ್ಲಿ ಬೋಲ್ಡ್ ಸೀನ್, ರೋಮ್ಯಾನ್ಸ್ ಮಾಡೋದ್ರಲ್ಲಿ ಎತ್ತಿದ ಕೈ. ಮಾತ್ರವಲ್ಲ ಬೋಲ್ಡ್ ಹೇಳಿಕೆಗಳ ಮೂಲಕವೇ ಎಲ್ಲೆಡೆ ಸುದ್ದಿಯಾಗುತ್ತಾರೆ. ಸದ್ಯ ಈ ಲಿಸ್ಟ್‌ಗೆ ನಟಿ ಕೀರ್ತಿ ಕುಲ್ಹಾರಿ (Kirti Kulhari) ಸೇರಿದ್ದಾರೆ. ಲೆಸ್ಬಿಯನ್ ಪಾತ್ರ ಮಾಡುತ್ತಿರುವ ಕೀರ್ತಿ ಹುಡುಗಿಯರಿಗೆ ಕಿಸ್ (Kiss) ಮಾಡುವುದು ನನಗೆ ತುಂಬಾ ಇಷ್ಟ ಅಂದಿದ್ದಾರೆ.
ಬಾಲಿವುಡ್ (Bollywood) ನಟಿ ಕೀರ್ತಿ ಕುಲ್ಹಾರಿ, ರಂಗಭೂಮಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ತನ್ನ ಎರಡನೇ ಚಿತ್ರ 2011ರಲ್ಲಿ ಬಿಡುಗಡೆಯಾದ ಶೈತಾನ್ ಚಿತ್ರದ ಮೂಲಕ ಕೀರ್ತಿ ಕುಲ್ಹಾರಿ ಎಲ್ಲರ ಗಮನ ಸೆಳೆದರು. 2016ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಅಭಿನಯದ ಪಿಂಕ್ ಚಿತ್ರದಲ್ಲಿ ತಾಪ್ಸಿ ಪನ್ನು ಜತೆ ಕೀರ್ತಿ ಕುಲ್ಹಾರಿ (Kirti Kulhari) ಅಭಿನವೂ ಎಲ್ಲರ ಗಮನ ಸೆಳೆದಿತ್ತು. ಆ ಬಳಿಕ 2017ರಲ್ಲಿ ಸರ್ಕಾರ್ ಮತ್ತು 2019ರಲ್ಲಿ ಫೋರ್ ಮೋರ್ ಶಾಟ್ಸ್ ಪ್ಲೀಸ್‌ನಂತಹ ವೆಬ್ ಶೋಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಕ್ರಿಮಿನಲ್ ಜಸ್ಟೀಸ್ ಬಿಹೈಂಡ್ ಕ್ಲೋಸ್ಡ್ ಡೋರ್ಸ್‌ನಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕುಲ್ಹಾರಿ ಅವರ ಮುಖ ಪರಿಚಿತ ಮುಖವಾಗಿದೆ. ಇತ್ತೀಚಿನ ಬಿಡುಗಡೆಯು ವಿಪುಲ್ ಶಾ ಅವರ ವೈದ್ಯಕೀಯ ಥ್ರಿಲ್ಲರ್ ಹ್ಯೂಮನ್ ಆನ್ ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ರಿಲೀಸ್ ಆಗಲಿದೆ. ಇದರಲ್ಲಿ ಕೀರ್ತಿ ಕುಲ್ಹಾರಿ ಮಾನವ ಡ್ರಗ್ ಪ್ರಯೋಗಗಳ ಕೆಟ್ಟ ಜಗತ್ತನ್ನು ಬಹಿರಂಗಪಡಿಸುವ ವೈದ್ಯರ ಪಾತ್ರವನ್ನು ನಿರ್ವಹಿಸುತ್ತಾರೆ. ಶೋ ಅವರ ಪಾತ್ರದ ಬಗ್ಗೆ ಸ್ವತಃ ನಟಿಯೇ ಮಾತನಾಡಿದ್ದಾರೆ.
