ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಭರ್ಜರಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಲೈಗರ್ ಹೀನಾಯ ಸೋಲಿನ ಬಳಿಕ ವಿಜಯ್ ದೇವರಕೊಂಡ ಖಾಕಿ ಧರಿಸಿದ್ದಾರೆ.
ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಭರ್ಜರಿ ಕಮ್ ಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ. ಲೈಗರ್ ಸೋಲಿನಿಂದ ಕಂಗೆಟ್ಟಿದ್ದ ವಿಜಯ್ ದೇವರಕೊಂಡ ಇದೀಗ ಖಾಕಿ ಧರಿಸಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಲೈಗರ್ ಹೀನಾಯ ಸೋಲಿನ ಬಳಿಕ ವಿಜಯ್ ದೇವರಕೊಂಡ ಯಾವುದೇ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಇದೀಗ ಅನೇಕ ಸಮಯದ ನಂತರ ಹೊಸ ಸಿನಿಮಾ ಘೋಷಣೆ ಮಾಡಿದ್ದು ಫಸ್ಟ್ ಲುಕ್ ಪೋಸ್ಟರ್ ಶೇರ್ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ ವಿಜಯ್ ದೇವರಕೊಂಡ.
ವಿಜಯ್ ಮುಂದಿನ ಸಿನಿಮಾಗೆ ಜೆರ್ಸಿ ಖ್ಯಾತಿಯ ನಿರ್ದೇಶಕ ಗೊತಮ್ ತಿನ್ನೌರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯ VD12 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪೋಸ್ಟರ್ ಅನ್ನು ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚಿತ್ರದ ಕಥೆ ಕೇಳಿ ತನ್ನ ಹೃದಯ ಬಡಿತ ಹೆಚ್ಚಾಯಿತು ಎಂದು ಹೇಳಿದ್ದಾರೆ. 'ನನ್ನ ಮುಂದಿನ ತಂಡ, ಸ್ಕ್ರಿಪ್ಟ್. ಇದನ್ನು ಕೇಳಿದಾಗ ನನ್ನ ಹೃದಯ ಬಡಿತ ಹೆಚ್ಚಿತು' ಎಂದು ಹೇಳಿದ್ದಾರೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಅವರ ಮುಖ ದರ್ಶನ ಆಗಿಲ್ಲ. ಖಾಕಿ ಧರಿಸಿ ಮುಖಕ್ಕೆ ಮಾಸ್ಕ್ ಧರಿಸಲಾಗಿದೆ. ಪೋಸ್ಟರ್ ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ ಇದು ಯಾವುದೋ ಗಲಬೆ, ಪ್ರತಿಭಟನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪೋಸ್ಟರ್ ನೋಡಿ ಅಭಿಮಾನಿಗಳು ಭರ್ಜರಿ ಕಮ್ ಬ್ಯಾಕ್ ಎನ್ನುತ್ತಿದ್ದಾರೆ. ವಿಜಯ್ ದೋವರಕೊಂಡ ಅವರನ್ನು ಮತ್ತೆ ನೋಡಿ ಖುಷಿ ಆಯಿತು ಎನ್ನುತ್ತಿದ್ದಾರೆ.
liger; ಅಕ್ರಮ ಹಣ ವರ್ಗಾವಣೆ ಆರೋಪ: ವಿಜಯ್ ದೇವರಕೊಂಡಗೆ ED ಡ್ರಿಲ್
ನಿರ್ದೇಶಕ ಗೌತಮ್ ಮೇಲು ನಿರೀಕ್ಷೆ ಹೆಚ್ಚಿದೆ. ಜೆರ್ಸಿ ಅಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ಗೌತಮ್ ಮುಂದಿನ ಸಿನಿಮಾ ಹೇಗಿರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗೌತಮ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ವರ್ಕೌಟ್ ಆಗುತ್ತಾ ಎಂದು ಕಾದು ನೋಡಬೇಕಿದೆ.
ಹೊಸ ವರ್ಷಕ್ಕೆ ವಿಶ್ ಮಾಡಿ ತಗಲಾಕೊಂಡ ವಿಜಯ್ ದೇವರಕೊಂಡ; ರಶ್ಮಿಕಾ ಜೊತೆ ಇದ್ರಾ ಎಂದು ಕಾಲೆಳೆದ ನೆಟ್ಟಿಗರು
ಪುರಿ ಜಗನ್ನಾಥ್ ಜೊತೆ JGM ಸಿನಿಮಾಗೆ ಬ್ರೇಕ್
ವಿಜಯ್ ದೇವರಕೊಂಡ ಲೈಗರ್ ರಿಲೀಸ್‌ಗೂ ಮುನ್ನವೇ ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಮತ್ತೊಂದು ಸಿನಿಮಾಗೆ ಗ್ರೀನಿ ಸಿಗ್ನಲ್ ನೀಡಿದ್ದರು. JGM (ಜನ ಗಣ ಮನ) ಹೆಸರಿನಲ್ಲಿ ಸಿನಿಮಾ ಅನೌನ್ಸ್ ಮಾಡಿ ಶೂಟಿಂಗ್ ಕೂಡ ಪ್ರಾರಂಭಿಸಿದ್ದರು. ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು. ಆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಲೈಗರ್ ಹೀನಿಯಾ ಸೋಲಿನ ಕಾರಣ JGM ಸಿನಿಮಾಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಎನ್ನಲಾಗಿದೆ. ಒಂದಿಷ್ಟು ಬದಾಲವಣೆಯ ಬಳಿಕ JGM ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ ವಿಜಯ್ ದೇವರಕೊಂಡ ಪೊಲೀಸ್ ಆಗಿ ಅಭಿಮಾನಿಗಳ ಮುಂದೆ ಬರಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