ಬೇಕು ಬೇಕೆಂದೇ ಬೋಲ್ಡ್ ಸೀನ್ ಸೇರಿಸ್ತಾರೆ ಎಂದ 'ನಿನಗಾಗಿ' ನಟಿ ಎರಿಕಾ
ಒಟಿಟಿಯಲ್ಲಿ ರಿಲೀಸ್ ಆಗಲಿರುವ ವಿಪುಲ್ ಶಾ ನಿರ್ಮಾಣದ ‘ಹ್ಯೂಮನ್’ ವೆಬ್ ಸಿರೀಸ್ (Web Series)ನಲ್ಲಿ ಕೀರ್ತಿ ಕುಲ್ಹಾರಿ ನಟಿಸುತ್ತಿದ್ದಾರೆ. ಇದರಲ್ಲಿ ಡಾ.ಸೈರಾ ಸಬರ್ವಾಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆರಿಯರ್‌ನಲ್ಲಿ ಫಸ್ಟ್ ಟೈಂ ಲೆಸ್ಬಿಯನ್ ಪಾತ್ರದಲ್ಲಿ ನಟಿಸುತ್ತಿರುವ ಪ್ರಶ್ನೆಗೆ ಅವರು ಉತ್ತರಿಸಿದರು. ಶೆಫಾಲಿ ಶಾ ಜೊತೆಗೆ ನಟಿಸುವಾಗ ಆನ್-ಸ್ಕ್ರೀನ್ ಕಿಸ್ ಬಗ್ಗೆ ನೀವು ಆತಂಕಗೊಂಡಿದ್ದಿರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಕೀರ್ತಿ ಕುಲ್ಹಾರಿ ಇದಕ್ಕೆ ಬೋಲ್ಡ್ (Bold) ಉತ್ತರ ನೀಡಿದ್ದಾರೆ.
ತೆರೆಯ ಮೇಲೆ ಕಿಸ್ ಮಾಡುವ ವಿಚಾರದಲ್ಲಿ ನಾನು ತುಂಬಾ ಆರಾಮದಾಯಕವಾಗಿದ್ದೇನೆ. ಲೈಂಗಿಕತೆಯ ಬಗ್ಗೆ ನನಗೆ ಯಾವುದೇ ರೀತಿಯ ಮುಚ್ಚುಮರೆಯಿಲ್ಲ. ನಾವು ನಮ್ಮ ದೇಹದ ಬಗ್ಗೆ ಎಷ್ಟು ಕಾನ್ಫಿಡೆಂಟ್ ಆಗಿದ್ದೇವೆ ಎಂಬುದು ನಾವು ಎಷ್ಟು ಕಂಫರ್ಟೆಬಲ್ ಆಗಿರಲು ಸಾಧ್ಯ ಎಂಬುದನ್ನು ಸೂಚಿಸುತ್ತದೆ. ನನಗೆ ನನ್ನ ದೇಹದ ಬಗ್ಗೆ ಹೆಮ್ಮೆಯಿದೆ. ಹೀಗಾಗಿ ತೆರೆಯ ಮೇಲೆ ರೋಮ್ಯಾನ್ಸ್ ಮಾಡಲು ಯಾವುದೇ ಹಿಂಜರಿಕೆಯಿಲ್ಲ ಎಂದು ಕೀರ್ತಿ ಕುಲ್ಹಾರಿ ಹೇಳಿದ್ದಾರೆ.
ರೇಖಾ-ರಾಧಿಕಾ ಆಪ್ಟೆ: ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಾಲಿವುಡ್‌ನ ಬೋಲ್ಡ್ ನಟಿಯರು
ಈ ಹಿಂದೆಯೂ ನಾನು ಮಹಿಳೆಯರೊಂದಿಗೆ ತೆರೆಯಲ್ಲಿ ರೋಮ್ಯಾನ್ಸ್ ಮಾಡಿದ್ದೇನೆ. ಶೈತಾನ್‌ನಲ್ಲಿ ಕಲ್ಕಿ ಕೊಚ್ಲಿನ್ ಅವರೊಂದಿಗೆ ಕಿಸ್ ಶೇರ್ ಮಾಡಿದ್ದೇನೆ. ಅದು ಸರಿಯಾದ ಕಿಸ್ ಆಗಿತ್ತು. ಅದನ್ನು ನಾವು ಚೆನ್ನಾಗಿ ಆಸ್ವಾದಿಸಿದೆವು. ಆದರೆ ನನಗೆ ನಾನು ಈ ಅನುಭವದಲ್ಲಿ ಮೈ ಮರೆತರೆ ಏನಾಗಬಹುದು ಎಂಬ ಚಿಂತೆ ಮೂಡಿತ್ತು ಎಂದು ಹೇಳಿದರು. ಮೊದಲ ಬಾರಿಗೆ ಮಹಿಳೆಗೆ ಕಿಸ್ ಮಾಡಬೇಕು ಎಂದಾಗ ಸ್ಪಲ್ಪ ಭಯವೆನಿಸಿದ್ದು ನಿಜ. ಆದರೆ ಮುಜುಗರವಾಗಲ್ಲಿಲ್ಲ. ನಂತರ ಅದುವೇ ಅಭ್ಯಾಸವಾಗಿ ಹೋಯಿತು. ಕಿಸ್ ಸೀನ್ (Kiss Scene) ಬಂದಾಗ ಇದು ಜಸ್ಟ್ ಇನ್ನೊಂದು ಸೀನ್ ಎಂಬುದಷ್ಟೇ ಮನಸ್ಸಿಗೆ ಬರಲು ಶುರುವಾಯಿತು.
ಲೆಸ್ಬಿಯನ್ ಪಾತ್ರ ಮಾಡುವ ಕುರಿತಾಗಿ ಮಾತನಾಡಿದ ನಟಿ ಕೀರ್ತಿ ಕುಲ್ಹಾರಿ, ಇಂಥಾ ಪಾತ್ರವನ್ನು ಮಾಡಲು ನನಗೆ ಯಾವುದೇ ರೀತಿಯ ಹಿಂಜರಿಕೆಯಿಲ್ಲ ಎಂದು ಹೇಳಿದರು. ನಾನು ಈ ಪಾತ್ರವನ್ನು ಇನ್ನಷ್ಟು ಮಾಡಲು ಬಯಸುತ್ತೇನೆ. ಸ್ಕ್ರಿಪ್ಟ್‌ನಲ್ಲಿ ನಾನು ಈ ಪಾತ್ರವನ್ನು ಮಾಡುತ್ತಿರುವುದನ್ನು ತಿಳಿದು ಖುಷಿಪಟ್ಟೆ. ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸಲು ನಾನು ತುಂಬಾ ಉತ್ಸುಕಳಾಗಿದ್ದೆ. ನನಗೆ ಅವಳು ಕೇವಲ ಸಲಿಂಗಕಾಮಿ ಅಲ್ಲ ಆದರೆ ನಿಕಟ ಸಲಿಂಗಕಾಮಿ ಎಂಬ ಅಂಶವು ತುಂಬಾ ಆಸಕ್ತಿದಾಯಕವಾಗಿತ್ತು ಎಂದರು.
ಚಿತ್ರದಲ್ಲಿ ಒಬ್ಬ ನಟಿಯಾಗಿ ನಾನು ಪ್ರತಿನಿಧಿಸುತ್ತಿರುವ ಜನರು ಅಥವಾ ಸಮುದಾಯವನ್ನು ಸರಿಯಾಗಿ ಪ್ರಸ್ತುತ ಪಡಿಸುವುದು ನನ್ನ ಜವಾಬ್ದಾರಿಯಾಗಿದೆ. ಈ ಪಾತ್ರವನ್ನು ನಿರ್ವಹಿಸಲು ನನಗೆ ಸಂತೋಷವಾಗಿದೆ. ಎಂದು ನಟಿ ಕೀರ್ತಿ ಕುಲ್ಹಾರಿ ತಿಳಿಸಿದರು.
